Hassan News: ಹಾಸನ : ಯಾರೋ ಗಿರಾಕಿಗಳು ಅಧಿಕಾರಿಗಳಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿರುವ ಹೆಚ್.ಡಿ. ರೇವಣ್ಣನವರು ಆರೋಪಿ ಯಾರೆಂದು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ತು ಪರಾಜಿತ ಅಭ್ಯರ್ಥಿ ಶ್ರೇಯಸ ಪಟೇಲ್ ಆಗ್ರಹಿಸಿ ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ಶಾಂತಿಗ್ರಾಮ ಉಪತಹಶೀಲ್ದಾರರ ಮತ್ತು ಆರ್‌ಐ ಅವರ ಬಳಿ ಯಾರೋ ಗಿರಾಕಿಗಳು, ಮದ್ಯವರ್ತಿಗಳು, ದಲ್ಲಾಳಿಗಳು ನಾಲ್ಕು ಲಕ್ಷ ಹಣ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ರೀತಿಯ ಅಧಾರವಿಲ್ಲದೆ ಆರೋಪ ಮಾಡಿರುವ ರೇವಣ್ಣ ಅವರು ಲಂಚ ಪಡೆದಿರುವ ಆರೋಪಿ ಯಾರೆಂದು ಬಹಿರಂಗವಾಗಿ ಹೇಳಬೇಕು ಎಂದು ಸವಾಲು ಹಾಕಿದರು.
ರೇವಣ್ಣ ಅವರು ಹಿರಿಯರಿದ್ದಾರೆ, ಅವರ ಮೇಲೆ ಗೌರವ ಇದ್ದ ಕಾರಣ ಇಷ್ಟು ದಿನ ಏನನ್ನು ಮಾತನಾಡದೆ ಸುಮ್ಮನೆ ಇದ್ದೆವು. ಅವರು ಅಧಿಕಾರಿಗಳ ಬಳಿ ಮದ್ಯವರ್ತಿಗಳಿ, ಗಿರಾಕಿಗಳು ನಾಲ್ಕು ಲಕ್ಷ ಹಣ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅವರಿಗೆ ಆತ್ಮಸಾಕ್ಷಿ ಇದ್ದರೆ ಅವರು ಇದುವರೆಗೂ ಯಾರ ಬಳಿಯು ಲಂಚ ಪಡದೇ ಇಲ್ಲ, ಭ್ರಷ್ಟಚಾರ ಮಾಡಿಲ್ಲ, ಅಧಿಕಾರಿಗಳಿಗೆ ಧಮ್ಕಿ ಹಾಕಿಲ್ಲ, ಸರ್ಕಾರಿ ಹಣವನ್ನು ಲೂಟಿ ಹೊಡೆದಿಲ್ಲ, ಸುಳ್ಳು ಬಿಲ್ ಮಾಡಿಸಿಕೊಂಡಿಲ್ಲ, ಮತ್ತು ಅಧಿಕಾರಿಗಳ ಬಳಿ ಲಂಚ ಪಡೆದಿರುವ ಆ ಗಿರಾಕಿಗಳು ಯಾರೆಂದ ಹೊಳೇನರಸೀಪುರ ಕ್ಷೇತ್ರದಲ್ಲಿ ಗ್ರಾಮದೇವತೆ ಲಕ್ಷ್ಮಿನರಸಿಂಹ ದೇವಾಲಯದ ಬಳಿ ಬಂದು ಬಹಿರಂಗಪಡಿಸಿ ಪ್ರಮಾಣ ಮಾಡಲಿ, ನಾನು ಹೋಗುತ್ತೇನೆ ಎಂದು ಟಾಂಗ್ ನೀಡಿದರು.
ಪ್ರಸ್ತುತ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರ ಮೇಲೆ ಜನರು ಹೆಚ್ಚಿನ ಒಲವು ತೋರುತ್ತಿರುವ ಹಿನ್ನೆಲೆಯಲ್ಲಿ ಹೆಚ್.ಡಿ ರೇವಣ್ಣ ಅವರು ಹತಾಶರಾಗಿ ಮಾತನಾಡುತ್ತಿದ್ದಾರೆ. ಈಗಾಗಲೇ ಹೊಳೇನರಸೀಪುರ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಇದ್ದಂತಹ ಅಧಿಕಾರಿಗಳನ್ನು ಕಾಂಗ್ರೆಸ್ ಸರ್ಕಾರ ಬೇರೆಡೆ ವರ್ಗಾವಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ರೇವಣ್ಣನವರಿಗರ ಅಧಿಕಾರಿಗಳನ್ನು ಎದರಿಸಿ ಕೆಲಸ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಆಧಾರ ರಹಿತ ಆರೋಪ ಮಾಡುತ್ತಿದಾರೆ ಎಂದು ದೂರಿದರು.
ಇಷ್ಟು ದಿನ ಹೊಳೆನರಸೀಪುರದಲ್ಲಿ ನಡೆಯುತ್ತಿದ್ದದ್ದೇ ಬೇರೆ ಚುನಾವಣೆಯ ಮುಗಿದ ನಂತರ ಅಲ್ಲಿ ನಡೆಯತ್ತಿರುವುದೇ ಬೇರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾನು ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲಿ ತುಂಬಾ ವರ್ಷಗಳಿಂದ ಇದ್ದಂತಹ ಅಧಿಕಾರಿಗಳನ್ನು ವರ್ಗಾವಣೆ ಮಾದುವಂತೆ ಮನವಿ ಮಾಡಿದ್ದೆ, ಅದರೆಂತೆ ಕೆಲ ಅಧಿಕಾರಿಗಳಿ ಬದಲಾಗಿದ್ದಾರೆ. ಕಾನೂನು ಬದ್ಧವಾಗಿ ಕೆಲಸ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಯಾವುದೇ ಅಕ್ರಮ ಕೆಲಸಗಳು ನಡೆದರೆ ನಾವು ಪ್ರಶ್ನೆ ಮಾಡುತ್ತೇವೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರೇವಣ್ಣ ಅವರಿಗೆ ಭ್ರಷ್ಟಚಾರ ಮಾಡಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೇಕಾಬಿಟ್ಟಿ ಆರೋಪ ಮಾಡುವ ಕೆಲಸ ಮಾಡುತ್ತಿದ್ದಾರೆ.
ಹಾಸನ ಲೋಕ ಸಭಾ ಚುನವಾಣೆ ಕುರಿತು ಕಳೆದ ಒಂದು ವಾರದ ಹಿಂದೆ ಸಭೆ ನಡೆಯಿತು. ಆ ಸಭೆಯಲ್ಲಿ ನನ್ನ ಅಭಿಪ್ರಾಯವನ್ನು ಸಹ ವರಿಷ್ಠರು ಕೇಳಿದರು. ಹೌದು ಪಕ್ಷ ಏನೂ ತೀರ್ಮಾನ ಕೈಗೊಳ್ಳುತ್ತದೋ ಅದಕ್ಕೆ ನಾನು ಬದ್ಧವಾಗಿರುತ್ತೇನೆ ಎಂದು ಹೇಳಿದ್ದೇನೆ ಎಂದರು. ಹೊಳೆನರಸೀಪುರ ಕ್ಷೇತ್ರದ ಅಭಿವೃದ್ಧಿಗೆ ಕ್ರೀಯಾಯೋಜನೆ ತಯಾರಿಸಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ನೀಡಿದ್ದೇವೆ. ರಸ್ತೆ, ಚರಂಡಿ, ಕುಡಿಯುವ ನೀರು ಹೀಗೆ ಸಾರ್ವಜನಿಕರಿಗೆ ಬೇಕಾದ ಮುಖ್ಯ ಮೂಲಭೂತ ಸೌಲಭ್ಯಗಳನ್ನು ನೀಡಿ ಎಂದು ಮನವಿ ಮಾಡಿದ್ದೇವೆ. ಅದಕ್ಕೆ ರಾಜ್ಯ ಸರ್ಕಾರ ಸಹ ಸಕರಾತ್ಮಕವಾಗಿ ಸ್ಪಂದಿಸಿ ಡಿಸೆಂಬರ್ ತಿಂಗಳ ನಂತರ ಯೋಜನೆಗಳಿಗೆ ಅನುಷ್ಠಾವನ್ನು ನೀಡುವ ಭರವಸೆಯನ್ನು ನೀಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಲಕ್ಷ್ಮಣ್ ಇತರರು ಉಪಸ್ಥಿತರಿದ್ರು.
ಬಿಜೆಪಿಯಲ್ಲಿ ಭುಗಿಲೆದ್ದಿದೆ ಪಟ್ಟದ ಫೈಟ್! ಶೋಭಾ ಹೆಸರು ಎಂಟ್ರಿ, ಅಖಾಡಕ್ಕಿಳಿದ ಸದಾನಂದ ಗೌಡ