Chithradurga News: ಚಿತ್ರದುರ್ಗ: ಜಿಲ್ಲೆಯ ನಾಯಕನಹಟ್ಟಿ ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ 18 ವರ್ಷದೊಳಗಿನ ಹೊನಲು ಬೆಳಕಿನ ಕಬಡ್ಡಿ ಪ್ರೀಮಿಯರ್ ಲೀಗ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು. ನಾಯಕನಹಟ್ಟಿ ಸ್ಪೋರ್ಟ್ಸ್ ಕ್ಲಬ್ ಮತ್ತು ಚಿತ್ರದುರ್ಗ ಸ್ಪೋರ್ಟ್ಸ್ ಕ್ಲಬ್ ಸಹಯೋಗದೊಂದಿಗೆ ಈ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು.
ಗ್ರಾಮೀಣ ಕ್ರೀಡೆಯಾದ ಕಬ್ಬಡಿಯು ಚಳ್ಳಕೆರೆ ತಾಲೂಕಿನ ಗ್ರಾಮಗಳ ಯುವ ಪ್ರತಿಭೆಗಳನ್ನು ಹೊರ ತೆಗೆಯುವುದಕ್ಕಾಗಿ, ಮತ್ತು ಈ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ನೀಡುವುದಕ್ಕಾಗಿ. ಯುವಕರಲ್ಲಿ ಸದೃಢತೆ ಚೈತನ್ಯ ಕ್ರೀಡೆಗಳ ಮೇಲೆ ಆಸಕ್ತಿಯನ್ನು ಬೆಳೆಸುವ ಸಲುವಾಗಿ, ಈ ಪ್ರೊ ಮಾದರಿಯ ಕಬ್ಬಡಿ ಪಂದ್ಯಾವಳಿಯನ್ನು ನಡೆಸಿದ್ದೇವೆ.
ನಮ್ಮ ನಮ್ಮ ಜಿಲ್ಲೆಯಲ್ಲಿ ಇರುವಂತಹ ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದಕ್ಕಂತಹ ಕ್ರೀಡಾಪಟುಗಳನ್ನು ಕರೆಯಿಸಿ, ಗೌರವಿಸಿ ಮಾರ್ಗದರ್ಶನವನ್ನು ಸ್ಪೂರ್ತಿ ತುಂಬುವ ಕೆಲಸವನ್ನು ಮಾಡಿದ್ದೇವೆ. ಶಿಕ್ಷಣದ ಜೊತೆ ಜೊತೆಗೆ ಕ್ರೀಡೆಯಲ್ಲಿ ಸಹ ಹುದ್ದೆಗಳನ್ನು ಪಡೆಯಬಹುದು ಎಂಬುದರ ಜೊತೆಗೆ ,ದೇಹ ಮತ್ತು ಮನಸ್ಸು ಸದೃಢಗೊಳಿಸಿಕೊಳ್ಳಬಹುದು ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದೇವೆ.
ನಮ್ಮ ಪಟ್ಟಣದ ಅಭಿನಂದನ್ ಕರ್ನಾಟಕ ಜೂನಿಯರ್ ಕಬಡ್ಡಿ ತಂಡದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ತಂದು, ನಾಯಕನಹಟ್ಟಿ ಪಟ್ಟಣಕ್ಕೆ ಕೀರ್ತಿ ತಂದಿದ್ದಾರೆ. ರಾಜ್ಯದ ಪ್ರಮುಖ ಕಬ್ಬಡಿ ಪಂದ್ಯಾವಳಿಗಳಲ್ಲಿ ಭಾಗವಹಿಸಿದ ಚಂದನ್, ಮುಂತಾದವರು ಈ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಮಕ್ಕಳಿಗೆ ತರಬೇತುದಾರರಾಗಿ ತರಬೇತಿಯನ್ನು ಕೊಡುತ್ತಿದ್ದಾರೆ. ಪಟ್ಟಣದ ಎಲ್ಲಾ ವಿಭಾಗದ ಕ್ರೀಡಾಪಟುಗಳು ಕ್ರೀಡಾ ಪ್ರೋತ್ಸಾಹಕರು, ಪಟ್ಟಣ ಪಂಚಾಯಿತಿ ಆರೋಗ್ಯ ಇಲಾಖೆ ಪೊಲೀಸ್ ಇಲಾಖೆಗಳ ಸಹಕರಕ್ಕಾಗಿ ಧನ್ಯವಾದಗಳು ತಿಳಿಸುತ್ತೇನೆ. ಈ ಪಂದ್ಯದಲ್ಲಿ ಆರು ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಪ್ರಥಮ ಸ್ಥಾನವನ್ನು ವಿವಿಎಸ್ ರೈಡರ್ಸ್ ಪ್ರಥಮ ಸ್ಥಾನ ಪಡೆಯಿತು. ತಂಡದ ನಾಯಕನಾದ ಹರ್ಷವರ್ಧಟನ್ ಪ್ರಥಮ ಬಹುಮಾನವನ್ನು ಎತ್ತಿ ಹಿಡಿದು ಸಂಭ್ರಮಿಸಿದರು. ದ್ವಿತೀಯ ಸ್ಥಾನವನ್ನು ಸಿಟಿಸಿ ರೈಡರ್ಸ್ ಪಡೆದುಕೊಂಡರು. ಉತ್ತಮ ರೈಡರ್ ಆಗಿ ಸಂದೀಪ್ . ಉತ್ತಮ ಕ್ಯಾಚರ್ ಭಟ್ಟ. ಉತ್ತಮ ಆಲ್ ರೌಂಡರ್ ಆಗಿ ಹರ್ಷ . ಎನರ್ಜೆಟಿಕ್ ಯಶವಂತ್ .ಉತ್ತಮ ಡಿಫರೆನ್ಸ್ ಆಗಿ ಪಜಲ್. ಚೈನ್ ಟೀಮ್ ಕ್ಯಾಪ್ ಲಕ್ಷ ರವರು ಪಡೆದುಕೊಂಡರು ಎಂದು ಆಯೋಜಕರಾದ ಆಸೀಫ್ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರು, ಬಿಜೆಪಿ ಮುಖಂಡರಾದ ಯತ್ನಟ್ಟಿ ಗೌಡ್ರು, ತ್ರಿಶೂಲ್, ಮಧು, ವೇಣುಗೋಪಾಲ್, ಧನಂಜಯ್, ರಾಜು, ಸುತ್ತಮುತ್ತಲಿನ ಗ್ರಾಮಸ್ಥರು ಕ್ರೀಡಾಪಟುಗಳು ಕ್ರೀಡಾಸಕ್ತರು ಭಾಗಿಯಾಗಿದ್ದರು.
ಕಾಂಗ್ರೆಸ್’ನವರು ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ: Govind Karajola
ಕಮಲ ಪಡೆಗೆ ಮತ್ತೊಂದು ಶಾಕ್ ಕೊಟ್ಟ ಜಗದೀಶ್ ಶೆಟ್ಟರ್; ಬಿಜೆಪಿಯ ಮತ್ತೊಬ್ಬ ಮಾಜಿ ಶಾಸಕ ಕಾಂಗ್ರೆಸ್ಗೆ