Life lesson: ನೀವು ಮನೆಯಲ್‌ಲಿ ಬೆಡ್ ಮೇಲೆ ಕುಳಿತ ಊಟ ಮಾಡಿದ್ರೆ ಅಥವಾ ಆಹಾರ ಸೇವಿಸಿದರೆ, ನಿಮ್ಮ ಮನೆಯ ಹಿರಿಯರು ನಿಮಗೆ ಬೈದಿರಬಹುದು. ಬೆಡ್ ಮೇಲೆ ಕುಳಿತು ಊಟ ಮಾಡಬೇಡಾ, ಮನೆಗೆ ದರಿದ್ರ ಸಂಭವಿಸುತ್ತೆ ಅಂತಾ. ಹಾಗೆ ಹೇಳುವುದರ ಹಿಂದೆ 1 ಕಾರಣವೂ ಇದೆ. ಆ ಕಾರಣ ವಿವರಿಸಿದರೆ, ಅದನ್ನು ಅರಿಯುವ ಶಕ್ತಿ ಮಕ್ಕಳ ವಯಸ್ಸಿಗೆ ಇಲ್ಲದ ಕಾರಣ, ಹಿರಿಯರು ಅದನ್ನು ದರಿದ್ರ ಅಂತ ಕರೆಯುತ್ತಿದ್ದರು. ಹಾಗಾದ್ರೆ ಬೆಡ್ ಮೇಲೆ ಕುಳಿತು ಏಕೆ ಊಟ ಮಾಡಬಾರದು ಅಂತಾ ತಿಳಿಯೋಣ ಬನ್ನಿ.
ಬೆಡ್ ಮೇಲೆ ಕುಳಿತಾಗ, ನಮ್ಮ ಕುಳಿತುಕ“ಳ್ಳುವ ಭಂಗಿ ಸರಿಯಾಗಿರುವುದಿಲ್ಲ. ಹಾಗಾಗಿ ನಾವು ಹಾಗೆ ಕುಳಿತು ಆಹಾರ ಸೇವಿಸಿದರೆ, ನಮ್ಮ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಬೇರೆ ಬೇರೆ ಉದರ ಸಮಸ್ಯೆ ಉದ್ಭವಿಸುತ್ತದೆ. ಅಲ್ಲದೇ ಬೆಡ್ ಮೇಲೆ ದೂಳು, ಕ್ರಿಮಿ ಸೇರಿ ಆರೋಗ್ಯಕ್ಕೆ ಹಾನಿ ಮಾಡುವ ಕೆಲ ಅಂಶಗಳಿರುತ್ತದೆ. ಹಾಗಾಗಿ ಪ್ರತಿದಿನ ಬೆಡ್‌ನ್ನು ಸರಿಯಾಗಿ ಕ್ಲೀನ್ ಮಾಡಿ, ಮಲಗಬೇಕು ಅಂತಾ ಹೇಳೋದು.
ಇನ್ನು ವಾರಕ್ಕೆ 1 ಬಾರಿಯಾದರೂ ನೀವು ಬಳಸುವ ಬೆಡ್‌ಶೀಟ್ ಕ್ಲೀನ್ ಮಾಡಬೇಕು. ನಾವು ಡೈನಿಂಗ್ ಟೇಬಲ್, ಚೇರ್ ಇತ್ಯಾದಿಗಳ ಮೇಲೆ ಕುಳಿತು ಆಹಾರ ಸೇವನೆ ಮಾಡುವುದಕ್ಕಿಂತ, ನೆಲದ ಮೇಲೆ ಕುಳಿತು ಆಹಾರ ಸೇವನೆ ಮಾಡುವುದು ಸೂಕ್ತ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ.




