Monday, April 21, 2025

Latest Posts

2 ವರ್ಷಗಳಲ್ಲಿ 6ಜಿ ಸೇವೆ ಆರಂಭ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

- Advertisement -

ನವದೆಹಲಿಮುಂದಿನ 2 ವರ್ಷಗಳಲ್ಲಿ ಅಂದರೆ 2023ರ ಅಂತ್ಯ ಅಥವಾ 2024ರ ಆರಂಭದಲ್ಲಿ ದೇಶದಲ್ಲಿ 6ಜಿ ಸೇವೆ ಆರಂಭವಾಗುತ್ತದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ದೇಶದಲ್ಲಿ ಇನ್ನೂ 5G ಸೇವೆಯೇ ಇನ್ನೂ ಆರಂಭಗೊಂಡಿಲ್ಲ. ಅದಾಗಲೇ ಕೇಂದ್ರ ಸರ್ಕಾರ 6ಜಿ ಸೇವೆಯನ್ನು ಆರಂಭಿಸಲು ಚಿಂತನೆಯಲ್ಲಿ ತೊಡಗಿದೆ. ಅಂತೆಯೇ 5G ಕುರಿತು ಮಾತನಾಡಿದ ಕೇಂದ್ರ ಸಚಿವರು, 2022ರ 2ನೇ ತ್ರೈಮಾಸಿಕದಲ್ಲಿ ಐದನೇ ತಲೆಮಾರಿನ ತರಂಗಾಂತರಗಳನ್ನು ಹರಾಜು ಮಾಡುವ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.  ಮೂಲಗಳ ಪ್ರಕಾರ, ‘ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್-ಐಡಿಯಾಗಳಿಗೆ ದೇಶದಲ್ಲಿ 5G ಪ್ರಯೋಗಗಳಿಗಾಗಿ ಸ್ಪೆಕ್ಟ್ರಮ್ ನೀಡಲಾಗಿದೆ. ಈ ಸಮಯದಲ್ಲಿ ಜಿಯೋ ಮತ್ತು ಏರ್ ಟೆಲ್ ಸುಮಾರು 1ಜಿಬಿ/ಸೆಕೆಂಡ್ ಗರಿಷ್ಠ 5G ವೇಗವನ್ನು ದಾಖಲಿಸಿದೆ. ಮತ್ತೊಂದೆಡೆ, 5G ಪ್ರಯೋಗದ ಸಮಯದಲ್ಲಿ ವೋಡಾಫೋನ್-ಐಡಿಯಾ ಗರಿಷ್ಠ 3.5ಜಿಬಿ/ಸೆಕೆಂಡ್ ವೇಗವನ್ನು ಸಾಧಿಸಿದೆ.

- Advertisement -

Latest Posts

Don't Miss