Sunday, September 8, 2024

Latest Posts

‘ನಾವೆಲ್ಲರೂ ಕನ್ನಡ ನಾಡವನ್ನು ಕಟ್ಟೋಣ ಮತ್ತು ಉಳಿಸೋಣ’

- Advertisement -

ನಾಯಕನಹಟ್ಟಿ : ನಾವೆಲ್ಲರೂ ಕನ್ನಡದಲ್ಲಿ ಮಾತನಾಡಬೇಕು. ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಸಾರ್ವಜನಿಕರು ಬಂದಾಗ ತೆಲುಗು ಭಾಷೆಯಲ್ಲಿ ಮಾತನಾಡಿಸದೆ, ಕನ್ನಡದಲ್ಲಿ ಮಾತನಾಡಿಸಿ ಎಂದು ಪಟ್ಟಣ ಪಂಚಾಯತ್ ಸದಸ್ಯರಾದ ರವಿಕುಮಾರ್ ಹೇಳಿದರು.

ನಾಯಕನಹಟ್ಟಿ ಪಟ್ಟಣ ಪಂಚಾಯತಿಯಲ್ಲಿ 50ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದವರು ಪ್ರತಿಯೊಬ್ಬರೂ ಮೊದಲು ನಮ್ಮ ಕನ್ನಡ ಭಾಷಣ ಪ್ರೀತಿಸಬೇಕು. ಮತ್ತು ಚೆನ್ನಾಗಿ ಮಾತನಾಡಬೇಕು ನಾವೆಲ್ಲರೂ ಕನ್ನಡ ನಾಡವನ್ನು ಕಟ್ಟೋಣ ಮತ್ತು ಉಳಿಸೋಣ ಎಂದರು.
ನಮ್ಮ ರಾಜ್ಯ ನಮ್ಮ ರಾಜ್ಯಕ್ಕೆ ಎಂಟು ಜ್ಞಾನ ಪ್ರಶಸ್ತಿಗಳು ಲಭಿಸಿವೆ ಕುವೆಂಪು, ದರಾ ಬೇಂದ್ರೆ , ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಗಿರೀಶ್ ಕಾರ್ನಾಡ್, ವಿಕೃ ಗೋಕಾಕ್, ಅನಂತಮೂರ್ತಿ, ಚಂದ್ರಶೇಖರ್ ಕುಂಬಾರ, ನಮ್ಮ ರಾಜ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ ಎಂದರು.

ಪಟ್ಟಣ ಪಂಚಾಯತಿ ಸದಸ್ಯರಾದ ಸೈಯದ್ ಅನ್ವರ್ ಮಾತನಾಡಿ ಪೋಷಕರು ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಬೇಕು. ಕಚೇರಿಗಳಲ್ಲಿ ಕನ್ನಡ ಮಾತನಾಡಿ ನಾವೆಲ್ಲರೂ ಸೇರಿ ಕನ್ನಡ ಭಾಷೆಗೆ ಒತ್ತು ಕೊಡೋಣ ಎಂದರು.

50ನೇ ವರ್ಷದ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಯದ ಶಿವಕುಮಾರ್ ಮಾತನಾಡಿ ನಮ್ಮ ಕನ್ನಡ ನಾಡಿನ ಹಿರಿಮೆಯನ್ನು ಎಲ್ಲಾರು ಎತ್ತಿ ಹಿಡಿಯೋಣ ಕವಿಗಳಿಗೆ ಆಶಾಭಾವನೆ ಹಾಗೆ ನೋಡುತ್ತಾರೆ ಎಂದು ಅವರು ಮಾತನಾಡಿದರು

ಈ ಸಂದರ್ಭದಲ್ಲಿ ಉಪಸ್ಥಿತರಾದ ಪಟ್ಟಣ ಸಧ್ಯರಾದ ಸದಸ್ಯರಾದ ದುರ್ಗಪ್ಪ ರವಿಕುಮಾರ್, ಮತ್ತು ಬಂಗಾರ ನಾಯಕ, ಹೆಲ್ತ್ ಇನ್ಸ್ಪೆಕ್ಟರ್ ರುದ್ರಮುನಿ ಮತ್ತು ಮರಿಪಾಲಯ್ಯ ಯನಪ್ಪ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗು ಇತರರು ಭಾಗವಹಿಸಿದ್ದರು.

ಆಂಜನೇಯ, ಕರ್ನಾಟಕ ಟಿವಿ

‘ಡಿಸಿಎಂಗೆ ಕಡಿವಾಣ ಹಾಕಲು, ಡಿನ್ನರ್ ಮೀಟಿಂಗ್ ಶರುವಾಗಿದೆ’

‘ಆ ನಾಲ್ಕು ಜನರ ನಡುವೆ ಜಗಳ ಹಚ್ಚಿ, ಸಿದ್ದರಾಮಯ್ಯ ಸಿಎಂ ಆಗಿರಬೇಕು ಅಂದುಕೊಂಡಿದ್ದಾರೆ’

‘ಅವರಲ್ಲಿ ಹೊಂದಾಣಿಕೆ ಇಲ್ಲ ಅನ್ನೋದು ಗೊತ್ತಾಗ್ತಿದೆ. ಬೆಳಗ್ಗೆ ಎದ್ರೆ ನಾಯಿ, ನರಿ ತರ ಕಿತ್ತಾಡ್ತಿದ್ದಾರೆ’

- Advertisement -

Latest Posts

Don't Miss