ಸವಿತಾ ಮಹರ್ಷಿಯವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ನಡೆಯೋಣ -ತಹಶೀಲ್ದಾರ ಕಲಗೌಡ ಪಾಟೀಲ್

Hubli News: ಹುಬ್ಬಳ್ಳಿ: ಸವಿತಾ ಮಹರ್ಶಿಯರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಅವರು ಹಾಕಿ ಕೊಟ್ಟ ದಾರಿಯಲ್ಲಿ ನಾವೆಲ್ಲರೂ ನಡೆಯೋಣ ಎಂದು ಹುಬ್ಬಳ್ಳಿ ಶಹರ ತಹಶೀಲ್ದಾರರಾದ ಕಲಗೌಡ ಪಾಟೀಲ್ ಹೇಳಿದರು.

ಇಂದು ತಹಶೀಲ್ದಾರ ಕಾರ್ಯಾಲಯದಲ್ಲಿ ನಡೆದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸವಿತಾ ಮಹರ್ಷಿಯವರು ವಾಲ್ಮೀಕಿ ಮಹರ್ಷಿಯವರ ಸಮಕಾಲೀನವರಾಗಿದ್ದಾರೆ. ಅವರ ನೀತಿ ನಿಯಮಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.

ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರರಾದ ಪ್ರಕಾಶ್ ಹೊಳೆಪ್ಪಗೊಳ ಮಾತನಾಡಿ, ನಮ್ಮ ದೇಶ ವೈವಿಧ್ಯತೆಯಿಂದ ಕೂಡಿದೆ. ಹಲವಾರು ಸಮುದಾಯಗಳನ್ನು ಒಳಗೊಂಡಿದೆ. ಪ್ರತಿಯೊಂದು ಸಮುದಾಯಕ್ಕೂ ಅದರದೇ ಆದ ಸಂಪ್ರದಾಯಗಳು ಇವೆ. ಅದರಲ್ಲಿ ಸವಿತಾ ಸಮುದಾಯವು ಒಂದು. ಸವಿತಾ ಸಮಾಜದ ಮೂಲ ಪುರುಷ ಸವಿತಾ ಮಹರ್ಷಿಯವರು. ಅವರು ಬೆಳೆಸಿಕೊಂಡು ಬಂದ ಪರಂಪರೆಯನ್ನು ಸಮಾಜದವರು ಮತ್ತು ನಾವೆಲ್ಲರೂ ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.

ಶಿವನ ಬಲಗನ್ನಿನಿಂದ ಜನನ ಪಡೆದವರು ಸವಿತಾ ಮಹರ್ಷಿಯವರು. ಸವಿತಾ ಸಮುದಾಯದ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಸಹಾಯ ಧನವನ್ನು ಸರ್ಕಾರ ನೀಡಬೇಕು ಎಂದು ಸವಿತಾ ಸಮಾಜದ ಅಧ್ಯಕ್ಷರಾದ ರಘುನಾಥ್ ನಾರಾಯಣದಾಸ ಅವರು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ವೆಂಕಟೇಶ ಎಂ.ಕನಮಾನೂರ , ಪಾಂಡುರಂಗ ಮುನ್ಸಿಪಲ್ಲಿ, ಹೇಮಂತ ಕಡಕುಂಟ್ಲ, ಶಿವಾ, ಧನರಾಜ ಗೊಲಪತ್ರ, ಹರೀಶ್, ಮಂಜುನಾಥ ಕುಡರೆಲಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.

ಯುವರಾಜ್ ಸಿಂಗ್ ಮನೆಯಲ್ಲಿ ಕಳ್ಳತನ: ನಗದು ಚಿನ್ನಾಭರಣ ದೋಚಿದ ಕಳ್ಳರು

‘ಬಜೆಟ್ ಮಂಡಿಸುವಾಗ ವಾಕ್ ಔಟ್ ಮಾಡಿದ ನಿದರ್ಶನ ಇಲ್ಲ. ಆದರೆ ಬಿಜೆಪಿಗರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ’

ಆಸ್ಪತ್ರೆಗೆ ದಾಖಲಾದ ಪ್ರಿಯಾಂಕಾ ವಾದ್ರಾ: ಉತ್ತರಪ್ರದೇಶ ನ್ಯಾಯ ಯಾತ್ರೆಗೆ ರಾಹುಲ್ ಗಾಂಧಿಗೆ ವಿಶ್

About The Author