Life lesson: ನಾವು ಸೇರುವ ಶಾಲೆ- ಕಾಲೇಜಿಗಿಂತ ಹೆಚ್ಚು ಮ್ಮ ಜೀವನವೇ ನಮಗೆ ಮರೆಯದ ಪಾಠ ಕಲಿಸಿರುತ್ತದೆ. ಅಂಥ ಪಾಠ ಕಲಿತ ಬಳಿಕವೇ ನಾವು ಪರಿಪಕ್ವರಾಗಲು, ಪ್ರಬುದ್ಧರಾಗಲು ಸಾಧ್ಯ. ಹಾಗಾದ್ರೆ ನಾವು ಪ್ರಬುದ್ಧರಾಗಿದ್ದೇವೆ, ಜೀವನ ಪಾಠವನ್ನು ಚೆನ್ನಾಗಿ ಕಲಿತಿದ್ದೇವೆ ಅನ್ನೋಕ್ಕೆ ನಮ್ಮಲ್ಲಿ ಕೆಲ ಲಕ್ಷಣಗಳಿರಬೇಕು. ಆ ಲಕ್ಷಣಗಳು ಯಾವುದು ಎಂದು ತಿಳಿಯೋಣ ಬನ್ನಿ.
ಎಲ್ಲ ಸಮಸ್ಯೆಗಳಿಗೆ ಬೇರೆಯವರನ್ನು ನಿಂದಿಸುವುದನ್ನು ನಿಲ್ಲಿಸುವುದು: ತಮಗೆ ಏನೋ ಸಮಸ್ಯೆ ಬಂತೆಂದು ಅದಕ್ಕೆ ಬೇರೆಯವರನ್ನು ನಿಂದಿಸುವ ಜನರನ್ನು ನೀವು ನೋಡಿರುತ್ತೀರಿ. ಅದನ್ನು ಫ್ರಸ್ಟ್ರೇಶನ್ ಎಂದು ಹೇಳುತ್ತಾರೆ. ಇಂಥವರು ತಮ್ಮ ತಪ್ಪನ್ನು ಜೀವನದಲ್ಲಿ ಎಂದಿಗೂ ಒಪ್ಪುವುದಿಲ್ಲ. ಆದರೆ ನೀವು ನಿಮಗೆ ಬಂದ ಸಮಸ್ಯೆಗಳಿಗೆ ಕಾರಣವೇನು ಎಂದು ಯೋಚಿಸಿ, ಆ ಸಮಸ್ಯೆಗಾಗಿ ಯಾರನ್ನೂ ದೂರದೇ, ಸಮಸ್ಯೆಗೆ ಪರಿಹಾರ ಹುಡುಕುತ್‌ತಿದ್ದೀರಿ ಎಂದರೆ, ನೀವು ಪ್ರಬುದ್ಧರಾಗಿದ್ದೀರಿ ಎಂದರ್ಥ.
ಜನ ಏನು ಯೋಚಿಸುತ್ತಾರೆ ಅನ್ನೋದು ನಿಮಗೆ ವ್ಯತ್ಯಾಸವಾಗುವುದಿಲ್ಲ: ನಾವು ಈ ರೀತಿ ಉಡುಪು ಧರಿಸಿದರೆ, ಈ ರೀತಿ ಇದ್ದರೆ, ಈ ರೀತಿ ಮಾತನಾಡಿದರೆ, ಇತ್ಯಾದಿ ವಿಷಯಗಳಿಗೆ ಅವರೇನು ತಿಳಿಯುತ್ತಾರೆ ಎಂಬುದರ ಬಗ್ಗೆ ನೀವು ಯೋಚಿಸುವುದನ್ನು ಬಿಡುತ್ತೀರೋ, ಆಗ ನೀವು ಪ್ರಬುದ್ಧರಾಗಿದ್ದೀರಿ ಎಂದರ್ಥ.
ಭವಿಷ್ಯಕ್ಕಾಗಿ ಉತ್ತಮ ನಿರ್ಧಾರ ತೆಗೆದುಕ“ಳ್ಳುತ್ತೀರಿ: ನೀವು ಅನಗತ್ಯ ವಿಚಾರಗಳನ್ನು ಬಿಟ್ಟು, ಬೇರೆಯರ ಬಗ್ಗೆ ಅಸೂಯೆ ಪಡುವುದನ್ನು ಬಿಟ್ಟು, ನಿಮ್ಮ ಭವಿಷ್ಯಕ್ಕಾಗಿ ನೀವು ಉತ್ತಮ ನಿರ್ಧಾರ ತೆಗೆದುಕ“ಳ್ಳುತ್ತಿದ್ದೀರಿ. ಧೈರ್ಯದಿಂದ ಮುಂದೆ ಸಾಗುತ್ತಿದ್ದೀರಿ ಎಂದರೆ ನೀವು ಪರಿಪಕ್ವ ಅಂದ್ರೆ ಮೆಚ್ಯೂರ್ ಆಗಿದ್ದೀರಿ ಎಂದರ್ಥ.
ಸಮಯದ ಮಹತ್ವ ತಿಳಿದಿರುವುದು: ಸಮಯ ಅನ್ನೋದು ಮನುಷ್ಯನಿಗೆ ಹಣಕ್ಕಿಂತಲೂ ಮುಖ್ಯವಾದದ್ದು. ಹಾಗಾಗಿ ಮನುಷ್ಯ ಸಮಯದ ಸದುಪಯೋಗ ಮಾಡಬೇಕು. ಯಾವಾಗಲೂ ಕೆಲಸವೆಂದು ಮನೆಜನರಿಗೆ ಸಮಯ ನೀಡದಿರುವುದು. ಅಥವಾ ಉದಾಸೀನವೆಂದು ಕೆಲಸವನ್ನು ಕಡೆಗಣಿಸಿ, ಆಲಸ್ಯ ತೋರುವುದು ಇದೆಲ್ಲ ಸಮಯದ ಮಹತ್ವ ತಿಳಿಯದವರು ಮಾಡುವ ಕೆಲಸ. ನೀವು ಹೀಗೆ ಮಾಡದೇ, ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕ“ಳ್ಳುತ್ತಿದ್ದೀರಿ ಎಂದರೆ ನೀವು ಮೆಚ್ಯೂರ್ ಆಗಿದ್ದೀರಿ ಎಂದರ್ಥ.




