Dharwad News: ಧಾರವಾಡ : ಸಂಸದ ಅನಂತ ಕುಮಾರ ಹೆಗಡೆ ವಿರುದ್ದ ಸಚಿವ ಸಂತೋಷ ಲಾಡ್ ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ಅವರು ಪ್ರಣಾಳಿಕೆಯೊಳಗೆ ಸಂವಿಧಾನ ಬದಲಾವಣೆ ಮಾಡುತ್ತೆವೆ ಎಂದು ಹೇಳಲಿ ನೋಡೋಣ. ಯಾತಕ್ಕಾಗಿ ಬದಲಾವಣೆ ಮಾಡುತ್ತಾರೆ ಎಂದು ಸ್ಪಷ್ಡ ವಾಗಿ ಹೇಳಲಿ. ನಾವು ಗೆದ್ದರೆ ಸಂವಿಧಾನವನ್ನ ಬದಲಾವಣೆ ಮಾಡುತ್ತೆವೆ ಎಂದು ಬಹಿರಂಗವಾಗಿ ಹೇಳಲಿ. ಒಬ್ಬೊಬ್ಬರ ಕಡೆ ಈ ರೀತಿ ಯಾಗಿ ಹೇಳಸ್ತಾರೆ. ನಾಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಪ್ರಶ್ನೆ ಕೇಳಬೇಕು. ಎಲ್ಲಿಯವರೆಗೆ ಶೋಷಿತವರ್ಗದ ಜನರು ಬದಕಿದ್ದಾರೆ ಅವರ ಹಿಂದೆ ನಾವು ಇದ್ದೆವೆ. ಕಾರಣಕ್ಕೂ ನಾವು ಸಂವಿಧಾನ ಬದಲಾವಣೆ ಮಾಡಲಿಕ್ಕೆ ಬಿಡಲ್ಲ. ದೇಶದ ಜನರು ಇದ್ದಾರೆ, ಯಾರು ಸಂವಿಧಾನ ಬದಲಾವಣೆ ಮಾಡ್ತೀವಿ ಅಂತಾರೆ ಅವರಿಗೆ ಪಾಠ ಕಲಿಸಿ ಎಂದು ಲಾಡ್ ಹೇಳಿದ್ದಾರೆ.
ಅನಂತಕುಮಾರ ಹೆಗಡೆ ಹೇಳಿಕೆ ವಿಚಾರಕ್ಕೆ ಬಿಜೆಪಿ ಟ್ವಿಟ್ ಮಾಡಿದ್ದರ ಬಗ್ಗೆ ಮಾತನಾಡಿದ ಸಂತೋಷ್ ಲಾಡ್, ಅವರ ಹೇಳಿಕೆ ವಯಕ್ತಿಕವಾದ್ದು, ಎಂದು ಟ್ವಿಟ್ ಮಾಡಿದ್ದಾರೆ. ಬಿಜೆಪಿ ಅವರ ನಾಟಕ ಇದು, ಅವರ ಮೆಲೆ ಕ್ರಮ ಕೈಗೊಳ್ಳಿ. ಇಂತವರನ್ನ ಇಟ್ಟುಕ್ಕೊಂಡು ಟಿಕೆಟ್ ನೀಡ್ತಿರಾ..? ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಿ ನೋಡೋಣ..? ಅಂತವರ ಜೊತೆ ವೇದಿಕೆಯನ್ನ ಹಂಚಿಕ್ಕೊಳ್ತಿರಿ ಅಂದ್ರೆ ಎನ್ ಇದು ಎಂದು ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.
ಧಾರವಾಡ ಲೋಕಸಭಾ ಟಿಕೆಟ್ ವಿಚಾರದ ಬಗ್ಗೆ ಮಾತನಾಡಿದ ಲಾಡ್, ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಜೋಶಿ ಅವರನ್ನ ಸೋಲಿಸುತ್ತೇವೆ. ಬಿಜೆಪಿ ಅವರು ಅಬಕಿ ಬಾರ್ 400 ಬಾರ್ ಅಂತಾರೆ, ಡಬ್ಬಾ ಹೊಡೆದ ಮೆಲೆ ಗೊತ್ತಾಗುತ್ತೆ. ಕ್ಲಿನಾಗಿ ಚುಣಾವಣೆ ಟ‌್ಯಾಂಪರ್ ಮಾಡಿದ್ದರೆ 200 ಸಿಟನ್ನ ಕೂಡಾ ಗೆಲ್ಲಲ್ಲ. ಇವಿಎಂ ಬಗ್ಗೆ ಟ‌್ಯಾಂಕರ್ ಆಗಿದೆ. ಎಲೆಕ್ಟ್ರಾನ್ ಸಿಸ್ಡಂ ನಲ್ಲಿ ಜ್ಯೂಡಿಸರಿ ಎಂಬುದು ಮೇಂಬರ್ ಶಿಪ್ ಆಗಬೇಕಿತ್ತು, ಜ್ಯೂಡಿಸರಯನ್ನೆ ತಗೆದು ಹಾಕಿದ್ದಾರೆ. ನಾಲ್ಕು ಜನ ಡೈರೆಕ್ಟರ್ ಗಳು ಬಿಜೆಪಿ ಅವರು. ಸದ್ಯ ಇವೆಲ್ಲವೂ ಅನುಮಾನಕ್ಕೆ ಕಾರಣವಾಗಿದೆ ಎಂದು ಲಾಡ್ ಹೇಳಿದ್ದಾರೆ.
ಸದ್ಯ 100 ರೂ ಸಿಲಿಂಡರ್ ಕಡಿಮೆ ಮಾಡಿದೆ ಅದು ಚುನಾವಣಾಯ ಗಿಮಿಕ್. ಮೋದಿ ಅವರು ಮಾಡಿರುವ ಕೆಲಸಗಳು ಬಿಜೆಪಿ ಅವರಿಗೆ ಲಾಭವಿದೆ. ಬಡವ ಹಿಂದೂಗೆ 1 ರೂ ಲಾಭವಿಲ್ಲ, ಸಾಹುಕಾರ ಹಿಂದೂಗಳಿಗೆ ಮಾತ್ರ ಲಾಭವಾಗಿದೆ. ದೇಶದಲ್ಲಿ ಬಡವರು ಬಡವರಾಗಿದ್ದಾರೆ. ಅನೂಕೂಲವಾಗಿರುವ ಉದಾಹರಣೆ ಕೋಡಿ. ದೇಶದ ಸಾಲದ ಬಗ್ಗೆ ಮಾತನಾಡೋರು ಯಾರು?. ಹಿಂದೂ ಕೋಡಿಪಿಕೇಶನ್ ಬಿಲ್ ಬದಲಾವಣೆ ಮಾಡಲು ಹೊರಟವರು ಬಿಜೆಪಿ ಅವರು. ಹಿಂದೂ ಕೋಡಿಪಿಕೇಶನ್ ವಿರೋದ ಮಾಡಿದವರು ಸಂಘದವರೆ ತಾನೆ. ನಿಮಗೆ ದೈರ್ಯ ಇದ್ದರೆ ಅನಂತ ಕುಮಾರ ಹೇಗಡೆ ವಿರುದ್ದ ಕ್ರಮ ಕೈಗೊಳ್ಳಲಿ ನೋಡೋಣ, ಈ ಭಾರಿ ಧಾರವಾಡದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದೆ ಗೆಲ್ಲುತ್ತೆ ಎಂದು ದಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಮುಸ್ಲಿಮರ ಬಗ್ಗೆ ಆ ಪೊಲೀಸರಿಗೆ ಎಷ್ಟು ದ್ವೇಷವಿದೆ ಅನ್ನೋದು ಇದರಲ್ಲೇ ಗೊತ್ತಾಗುತ್ತದೆ: ಓವೈಸಿ
ಮಂಡ್ಯದಲ್ಲಿ ಮುಂದಿನ ವರ್ಷದ ಬಜೆಟ್ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ