Life Lessons: ನಾವು 5 ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿದ್ರೆ ಆರ್ಥಿಕವಾಗಿ ಸಬಲರಾಗೋದು ಖಚಿತ

Life Lessons: ಇಂದಿನ ದಿನಗಳಲ್ಲಿ ಮುಂಚೆಗಿಂತಲೂ ಹೆಚ್ಚಿನ ಸಂಬಳವಿದೆ. ಅದೇ ರೀತಿ ಹಣದುಬ್ಬರವೂ ಹೆಚ್ಚಾಗಿದೆ. ಆದರೂ ಕೂಡ ಹೂಡಿಕೆ ಆಯ್ಕೆಗಳು ಕೂಡ ಹೆಚ್ಚಾಗಿದೆ. ಆದರೂ ಕೂಡ ನಾವೆಲ್ಲ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತಲೇ ಇಲ್ಲ. ಹಾಗಾದ್ರೆ ನಾವು ಯಾವ ಖರ್ಚು ವೆಚ್ಚವನ್ನು ಕಡಿಮೆ ಮಾಡಿದ್ರೆ, ಆರ್ಥಿಕವಾಗಿ ಸಬಲರಾಗಬಹುದು ಅಂತಾ ತಿಳಿಯೋಣ ಬನ್ನಿ.

ಪ್ಲಾನ್ ಮಾಡದೇ ಖರ್ಚು ಮಾಡೋದು: ಪ್ಲಾನ್ ಮಾಡದೇ ಖರ್ಚು ಮಾಡಿದ್ರೆ, ಯಾವುದಕ್ಕೆ ಖರ್ಚು ಮಾಡಿದ್ರಿ ಅನ್ನೋ ಲೆಕ್ಕ ಸಿಗೋದಿಲ್ಲ. ಹಾಗೆ ಮಾಡುತ್ತ ಮಾಡುತ್ತ ಉಳಿತಾಯ ಬಗ್ಗೆ ಯೋಚನೆಯೇ ಇರೋದಿಲ್ಲ. ಹಾಗಾಗಿ ಯಾವುದಕ್ಕೆ ಎಷ್ಟು ಖರ್ಚು ಮಾಡಿದ್ರಿ ಅನ್ನೋ ಬಗ್ಗೆ ಲೆಕ್ಕ ಇಡುವುದು ಉತ್ತಮ.

ಆನ್‌ಲೈನ್ ಶಾಪಿಂಗ್: ಆನ್‌ಲೈನ್‌ನಲ್ಲಿ ಯಾವುದಾದರೂ ವಸ್ತು, ವಸ್ತ್ರ ನೋಡಿದಾಗ, ಅದನ್ನು ಖರೀದಿಸುವ ಮನಸ್ಸಾಗುತ್ತದೆ. ಆದರೆ ಸಿಕ್ಕಿದ್ದೆಲ್ಲಾ ಖರೀದಿಸಿ, ಬೀರು ತುಂಬಿಸುವ ಬದಲು, ಅವಶ್ಯಕತೆ ಇದ್ದಿದ್ದಷ್ಟು ಮಾತ್ರ ಖರೀದಿಸುವುದೇ ಉತ್ತಮ. ಇದರಿಂದಲೂ ನೀವು ಹಣ ಉಳಿತಾಯ ಮಾಡಬಹುದು. 2 ತಿಂಗಳು ಆನ್‌ಲೈನ್ ಶಾಪಿಂಗ್ ಸ್ಟಾಪ್ ಮಾಡಿ ನೀವು ಡಿಫ್ರೆನ್ಸ್ ಕಾಣಬಹುದು.

ಇಎಂಐ : ಇಂದಿನ ಕಾಲದಲ್ಲಿ ಹೆಚ್ಚಿನವರು ಇಎಂಐ ಮೇಲೆಯೇ ಜೀವನ ನಡೆಸುತ್ತಿದ್ದಾರೆ. ಇಎಂಐ ಅಂದ್ರೆ ಬೇರೇನೂ ಅಲ್ಲ. ಸಾಲ. ಸಾಲದ ಸುಳಿಯನ್ನೇ ಮಾಡರ್ನ್‌ ಆಗಿ ಇಎಂಐ ಅಂತಿದ್ದಾರೆ. ಆನ್‌ಲೈನ್‌ಲ್ಲಿ ಇಎಂಐ ಆಪ್ಶನ್ ಇದ್ರೆ ಸಾಕು, ಆರ್ಡರ್ ಹಾಕೇ ಬಿಡುವುದು, ಕ್ರೆಡಿಟ್ ಕಾರ್ಡ್ ಉಜ್ಜೇ ಬಿಡುವುದು. ಇದೇ ಪ್ರಾಕ್ಟೀಸ್‌ನಿಂದ ಹಲವರ ಬ್ಯಾಂಕ್ ಬ್ಯಾಲೆನ್ಸ್ ತುಂಬದ ದುಸ್ಥಿತಿಗೆ ಬಂದಿದೆ. ಸ್ಯಾಲರಿ ಬಂದ ದಿನವೇ, ಆಟೋಮೆಟಿಕ್ ಆಗಿ ಎಲ್ಲ ಇಎಂಐ ಪಾಲಾಗುತ್ತಿದೆ. ಇಎಂಐ ನಿಂದ ವಸ್ತು ಖರೀದಿಸುವುದನ್ನು ಕಂಟ್ರೋಲ್ ಮಾಡಿದ್ರೆ ನೀವು ಆರ್ಥಿಕವಾಗಿ ಸಬಲರಾಗುತ್ತೀರಿ.

ಬೀದಿ ಬದಿ ಆಹಾರ ತಿನ್ನುವ ಚಟ: ವಾರಕ್ಕೆರಡು ಬಾರಿ ಚಾಟ್ಸ್ ತಿನ್ನೋಕ್ಕೆ ಹೋದ್ರೆ, ಅಲ್ಲಿಗೆ ದುಡ್ಡು ಖರ್ಚು, ಆರೋಗ್ಯವೂ ಖರ್ಚು. ಅದರ ಬದಲು, ಮನೆಯಲ್ಲೇ ರುಚಿಯಾದ ತಿಂಡಿ ಮಾಡಿ ತಿನ್ನಿ. ಬೀದಿ ಬಂದಿ ತಿಂಡಿ ತಿನ್ನೋದನ್ನು ಕಡಿಮೆ ಮಾಡಿ. ವಾರಕ್ಕೆ 1 ಬಾರಿ ಮಾತ್ರ, ಅದೂ ಕೂಡ ತಿನ್ನಲೇಬೇಕು ಅಂತಾ ಮನಸ್ಸಾದ್ರೆ ಮಾತ್ರಾ ತಿನ್ನಿ. ಇದಿರಂದಲೂ ನೀವು ದುಡ್ಡು ಉಳಿಸಬಹುದು.

ಬಿಲ್ಡಪ್‌ಗಾಗಿ ಖರ್ಚು ಮಾಡೋದು: ಇಂದಿನ ಕಾಲದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬಿಲ್ಡಪ್ ತೋರಿಸಿ ಬದುಕುವವರ ಸಂಖ್ಯೆ ಹೆಚ್ಚಾಗಿದೆ. ಯಾರೋ ಪ್ರವಾಸಕ್ಕೆ ಹೋಗಿರೋ ವೀಡಿಯೋನಾ ಡಿಸೈನ್ ಡಿಸೈನ್ ಆಗಿ ಎಡಿಟ್ ಮಾಡಿರೋದನ್ನ ನೋಡಿ, ಇನ್ನ“ಬ್ಬರೂ ಅದೇ ರೀತಿ ಹೋಗೋದು. ಯಾರೋ ರೆಸ್ಟೋರೆಂಟ್, ಪಬ್, ಕ್ಲಬ್, ಎಂಜಾಯ್ ಮಾಡೋಕ್ಕೆ ಹೋದ್ರೂ ಅಂತಾ ನಾವು ಹಾಗೆ ಮಾಡೋಕ್ಕೆ ಹೋಗಿ, ಅಲ್ಲೇ ನಮ್ಮ ಹೆಚ್ಚಿನ ಹಣ ಪೋಲಾಗುತ್ತಿದೆ. ಇಂಥ ಅಭ್ಯಾಸ ತಪ್ಪಿಸದಿದ್ದರೆ, ಭವಿಷ್ಯದಲ್ಲಿ ಭಾರೀ ಸಮಸ್ಯೆ ಎದುರಿಸುವುದು ಖಚಿತ.

ಸಣ್ಣ ಖರ್ಚನ್ನು ನಿರ್ಲಕ್ಷಿಸುವುದು: ಇನ್ನು ಸಣ್ಣ ಖರ್ಚನ್ನು ನಾವು ನಿರ್ಲಕ್ಷಿಸುತ್ತೇವೆ. ಪ್ರತಿದಿನ ಕುಡಿಯುವ 20ರಿಂದ 30 ರೂಪಾಯಿ ಬೆಲೆ ಬಾಳೋ ಚಹಾ. ದಿನಕ್ಕೆ ಎರಡು ಬಾರಿ ಆಚೆ ಚಹಾ ಕುಡಿದರೂ 60 ರೂಪಾಯಿ ಖರ್ಚಾಗುತ್ತದೆ. ಅಲ್ಲಿಗೆ ವರ್ಷಕ್ಕೆ ಎಷ್ಟು ಖರ್ಚು ಅಂತಾ ನೀವೇ ಲೆಕ್ಕ ಹಾಕಿ. ಇದೇ ರೀತಿ ಸಣ್ಣ ಖರ್ಚು ಕೂಡ ನಮ್ಮ ಉಳಿತಾಯದ ಹಣ ನುಂಗಬಹುದು. ಹಾಗಾಗಿ ಸಣ್ಣ ಖರ್ಚುಗಳ ಲೆಕ್ಕವಿಡಲೇಬೇಕು. ಇದೆಲ್ಲದರ ಜತೆಗೆ ನಾವು ಹಣ ಹೂಡಿಕೆ ಮಾಡದಿದ್ದಲ್ಲಿ, ನಾವು ಆರ್ಥಿಕವಾಗಿ ಸಬಲರಾಗಲು ಎಂದಿಗೂ ಸಾಧ್ಯವಾಗೋದಿಲ್ಲ.

About The Author