- Advertisement -
ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ರಾಜಿನಾಮೆ ನೀಡಿದ್ದೇ ನೀಡಿದ್ದು, ಅಭಿಮಾನಿಗಳು ಮತ್ತು ಕ್ರಿಕೆಟ್ ಲೋಕದಲ್ಲಿ ಬೇಜಾರದ ಸಂಗತಿಯಾದರೆ ಇನ್ನೊಂದೆಡೆ ಚರ್ಚೆಯಾಗುತ್ತಿದೆ. ಹಾಗೆಯೇ ಭಾರತ ಕಂಡ ಅತ್ಯಂತ ಯಶಸ್ವಿ ಟೆಸ್ಟ್ ಕ್ರಿಕೆಟ್ ನಾಯಕನೊಬ್ಬ, ಹೀಗೆ ಇದ್ದಕ್ಕಿದ್ದಂತೆ ತನ್ನ ಸ್ಥಾನವನ್ನು ತ್ಯಜಿಸಿದ್ದಕ್ಕೆ ಪ್ರತಿಯೊಬ್ಬ ಅಭಿಮಾನಿಯೂ ಸಹ ಆಶ್ಚರ್ಯಕ್ಕೊಳಗಾಗಿದ್ದಾನೆ. ಇಂತಹ ನಾಯಕ ದಿಢೀರ್ ಎಂದು ನಾಯಕತ್ವ ಬಿಟ್ಟುಕೊಟ್ಟಿದ್ದಕ್ಕೆ ಅನೇಕ ಕ್ರಿಕೆಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ,
ಆದರೆ ಮಾಜಿ ನಾಯಕ ಗೌತಮ್ ಗಂಭೀರ್ ನಾಯಕತ್ವ ಯಾರ ಜನ್ಮಸಿದ್ದ ಹಕ್ಕುಅಲ್ಲ ಎಂದಿದ್ದಾರೆ, ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ
ಅವರ ಬ್ಯಾಟಿಂಗ್‌ನಲ್ಲಿ ಏನಾದರೂ ಬದಲಾವಣೆ ಆಗಲಿದ್ಯಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಗೌತಮ್ ಗಂಭೀರ್, ಕೊಹ್ಲಿ ರನ್‌ಗಳಿಸಲು ಎದುರು ನೋಡುತ್ತಿರಬೇಕು ನಾಯಕತ್ವವು ಯಾರ ಜನ್ಮ ಸಿದ್ದ ಹಕ್ಕು ಅಲ್ಲ ಎಂದಿದ್ದಾರೆ.
- Advertisement -