Life Style: ಹಲವರ ಜೀವನದಲ್ಲಿ ಕೆಲವು ಸಂಬಂಧಗಳು, ಉಸಿರುಗಟ್ಟಿಸುವಂತಿರುತ್ತದೆ. ಅದು ಖುದ್ದು ರಕ್ತ ಸಂಬಂಧವೇ ಆಗಿರಬಹುದು. ಅಥವಾ ಪತಿ- ಪತ್ನಿ ಸಂಬಂಧವೇ ಆಗಿರಬಹುದು, ಅಥವಾ ಇನ್ಯಾವುದೇ ಸಂಬಂಧವಾಗಿರಬಹುದು. ಇಂಥ ವೇಳೆ ಎಷ್ಟೋ ಜನ, ಮಾನಸಿಕ ಹಿಂಸೆ ತಡೆಯಲಾಗದೇ, ಆತ್ಮಹತ್ಯೆಗೆ ಶರಣಾಗುತ್ತಾರೆ. ಹಾಗಾಗಿ ಇಂದು ನಾವು ಅಂಥ ವಿಷಕಾರಿ ಸಂಬಂಧದಿಂದ ಹೇಗೆ ಮುಕ್ತಿ ಪಡೆಯಬೇಕು ಅಂತಾ ಹೇಳಲಿದ್ದೇವೆ.
ಮೊದಲನೇಯದಾಗಿ ಯಾವುದೇ ಸಂಬಂಧದಿಂದ ಬಿಡುಗಡೆ ಹೊಂದುವ ಮುನ್ನ, ಆ ಸಂಬಂಧ ಮುಂದುವರಿಯುವ, ಇಬ್ಬರೂ ತಮ್ಮ ನಡುವಳಿಕೆಯಲ್ಲಿ ಸುಧಾರಿಸುವ ಲಕ್ಷಣವಿದೆಯಾ ಎನ್ನುವುದನ್ನು ಪರೀಕ್ಷಿಸಬೇಕು. ಒಬ್ಬರು ಮೌನ, ತಾಳ್ಮೆ ವಹಿಸಿ, ಮೊದಲು ಹೋಗಿ ಮಾತನಾಡಿಸುವುದು, ಪ್ರೀತಿಸುವುದು, ಅಹಂ ಬಿಟ್ಟು ಬದುಕಲು ಕಲಿತರೆ, ಇನ್ನೊಬ್ಬರು ಅವರ ದಾರಿಯಲ್ಲೇ ಜೊತೆಯಾಗಿ, ಅತ್ಯುತ್ತಮವಾಗಿ ಬಾಳ್ವೆ ಮಾಡುತ್ತಾರೆ.
ಆದರೆ ಎಷ್ಟೇ ಕಾಳಜಿ, ಪ್ರೀತಿ ಕೊಟ್ಟರೂ, ಜವಾಬ್ದಾರಿ ನಿಭಾಯಿಸಿದರೂ, ಎದುರಿನವರು ಬದಲಾಗುತ್ತಿಲ್ಲವೆಂದಲ್ಲಿ ಅಂಥ ಸಂಬಂಧದಿಂದ ಹೊರಬರುವುದೇ ಲೇಸು. ಪದೇ ಪದೇ ನಿಮ್ಮ ಆತ್ಮಸಮ್ಮಾನಕ್ಕೆ ಧಕ್ಕೆಯಾಗುವಂತೆ ಎದುರಿನವರು ನಡೆದುಕೊಂಡರೆ, ನಿಮ್ಮ ಪರ ನೀವು ನಿಲ್ಲಲೇಬೇಕು. ಮಿಸ್ ಅಂಡಸ್ಟಾಂಡಿಂಗ್ ಇದ್ದಾಗ ಮಾತ್ರ, ಅದನ್ನು ಕೂತು ಮಾತಾಡಿ ಬಗೆಹರಿಸಿಕೊಳ್ಳಬಹುದು. ಆದರೆ ಎದುರಿನವರಿಗೆ ನಿಮ್ಮನ್ನು ಹಂಗಿಸಿ, ನಿಮ್ಮ ಮನಸ್ಸು ನೋಯಿಸಲೇಬೇಕು ಎನ್ನುವ ಇಂಟೆನ್ಶನ್ ಇದ್ದಾಗ, ಅಂಥವರಿಂದ ದೂರವಾಗುವುದು ಒಳಿತು.
ಇದು ಒಂದು ಸಂಬಂಧ ಹಾಳು ಮಾಡುವ ಸಲಹೆಯ ರೀತಿ ಕಂಡರೂ, ಇಂಥ ಸಂಬಂಧ ದೂರವಾಗಿ, ಅದೆಷ್ಟೋ ಜನರ ಪ್ರಾಣವಾದರೂ ಉಳಿಯುತ್ತದೆ. ಯಾರೋ ಮಾತನಾಡುತ್ತಾರೆ, ಯಾರನ್ನೋ ಇಂಪ್ರೆಸ್ ಮಾಡಬೇಕು ಎನ್ನುವ ಭರದಲ್ಲಿ ನಾವು ಮಾನಸಿಕವಾಗಿ ಕುಗ್ಗಿಹೋಗುವುದು ಎಂದಿಗೂ ಉತ್ತಮವಲ್ಲ. ಜೀವನವನ್ನು ನಿಮ್ಮ ರೀತಿಯಲ್ಲಿ ಆನಂದಿಸುವುದನ್ನು ಕಲಿಯಿರಿ.