Bengaluru News: ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಿದ್ದಕ್ಕೆ, ರಾಜ್ಯ ಸರ್ಕಾರದ ವಿರುದ್ಧ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ.
ಏಕೆಂದರೆ, ಜಗದೀಶ್ ಅವರು ಕೆಎಂಎಫ್ ಉದ್ಯಮವನ್ನು ವಿಸ್ತರಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದು, ಹಲವು ಕಡೆಗಳಲ್ಲಿ ಪ್ರಾಯೋಜಕತ್ವ ನೀಡಿ ಸುದ್ದಿಯಾಗಿದ್ದರು. ಇಷ್ಟು ಉತ್ತಮ ಲಾಭ ಮಾಡಿಕೊಡಲು ಸಹಕರಿಸಿದ್ದ ಜಗದೀಶ್ ಅವರನ್ನು ಏಕಾಏಕಿ ವರ್ಗಾಯಿಸಿದ್ದು, ಕನ್ನಡಿಗರ ಬೇಸರಕ್ಕೆ ಕಾರಣವಾಗಿದೆ.
ಜಗದೀಶ್ ಅವರು ಹಾಲಿನ ಜೊತೆಗೆ ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು, ವಿದೇಶಕ್ಕೆ ರಫ್ತು ಮಾಡಲು, ನಂದಿನಿಯನ್ನು ದೊಡ್ಡ ಬ್ರ್ಯಾಂಡ್ ಆಗಿ ಮಾಡುವಲ್ಲಿ ಉತ್ತಮವಾಗಿ ಬೆಂಬಲ ನೀಡಿದ್ದರು. ಇದೀಗ ಬೆಂಗಳೂರಿನಲ್ಲಿ ದೋಸೆ ಹಿಟ್ಟು, ಇಡ್ಲಿ ಹಿಟ್ಟು, ಹಲವು ರೇಡಿಮೇಡ್ ಮಿಕ್ಸ್‌ಗಳನ್ನು ಮಾರಾಟ ಮಾಡಲು ತಯಾರಿ ನಡೆಸುತ್ತಿದೆ.
ಇಷ್ಟೇ ಅಲ್ಲದೇ, ತಿರುಪತಿಯಲ್ಲಿ ತುಪ್ಪದ ಪ್ರಕರಣವಾದ ಬಳಿಕ, ನಂದಿನಿ ತುಪ್ಪವನ್ನೇ ಬಳಸಬೇಕು. ಅದು ಶುದ್ಧ ತುಪ್ಪವೆಂದು ಹೇಳಿ, ತಿರುಪತಿ ನಂದಿನಿ ತುಪ್ಪಕ್ಕಾಗಿ ಬೇಡಿಕೆ ಇಟ್ಟಿದ್ದು, ಕನ್ನಡಿಗರ ಪಾಲಿನ ದೊಡ್ಡ ಗೆಲುವಾಗಿತ್ತು. ಇಷ್ಟೆಲ್ಲ ಉತ್ತಮ ಕಾರ್ಯಗಳಿಗೆ ಜಗದೀಶ್ ಸಾಕ್ಷಿಯಾಗಿದ್ದರು.
ಆದರೆ ಜಗದೀಶ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿರುವುದನ್ನು ಕಂಡು, ಇದರ ಹಿಂದೆ ಕೇರಳದ ಲಾಭಿ ಇದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ, ಕೆಲವು ಕಂಪನಿಗಳು ದೋಸೆ, ಇಡ್ಲಿ ಹಿಟ್ಟು ಮಾರುಕಟ್ಟೆಗೆ ಬರದಂತೆ ತಡೆಯಲು ಈ ರೀತಿ ಮಾಡಿದೆ ಎನ್ನುವ ಆರೋಪವೂ ಕೇಳಿ ಬಂದಿದೆ.