Friday, April 25, 2025

Latest Posts

ಸಾಲ ಪಡೆದವರಿಗೆ ಕಿರಿಕರಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು- ಲಾಡ್ ಖಡಕ್ ಎಚ್ಚರಿಕೆ

- Advertisement -

Dharwad News: ಸಾಲ ಪಡೆದವರಿಗೆ ಮೈಕ್ರೋ ಫೈನಾನ್ಸ ಕಿರಿಕಿರಿಯ ಕುರಿತು ಈಗಾಗಲೇ ನಾನು ಪೋಲಿಸರಿಗೆ ಹೇಳಿದ್ದೆನೆ. ಅಂತಹ ಪ್ರಕರಣಗಳನ್ನ ಗಂಭಿರವಾಗಿ ಪರಿಗಣಿಸಲು ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ. ಸಾಲ ಪಡೆದವರಿಗೆ ಕಿರಿಕರಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಧಾರವಾಡದಲ್ಲಿ ದಚಿವ ಸಂತೋಷ ಲಾಡ್ ಖಡಕ್ ಎಚ್ಚರಿಕೆ ನೀಡಿದರು.

ಧಾರವಾಡದ ಆರ್ ಶೆಟ್ಟಿ ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋತ್ಸವದಲ್ಲಿ ಭಾಗಿಯಾದ ಬಳಿಕ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಮೈಕ್ರೋ ಫೈನಾನ್ಸ್ ಕಿರಿಕಿರಿ ದೂರುಗಳನ್ನ ಸಿರಿಯಸ್ ಆಗಿ ಕನ್ಸಿಡರ್ ಮಾಡಲು ಹೇಳಲಾಗಿದೆ.‌ ಜಿಲ್ಲೆಯ ಎಲ್ಲ ಪೈನಾನ್ಸ್ ರಗಳಿಗೆ ತಾಕಿತು ಮಾಡುತ್ತೆನೆ. ಯಾರಿಗಾದರೂ ಕಿರಿಕಿರಿ ನೀಡಿದ ದೂರು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಚ್ಚರಿಕೆಯಿಂದ ಇರಬೇಕು.

ಜತೆಗೆ ಇಂತಹ ಪ್ರಕರಣಗಳಲ್ಲಿ ಎಲ್ಲವೂ ಒಳ ಒಪ್ಪಂದಗಳು ಮಾಡಿಕ್ಕೊಳ್ಳುತ್ತಾರೆ, ಜಿಲ್ಲಾಡಳಿತಕ್ಕೆ ಸದ್ಯ ಯಾವುದು ಮಾಹಿತಿ ಇಲ್ಲ. ದೂರುಗಳು ಬಯಲಿಗೆ ಬಂದಾಗ ಜಿಲ್ಲಾಡಳಿತಕ್ಕೆ ಗೊತ್ತಾಗುತ್ತೆ‌. ಕಳೆದ ದಿನ ಅಳ್ನಾವಾರ ತಾಲೂಕಿನ ಅರವಟಗಿಯಲ್ಲಿ ಗರ್ಭಿಣಿ ಮಹಿಳೆಯನ್ನ ಮನೆಯಿಂದ ಹೊರ ಹಾಕಿದ ವಿಚಾರಕ್ಕೆ ಪ್ರತಿಕ್ರೆಯಿಸಿ, ಆ ಮನೆಯನ್ನ ಪೈನಾನ್ಸ್ ನವರು ಕೋರ್ಟ ನಲ್ಲಿ ಆರ್ಡರ್ ಮಾಡಿಕೊಂಡಿದ್ದಾರೆ. ಮನೆ ಜಪ್ತಿ ಮಾಡಲು ಕೋರ್ಟ ಆರ್ಡರ್ ಆಗಿದೆ. ಅದಕ್ಕೆ ಆ ಪೈನಾನ್ಸ್ ನವರು ಅವರನ್ನ ಮನೆಯಿಂದ ಹೊರ ಹಾಕಿದ್ದಾರೆ‌. ಬಡ್ಡಿ ವ್ಯವಹಾರ, ಗ‌್ಯಾಬ್ಲಿಂಗ್, ಕ್ರಿಕೇಟ್ ಬೆಟ್ಟಿಂಗನಂತಹ ದಂಧೆಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಹೇಳಿದರು.

- Advertisement -

Latest Posts

Don't Miss