Saturday, January 18, 2025

Latest Posts

Life Style: ಸಂಬಂಧಗಳನ್ನು ಗಟ್ಟಿಯಾಗಿರಿಸಿಕೊಳ್ಳಲು ಇಲ್ಲಿದೆ ಸಿಂಪಲ್ ಟಿಪ್ಸ್

- Advertisement -

Life Style: ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆ ಕಡಿಮೆಯಾಗುತ್ತಿದೆ. ಇದಕ್ಕೆ ಉದಾಹರಣೆ ಅಂದ್ರೆ ಸೆಲೆಬ್ರಿಟಿಗಳ ಲೈಫ್. ಇದೇ ವರ್ಷ ಅದೆಷ್ಟು ಸೆಲೆಬ್ರಿಟಿಗಳು ವಿಚ್ಛೇದನ ಪಡೆದಿದ್ದಾರೆ. ಹಾಗಾದ್ರೆ ಸಂಬಂಧಗಳು ಯಾಕೆ ಹಾಳಾಗುತ್ತಿದೆ..? ಮತ್ತು ಸಂಬಂಧ ಗಟ್ಟಿಯಾಗಿ ಇರಿಸಿಕೊಳ್ಳಲು ನಾವೇನು ಮಾಡಬೇಕು ಅನ್ನೋ ಬಗ್ಗೆ ಸಿಂಪಲ್ ಟಿಪ್ಸ್ ಇಲ್ಲಿದೆ ನೋಡಿ.

ಮೊದಲನೇಯದಾಗಿ ನಾವು ಗೌರವ ನೀಡಿದರೆ, ನಮಗೆ ಗೌರವ ಸಿಗುತ್ತದೆ. ಪ್ರೀತಿ ನೀಡಿದರೆ, ಪ್ರೀತಿ ಸಿಗುತ್ತದೆ. ಆದರೆ ಮೊದಲು ಅವರೇ ಮಾತನಾಡಿಸಲಿ, ಅವರೇ ರಮಿಸಲು ಬರಲಿ ಎಂಬ ಈಗೋ ಯಿಂದಲೇ ಒಂದು ಸಂಸಾರ ಹಾಳಾಗೋದು. ನಾವು ಪ್ರೀತಿಸಿದರೆ, ಕಾಳಜಿ ವಹಿಸಿದರೆ, ಗೌರವಿಸಿದರೆ, ಕ್ಷಮೆ ಕೇಳಿ ಮುಂದುವರೆದರೆ, ನಮ್ಮ ಜೀವನ ಊಹಿಸಲಾಗದಷ್ಟು ಸುಖವಾಗಿ ಇರುತ್ತದೆ.

ಆದರೆ ಯಾವಾಗ ಸಂಬಂಧದಲ್ಲಿ ಅವರೇ ಬರಲಿ, ಅವರೇ ಮೊದಲು ಪ್ರೀತಿಸಲಿ, ಕ್ಷಮೆ ಕೇಳಲಿ ಎನ್ನುವ ಅಹಂ ಬರುತ್ತದೆಯೋ, ಅಂದೇ ಸಂಬಂಧ ಅರ್ಧ ಮುರಿದ ಹಾಗೆ. ಹಾಗಾಗಿ ಸಂಬಂದ ಗಟ್ಟಿಯಾಗಿ ಇರಿಸಲು ನಾವು ಕೊಡುವ ಮೊದಲ ಟಿಪ್ಸ್ ಅಂದ್ರೆ, ಕೋಪ, ತಾಪ, ಜಗಳವೇನೇ ಇರಲಿ, ಮೊದಲು ಎಲ್ಲವನ್ನೂ ಮರೆತು, ಪ್ರೀತಿಯಿಂದ ಇರಲು ಕಲಿಯಿರಿ.

ಎರಡನೇಯದಾಗಿ ಪತಿ-ಪತ್ನಿ ಜಗಳ ನಡೆದಾಗ, ಪತಿಯಾದವನು ಅವನ ತಂದೆ ತಾಯಿ, ಸಹೋದರ- ಸಹೋದರಿಯ ಬಳಿ, ಪತ್ನಿಯಾದವಳು ತವರು ಮನೆಯವರ ಬಳಿ ಆ ಬಗ್ಗೆ ಎಂದಿಗೂ ಚರ್ಚಿಸಬೇಡಿ. ಇಂದು ನಿಮ್ಮ ಜಗಳದ ವಿಷಯ ಕೇಳಿ, ನಿಮ್ಮನ್ನು ಸಮಾಧಾನ ಮಾಡಿದ ರಕ್ತ ಸಂಬಂಧಿಕರೇ, ಮುಂದೊಂದು ದಿನ ನಿಮ್ಮ ಜಗಳದ ವಿಷಯ ತೆಗೆದು, ಹೊಟ್ಟೆಕಿಚ್ಚಿನಿಂದ ಹಂಗಿಸುತ್ತಾರೆ. ಎಲ್ಲರೆದುರು ನಿಮ್ಮನ್ನು ಅವಮಾನಿಸಲು ನೋಡುತ್ತಾರೆ. ನಿಮ್ಮ ಬಗ್ಗೆ ಜೋಕ್ ಮಾಡುತ್ತಾರೆ. ಸಂಬಂಧ ಹಾಳಾಗಲು ಇಷ್ಟೇ ಸಾಕು.

ಇದೇ ರೀತಿ ಅಕ್ಕಪಕ್ಕದ ಮನೆಯವರು, ಸಹೋದ್ಯೋಗಿಗಳು, ಸ್ನೇಹಿತರು. ಇವರೆಲ್ಲರಿಗೂ ಇದೇ ನಿಯಮ ಅನುಸರಿಸಿ. ಏನೇ ಜಗಳವಾದರೂ ಅದು ನಿಮ್ಮ ನಿಮ್ಮ ಮಧ್ಯೆಯೇ ಇರುವಂತೆ ನೋಡಿಕೊಳ್ಳಿ. ಏನೇ ಸಮಸ್ಯೆ ಬಂದರೂ ಆದಷ್ಟು ನೀವೇ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ.

ಮೂರನೇಯದಾಗಿ ಒಬ್ಬರಿಗೊಬ್ಬರು ಗೌರವಿಸಿ. ಹಳೆಯ ವಿಷಯವನ್ನು ನೆನಪು ಮಾಡಿ, ಹಂಗಿಸುವುದು, ಟೀಕಿಸುವುದು, ತಮಾಷೆ ಮಾಡುವುದರಿಂದಲೂ, ಸಂಬಂಧಗಳು ಹಾಳಾಗುತ್ತದೆ. ಇದೆಲ್ಲದರಿಂದಲೂ ಸಂಬಂಧ ಹಾಳಾಗುತ್ತದೆ. ಸಣ್ಣ ಸಣ್ಣ ವಿಷಯಗಳನ್ನು ದೊಡ್ಡದು ಮಾಡಿ, ಸಂಬಂಧ ಮುರಿದುಕೊಳ್ಳುವ ಬದಲು, ಜಗಳ ಮುರಿದು ಸಂಬಂಧ ಗಟ್ಟಿಗೊಳಿಸಿ.

- Advertisement -

Latest Posts

Don't Miss