Political News: ಮಾಜಿ ಸಂಸದ ಪಕ್ಕಾ ಹಿಂದೂವಾದಿ ಅನ್ನೋದು ನಮಗೆ ತಿಳಿದಿದೆ. ಆದರೆ ಚಾನೆಲ್ 1ರಲ್ಲಿ ಡಿಬೇಟ್ ಮಾಡುವಾಗ ಅವರು ಹಿಂದೂಗಳ ದರಿದ್ರ ಮನಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ.
ಕ್ರಿಶ್ಚಿಯನ್ನರು ಭಾನುವಾರ ಚರ್ಚ್ಗೆ ಹೋಗುತ್ತಾರೆ. ಮುಸ್ಲಿಂಮರು ಶುಕ್ರವಾರ ಮಸೀದಿಗೆ ಹೋಗುತ್ತಾರೆ. ಆದರೆ ಹಿಂದೂಗಳು ಕಷ್ಟ ಬಂದಾಗ ಮಾತ್ರ ದೇವಸ್ಥಾನಕ್ಕೆ ಹೋಗುತ್ತಾರೆ. ಹಿಂದೂಗಳಲ್ಲಿ ಇದು 1 ದರಿದ್ರ ಮನಸ್ಥಿತಿ ಇದೆ. ಇದನ್ನು ನಾವು ಬಿಡಬೇಕು. ನಾನು ಕ್ರಿಶ್ಚಿಯನ್-ಮುಸ್ಲಿಂರನ್ನು ನೋಡಿ ಇದನ್ನು ಕಲಿಯಬೇಕು. ಈ ವಿಷಯದಲ್ಲಿ ನಾವು ಅವರನ್ನು ಅಪ್ರಿಶಿಯೇಟ್ ಮಾಡುತ್ತೇನೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಅಲ್ಲದೇ ವರ್ಷಕ್ಕೆ 1 ಸಲ ಅಥವಾ 2 ಸಲವೋ ಗಣೇಶೋತ್ಸವ, ದುರ್ಗಾ ಪೂಜೆ, ಹನುಮ ಜಯಂತಿ ನಡೆಯುತ್ತದೆ. ಆದರೆ ನೀವು ವರ್ಷದ 365 ದಿನ ಅಲ್ಲಾನನ್ನು ಬಿಟ್ಟರೆ ದೇವರಿಲ್ಲ ದೇವರಿಲ್ಲ ಅಂತೀರಿ. ನಾವು ಕೇಳಿಸಿಕ“ಳ್ಳುತ್ತಲೇ ಇದ್ದೇವೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಮಂಡ್ಯದ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಗಲಭೆ ಬಗ್ಗೆ ಮಾತನಾಡುವಾಗ, ಪ್ರತಾಪ ಸಿಂಹ ಹೀಗೆ ಮಾತನಾಡಿದ್ದಾರೆ. ಮಸೀದಿ ಮುಂದಿನಿಂದಲೇ ಗಣೇಶ ವಿಸರ್ಜನೆ ಮಾಡಿದ್ದಕ್ಕೆ ಕಿರಿಕ್ ಮಾಡಿದ ಕಾರಣಕ್ಕೆ, ಪ್ರತಾಪ್ ಸಿಂಹ ಈ ಮಾತನ್ನು ಹೇಳಿದ್ದಾರೆ.




