Hassan News: ಹಾಸನ :ಹಾಸನದಲ್ಲಿ ಚಿರತೆಯೊಂದು ಆಹಾರ ಅರಸಿ ಮನೆಯ ಬಳಿ ಬಂದ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ, ಜಾವಗಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ನಿನ್ನೆ ರಾತ್ರಿ 8.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಇಂದ್ರೇಶ್ ಎಂಬುವರ ಮನೆಗೆ ಚಿರತೆ ಬಂದಿದೆ. ಚಿರತೆಯನ್ನು ಕಂಡು ಮಹಿಳೆ ಗಾಬರಿಯಿಂದ ಕೂಗಾಡಿದ್ದಾರೆ. ಮಹಿಳೆಯ ಕೂಗು ಕೇಳಿ, ಚಿರತೆ ಓಡಿ ಹೋಗಿದೆ. ಚಿರತೆ ಬಂದು ಓಡಿ ಹೋದ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಕೂಡಲೇ ಬೋನು ಇಟ್ಟು ಈ ಚಿರತೆಯನ್ನು ಸೆರೆ ಹಿಡಿಯಬೇಕೆಂದು ಆಗ್ರಹಿಸಲಾಗಿದೆ.
ಇನ್ನೊಂದೆಡೆ ಹಾಸನದ ಕುವೆಂಪುನಗರದಲ್ಲಿ ಮಳೆ ಗಾಳಿಗೆ ಬೃಹತ್ ಗಾತ್ರದ ಮರ ಉರುಳಿ ಬಿದ್ದು, ಮನೆ ಮುಂದೆ ನಿಲ್ಲಿಸಿದ್ದ ಕಾರು ಸಂಪೂರ್ಣ ಜಖಂಗೊಂಡಿದೆ. ರಾಕೇಶ್ ಎಂಬುವರಿಗೆ ಸೇರಿದ ಕಾರು ಇದಾಗಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಇನ್ನು ಕಾರು ಜಖಂ ಆಗಲು ಕಾರಣವೇನಂದ್ರೆ, ಕಾರನ್ನು ಮರದ ಕೆಳಗೆ ಪಾರ್ಕ್ ಮಾಡಲಾಗಿತ್ತು. ಇನ್ನು ಸ್ಥಳಕ್ಕೆ ನಗರಸಭೆ ಸಿಬ್ಬಂದಿ ಭೇಟಿ ಕೊಟ್ಟು, ಮರ ತೆರವುಗೊಳಿಸಿದ್ದಾರೆ.
ಹಾಸನದ ಪ್ರತಿಷ್ಠಿತ ಎಸ್.ಎಂ.ಕೃಷ್ಣ ನಗರ ಬಡಾವಣೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಕರೆಂಟ್ ಇಲ್ಲ.
ಬೀದಿ ದೀಪವೂ ಇಲ್ಲ.. ಮನೆ ಲೈಟ್ ಹತ್ತುತ್ತಿಲ್ಲ.. ಕುಡಿಯೋಕೆ ನೀರಿಲ್ಲ. ಲಕ್ಷ ಲಕ್ಷ ಹಣ ಕಟ್ಟಿಸಿಕೊಳ್ತಾರೆ ಕನಿಷ್ಟ ಮೂಲಭೂತ ಸೌಲಭ್ಯ ಕಲ್ಪಿಸುತ್ತಿಲ್ಲ. ನಮ್ಮ ಮನೆಗಳನ್ನು ಹುಡಾದವರೇ ಖರೀದಿ ಮಾಡಿ ನಮ್ಮನ್ನು ಹೊರಗೆ ಕಳುಹಿಸಿ ಬಿಡಿ ಎಂದು ಎಷ್ಟೇ ದೂರು ನೀಡಿದ್ರೂ ಕ್ಯಾರೆ ಎನ್ನದ ಅಧಿಕಾರಿಗಳಿಗೆ ಹಾಗೂ ಹಾಸನ ನಗರ ಪ್ರಾಧಿಕಾರ ಆಯುಕ್ತರಾದ ರಮೇಶ್ ಅವರಿಗೆ ಸ್ಥಳೀಯರು ತರಾಟೆ ತೆಗೆದುಕೊಂಡಿದ್ದಾರೆ.