Sunday, September 8, 2024

Latest Posts

ರಜತ್ ಬೆಂಬಲಿಗರಿಂದ ಸಮಾನ ಮನಸ್ಕರ ಸಭೆ: ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡುವಂತೆ ನಿರ್ಣಯ

- Advertisement -

Hubli News: ಹುಬ್ಬಳ್ಳಿ : ಹುಬ್ಬಳ್ಳಿಯ ಗೋಕುಲ್ ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ರಜತ್ ಉಳ್ಳಾಗಡ್ಡಿ ಬೆಂಬಲಿಗರು, ಹಿತೈಷಿಗಳು ಹಾಗೂ ಕಾಂಗ್ರೆಸ್ ಮುಖಂಡರು ಸೇರಿ ಸಮಾನ ಮನಸ್ಕರರ ಸಭೆ ನಡೆಸಿದರು.

ಸಭೆಯಲ್ಲಿ ಮುಖ್ಯವಾಗಿ ಈ ಬಾರಿ ಲೋಕಸಭೆ ಚುನಾವಣೆಗೆ ರಜತ್ ಉಳ್ಳಾಗಡ್ಡಿಮಠ ಪ್ರಬಲ ಆಕಾಂಕ್ಷಿ ಯಾಗಿದ್ದರು. ಆದ್ರೆ ಹೈ ಕಮಾಂಡ್ ಇವರನ್ನು ಪರಿಗಣಿಸದೆ ವಿನೋದ್ ಅಸೋಟಿ ಅವರನ್ನು ಅಭ್ಯರ್ಥಿ ಮಾಡಿರುವ ಕುರಿತು ಹಲವು ಮುಖಂಡರು ಚರ್ಚೆ ನಡೆಸಿ ತಮ್ಮ ಅಭಿಪ್ರಾಯ ತಿಳಿಸಿದರು.

ಅವಳಿನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ್ ಮಾತನಾಡಿ ರಜತ್ ಉಳ್ಳಾಗಡ್ಡಿಮಠಗೆ ಜಗದೀಶ್ ಶೆಟ್ಟರ್ ಆಗಮನದಿಂದ ಒಂದು ಸಾರಿ ಟಿಕೆಟ್ ತಪ್ಪಿತು. ಈಗ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯದ ಅಡಿಯಲ್ಲಿ ಟಿಕೆಟ್ ಹಂಚಿಕೆ ಯಾಗಿರುವುದರಿಂದ ಟಿಕೆಟ್ ಕೈ ತಪ್ಪಿಸುವುದು ದುರದೃಷ್ಟಕರ ಎಂದರು. ಅಲ್ಲದೆ ಮುಂದಿನ ದಿನಗಳಲ್ಲಿ ರಜತ್ ಉಳ್ಳಾಗಡ್ಡಿಮಠಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಿ ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ ಎಂದು ಹೇಳಿದರು.

ಹುಧಾಮಪ ವಿರೋಧ ಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲಾ
ಮಾತನಾಡಿ ಈ ಹಿಂದೆ ರಜತ್ ಸಂಬ್ರಮ ಕಾರ್ಯಕ್ರಮ ನಡೆಸಿದ ಸಂದರ್ಭದಲ್ಲಿ ರಜತ್ ಉಳ್ಳಾಗಡ್ಡಿಮಠ ಪಾದ್ರಿಗಳು, ಮೌಲ್ವಿಗಳು, ಸ್ವಾಮೀಜಿಗಳು, ರಿಕ್ಷಾ ಚಾಲಕರು, ಜೋಗಮ್ಮನವರು ಸೇರಿದಂತೆ ಸಮಾಜದಲ್ಲಿ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುವರಿಗೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಅಲ್ಲದೆ ಸೆಂಟ್ರಲ್ ಕ್ಷೇತ್ರದಲ್ಲಿ ಸಾಕಷ್ಟು ಸಂಘಟನೆ ಮಾಡಿ ನಮಗೆ ಬಲ ತಂದಿದ್ದಾರೆ ಇವರಿಗೆ ಟಿಕೆಟ್ ತಪ್ಪಬಾರದಾಗಿತ್ತು ಎಂದು ಹೇಳಿದರು

ಇನ್ನು ರಜತ್ ಉಳ್ಳಾಗಡ್ಡಿಮಠ ಮಾತನಾಡಿ ಕಳೆದ ಎಂಟು ತಿಂಗಳಿಂದ ನಾನು ಪಕ್ಷ ಸಂಘಟನೆ ಮಾಡಿದ್ದೆ.ಎಲ್ಲ ಸರ್ವೆ ಯಲ್ಲೂ ನನ್ನ ಹೆಸರು ಮುನ್ನಡೆಯಲ್ಲಿತ್ತು..ಆದ್ರೆ ಇದೀಗ ಟಿಕೆಟ್ ಬೇರೆಯವರಿಗೆ ಘೋಷಣೆ ಆಗಿದೆ, MLA ಚುನಾವಣೆಯಲ್ಲೂ ನನಗೆ ಟಿಕೆಟ್ ತಪ್ಪಿತ್ತು. ಚುನಾವಣೆಯಲ್ಲಿ ನಾನು ಪರೀಕ್ಷೆ ಬರೆದ್ರು ಆನ್ಸರ್ ಸೀಟ್ ಕಸಿದುಕೊಂಡು ಹೋದ್ರು. ಆದ್ರೆ ವೀಕ್ ಕ್ಯಾಂಡಿಡೇಟ್ ಗೆ ಟೀಕೆಟ್ ಕೊಟ್ರು. ಅವರು ಹತ್ತು ಮಾರ್ಕ್ಸ್ ತೆಗೆದುಕೊಳ್ಳಲಿಲ್ಲ. ಆ ರೀತಿಯಾಗಿ ಸೋಲನ್ನು ಅನುಭವಿಸದರು.ಈ ಬಾರಿ ನಾನು ಟಿಕೆಟ್ ಪಡೆಯುವಲ್ಲಿ ವಿಫಲನಾಗಿದ್ದೇನೆ. ಯೋಗ್ಯತೆ ಇದ್ರೂ ಯೋಗ ಇಲ್ಲ ಎಂದು ರಜತ್ ಉಳ್ಳಾಗಡ್ಡಿಮಠ ಅಸಮಾಧಾನ ಹೊರಹಾಕಿದರು.

ಸಭೆಯಲ್ಲಿ ಒಟ್ಟಾರೆಯಾಗಿ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೋಟಿ ಪರವಾಗಿ ಕೆಲಸ ಮಾಡುವಂತೆ ನಿರ್ಣಯ ಮಂಡಿಸಿ, ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವ ಶಪಥ ಕೈಗೊಳ್ಳಲಾಗಿತು.

ಸಭೆಯಲ್ಲಿ ಪಾಲಿಕೆ ಸದಸ್ಯರಾದ ಆರೀಫ್ ಭದ್ರಾಪುರ, ಇಕ್ಬಾಲ್ ನವಲೂರು, ನವನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತ ಕೊರವರ್, ಧಾರವಾಡ ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಗುರು ಬೆಂಗೇರಿ, ಸರೋಜಾ ಹೂಗಾರ, ಕಲ್ಲಪ್ಪ ವಾಲಿಕಾರ, ಬಾಳಮ್ಮ ಜಂಗನವರ್, ಮಹೇಶ್ ಧಾಬಡೆ, ರವೀಂದ್ರ ಹರ್ತಿ,ಸುನಿಲ್ ಮಠಪತಿ ಸೇರಿದಂತೆ ಐನೂರು ಕ್ಕು ಹೆಚ್ಚು ಕಾರ್ಯಕರ್ತರು ಮತ್ತು ಬೆಂಬಲಿಗರು ಹಾಜರಿದ್ದರು.

ಮರಿತಿಬ್ಬೇಗೌಡ ಸೇರಿ ಬಿಜೆಪಿ, ಜೆಡಿಎಸ್‌ನ ಹಲವರು ಕಾಂಗ್ರೆಸ್‌ಗೆ ಸೇರ್ಪಡೆ

ಯಾವ ಮುಖ ಇಟ್ಟುಕೊಂಡು ನಾನೊಬ್ಬ ದಲಿತೋದ್ಧಾರಕ ಎನ್ನುತ್ತೀರಿ?: ಪ್ರಿಯಾಂಕ್ ವಿರುದ್ಧ ಪ್ರೀತಂ ವಾಗ್ದಾಳಿ

ಕೋಟ ಶ್ರೀನಿವಾಸ ಪೂಜಾರಿಗೆ 25 ಸಾವಿರ ರೂ. ಚುನಾವಣಾ ಠೇವಣಿ ನೀಡಿದ ಚುರುಮುರಿ ಅಂಗಡಿ ಮಾಲೀಕ

- Advertisement -

Latest Posts

Don't Miss