Wednesday, July 2, 2025

Latest Posts

ಸಂಘಟನೆಗೆ ಒತ್ತು ಕೊಟ್ಟು ರಾಜ್ಯದಲ್ಲಿ ಪಕ್ಷ ಕಟ್ಟೋಣ: ನಿಖಿಲ್ ಕುಮಾರ್

- Advertisement -

Political News: ಕೇಂದ್ರ ಸಚಿವರಾದ ಬಳಿಕ, ಕುಮಾರಸ್ವಾಮಿ ಬೆಂಗಳೂರಿಗೆ ಮೊದಲ ಬಾರಿ ಬಂದಿದ್ದು, ಜೆಡಿಎಸ್ ಕಾರ್ಯಕರ್ತರು ಭರ್ಜರಿಯಾಗಿ ಸ್ವಾಗತ ಕೋರಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿರುವ ನಿಖಿಲ್ ಕುಮಾರ್, ಈ ದೇಶಕ್ಕಾಗಿ ನರೇಂದ್ರ ಮೋದಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ರು. ಮೂರನೇ ಬಾರಿಗೆ ನರೇಂದ್ರ ಮೋದಿ ಅವರ ಜೊತೆಗೆ ಕುಮಾರಣ್ಣ ಎರಡು ಖಾತೆ‌ ಹೊಂದಿದ್ದಾರೆ. ಅದಕ್ಕೆಲ್ಲ ಕಾರಣ ನೀವು ನಿಮಗೆ ಧನ್ಯವಾದ ಸಲ್ಲಿಸುತ್ತೇನೆ. ಕೇಂದ್ರದ ಮಂತ್ರಿಯಾಗಿ ‌ಮೋದಿ ಸಂಪುಟದಲ್ಲಿ ಸಚಿವರಾಗಲು ಕಾರಣ ಮಂಡ್ಯದ ಜನತೆ. 3 ಲಕ್ಷಕ್ಕೂ ‌ಹೆಚ್ಚು ಮತ ನೀಡಿ ಆಶೀರ್ವಾದ ಮಾಡಿದ್ದೀರಿ. ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಗಬೇಕು ಅನ್ನೋದು ಕಾರ್ಯಕರ್ತರ ಇಚ್ಛೆಯಾಗಿತ್ತು. ಮುಖ್ಯಮಂತ್ರಿಯಾಗಿ ಕುಮಾರಣ್ಣ ‌ಎರಡು‌ ಬಾರಿ‌ ಸಾಲ ಮನ್ನಾ ಮಾಡಿದ್ರು. ರಾಮನಗರ, ಚನ್ನಪಟ್ಟಣದ ಜನರನ್ನು ನಾವು ಮರೆಯುವಂತಿಲ್ಲ. ಎರಡು ಬಾರಿ ಮುಖ್ಯಮಂತ್ರಿ ಆಗಲು ಅಲ್ಲಿನ ಜನರೇ ಕಾರಣ ಎಂದು ನಿಖಿಲ್ ಕುಮಾರ್ ಹೇಳಿದ್ದಾರೆ.

ದೇಶಕ್ಕೆ ಸೇವೆ ಸಲ್ಲಿಸಲು ನೀವು ಹೋಗಿ ಎಂದು ಹೇಳಿದ್ದೀರಿ. ಕುಮಾರಣ್ಣಂಗೆ ಒಂದು ‌ದೊಡ್ಡ‌ ಜವಾಬ್ದಾರಿ‌‌ ಸಿಕ್ಕಿದೆ. ಕುಮಾರಣ್ಣ ಕೃಷಿ ಮಂತ್ರಿ ಆಗಬೇಕು ಎಂದು ಜನರ ಅಭಿಲಾಷೆ ಇತ್ತು. ಆದರೆ ಅವರಿಗೆ ಉಕ್ಕು, ಬೃಹತ್ ಕೈಗಾರಿಕೆ‌ ಜವಾಬ್ದಾರಿ ನೀಡಿದ್ದಾರೆ. ಈ ಜವಾಬ್ದಾರಿ ಅತ್ಯಂತ ದೊಡ್ಡ ಜವಾಬ್ದಾರಿ. ದೇಶಕ್ಕೆ‌ 30% ಕ್ಕಿಂತ ಹೆಚ್ಚು ಜಿಡಿಪಿ ತರುವ ಖಾತೆ ಇದೆ. ಕುಮಾರಣ್ಣ ಅವರ ಕಾರ್ಯ ಜವಾಬ್ದಾರಿ ನೋಡಿ ಖಾತೆ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಕುಮಾರಣ್ಣ ಸಾಕಷ್ಟು ಕೆಲಸ ಮಾಡಿದ್ದಾರೆ. ಕುಮಾರಣ್ಣ ದೇಶವನ್ನು ಕಟ್ಟುವ ಕೆಲಸ ಮಾಡುತ್ತಾರೆ. ಕೋಲಾರದ ಜನತೆ ನಮ್ಮ ಯುವ‌ ನಾಯಕ ಮಲ್ಲೇಶ್ ಬಾಬುಗೆ ಆಶೀರ್ವಾದ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದ ಸೋಲು ಕಂಡಿದ್ದರು. ಸಮೃದ್ಧಿ ಮಂಜಣ್ಣ 36 ಸಾವಿರ ಲೀಡ್ ಮುಳಬಾಗಿಲು ನಲ್ಲಿ‌ ಕೊಡಿಸಿದ್ದಾರೆ. ಅವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ನಿಖಿಲ್ ಕೋಲಾರ ಜನತೆಗೆ ಧನ್ಯವಾದ ತಿಳಿಸಿದ್ದಾರೆ.

ಮಂಡ್ಯ ಕೋಲಾರ ಮಾತ್ರವಲ್ಲ, 19 ಕ್ಷೇತ್ರ ಗೆಲ್ಲಲು ಕಾರ್ಯಕರ್ತರು ಕಾರಣರಾಗಿದ್ದಾರೆ. ಬಿಜೆಪಿ, ಜೆಡಿಎಸ್ ರಾಜ್ಯದ ವಿಶ್ವಾಸ ಪಡೆದಿದೆ. ಹಾಸನ ಜಿಲ್ಲೆಯ ಫಲಿತಾಂಶ ನಿರೀಕ್ಷಿತ ಫಲಿತಾಂಶ. ದೇವೇಗೌಡರ ಹೋರಾಟಕ್ಕೆ‌ ನೀವು‌ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದೀರಿ. ದೇವೇಗೌಡರು ಸೋಲು ಕಂಡಿದ್ದರು. ಸೋಲು ಸ್ವಿಕಾರ ಮಾಡಿ ಮುಂದೆ ಹೋಗೋಣ. ಮುಂದಿನ ದಿನಗಳಲ್ಲಿ ‌ಹಾಸನ‌‌ ಜಿಲ್ಲೆಯ‌ ಹೊಸ ಅಧ್ಯಾಯ ಪ್ರಾರಂಭ ಮಾಡೋಣ. ಎಲ್ಲರೂ ‌ಸೇರಿ‌ ಮಾಡೋಣ ಕೆಲಸ. ನಮ್ಮ ವಿರೋಧಿಗಳು ಜೆಡಿಎಸ್ ಇಲ್ಲ ಎನ್ನುತ್ತಿದ್ದರು. ಈಗ ಅವರಿಗೆ ಉತ್ತರ ‌ಸಿಕ್ಕಿದೆ. ಕುಮಾರಣ್ಣ ಅನುಪಸ್ಥಿತಿ ಎಂದು ಭಾವಿಸಬೇಡಿ. ಎಲ್ಲ ನಾಯಕರು ನಮ್ಮ‌ಜೊತೆಗೆ ಇದ್ದಾರೆ. ಸಂಘಟನೆಗೆ ಒತ್ತು ಕೊಟ್ಟು ರಾಜ್ಯದಲ್ಲಿ ಪಕ್ಷ ಕಟ್ಟೋಣ ಎಂದು ನಿಖಿಲ್ ಜೆಡಿಎಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಬಿಎಸ್‌ವೈ ವಿರುದ್ಧ ರಾಜಕೀಯ ವೈಷಮ್ಯ: ಕಾಂಗ್ರೆಸ್ ವಿರುದ್ಧ ಪ್ರಹ್ಲಾದ್ ಜೋಶಿ ಕಿಡಿ

ಹಲವು ಒತ್ತಡಗಳ ನಡುವೆಯೇ ದರ್ಶನ್‌ನನ್ನು ಅರೆಸ್ಟ್ ಮಾಡಿದ ಪೊಲೀಸ್ ಅಧಿಕಾರಿ ಯಾರು ಗೊತ್ತಾ..?

Sandalwood News: ಕೊನೆಗೂ ಸತ್ಯ ಬಾಯ್ಬಿಟ್ಟ ದರ್ಶನ್ ಮತ್ತು ಪವಿತ್ರಾ

- Advertisement -

Latest Posts

Don't Miss