Hubballi Political News: ಹುಬ್ಬಳ್ಳಿ: ಪಂಚರಾಜ್ಯ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆ ಮುನ್ನುಡಿ ಎಂದು ಹುಬ್ಬಳ್ಳಿಯಲ್ಲಿ, ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.
ಪಂಚರಾಜ್ಯ ಚುನಾವಣೆಯಲ್ಲಿ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‌ಘಡದಲ್ಲಿ ಬಿಜೆಪಿ ಗೆದಿದ್ದಕ್ಕೆ, ಇಂದಿರಾ ಗಾಜಿನ ಮನೆಯ ಆವರಣದಲ್ಲಿ ಮಹೇಶ್ ಟೆಂಗಿನಕಾಯಿ ಮತ್ತು ಬೆಂಬಲಿಗರು ಸಂಭ್ರಮಿಸಿದ್ದಾರೆ. ಅಲ್ಲದೇ ಪ್ರಧಾನಿ ಮೋದಿ, ಪ್ರಹ್ಲಾದ್ ಜೋಶಿ ಪರ ಘೋಷಣೆ ಕೂಗಿದ್ದಾರೆ.
ಸೆಮಿಫೈನಲ್ಸ್ ಮ್ಯಾಚ್‌ನಲ್ಲಿ ನಾವು ಗೆದ್ದಿದ್ದೇವೆ. ಕಾಂಗ್ರೆಸ್ ಬಿಟ್ಟಿ ಭಾಗ್ಯಗಳ ಆಸೆಯನ್ನು ಮೀರಿ ಜನ ಬಿಜೆಪಿ ಕೈ ಹಿಡಿದಿದ್ದಾರೆ. ಇದು ಲೋಕಸಭಾ ಚುನಾವಣಾ ಮುನ್ನುಡಿ. ಪ್ರಧಾನಿ ಮೋದಿ ನಾಯಕತ್ವವನ್ನು ದೇಶದ ಜನತೆ ಮತ್ತೊಮ್ಮೆ ಒಪ್ಪಿದೆ. ಆದರೆ ಕಾಂಗ್ರೆಸ್ ಇದ್ದ ಎರಡು ದೊಡ್ಡ ರಾಜ್ಯಗಳನ್ನು ಕಳೆದುಕೊಂಡಿದೆ. ತೆಲಂಗಾಣದಲ್ಲಿಯೂ ಸಹ ಒಂದು ಸ್ಥಾನದಿಂದ ಹತ್ತು ಸ್ಥಾನಕ್ಕೆ ಬಿಜೆಪಿ ಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ತೆಲಂಗಾಣದಲ್ಲಿ ಬಿಜೆಪಿ ಗೆಲ್ಲುವ ಭರವಸೆಯಿದೆ. ಕರ್ನಾಟಕದ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ತೆಲಂಗಾಣದಲ್ಲಿ ಪರಿಣಾಮ ಬೀರಿವೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವಿನ ಜಯಭೇರಿ: ಶಿವರಾಜ್ ಸಿಂಗ್ ಚೌಹಾಣ್‌ರನ್ನು ಭೇಟಿಯಾದ ಸಿಂಧ್ಯಾ..
‘ಕಾಂಗ್ರೆಸ್ ನಲ್ಲಿ ಪೊಲ್ಯೂಷನ್ ಜಾಸ್ತಿಯಾಗಿದೆ. ಪಾರಿವಾಳಗಳು ಹಾರಿ ಹೋಗುವ ಕಾಲ ಬರ್ತಿದೆ’