National Political News: ದೆಹಲಿ ಸಿಎಂ ಅರವಿಂದ್‌ಗೆ ಕೇಜ್ರಿವಾಲ್‌ಗೆ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಬಾರಿ ಸಮನ್ಸ್ ನೀಡಲಾಗಿದ್ದು, ಇಂದು ಕೇಜ್ರಿವಾಲ್ ವಿಚಾರಣೆಗೆ ಹಾಜರಾಗಿದ್ದಾರೆ.
ಆದರೆ ತಾವು ಇರುವ ಜಾಗದಿಂದಲೇ ಕೇಜ್ರಿವಾಲ್, ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದಾರೆ. ಮದ್ಯ ನೀತಿ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಯಾದ ಆರೋಪವಿದ್ದ ಕಾರಣ, ಕೇಜ್ರಿವಾಲ್‌ಗೆ ಕೋರ್ಟ್ ವಿಚಾರಣೆಗೆ ಕರೆದಿತ್ತು. ಆದರೆ ಇದು ರಾಜಕೀಯ ಪ್ರೇರಿತ ವಿಚಾರಣೆ. ಲೋಕಸಭೆ ಹತ್ತಿರ ಬರುತ್ತಿರುವ ಕಾರಣಕ್ಕೆ, ನನ್ನ ಹೆಸರು ಹಾಳು ಮಾಡಲು, ಈ ರೀತಿ ವಿಚಾರಣೆಗೆ ಕರೆಯಲಾಗುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದರು. ಮತ್ತು 5 ಬಾರಿ ವಿಚಾರಣೆಗೆ ಗೈರಾಗಿದ್ದರು. ಇದೀಗ 6ನೇ ಬಾರಿ ವಿಚಾರಣೆಗೆ ಹಾಜರಾಗಿದ್ದಾರೆ.
ದೆಹಲಿಯಲ್ಲಿ ಕಲಾಪ ನಡೆಯುತ್ತಿದ್ದು, ವಿಶ್ವಾಸ ಮತಯಾಚನೆ ನಡೆಯಲಿದೆ. ಹಾಗಾಗಿ ಕೋರ್ಟ್‌ಗೆ ಹೋಗಿ, ಹಾಜರಾಗಲು ಸಾಧ್ಯವಾಗಿರದ ಕಾರಣಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ವೀಡಿಯೋಕಾಾನ್ಫರೆನ್ಸ್ ಮೂಲಕ, ವಿಚಾರಣೆಗೆ ಹಾಜರಾಗಿದ್ದಾರೆಂದು, ಕೇಜ್ರಿವಾಲ್ ಪರ ವಕೀಲರು ಹೇಳಿದ್ದಾರೆ. ಅಲ್ಲದೇ, ಮುಂದೆ ವಿಚಾರಣೆಗೆ ಕರೆದರೆ, ಕೋರ್ಟ್‌ಗೆ ಹೋಗಿ, ವಿಚಾರಣೆಗೆ ಹಾಜರಾಗಲಿದ್ದಾರೆಂದು ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಇನ್ನು 6 ತಿಂಗಳು ಪ್ರತಿಭಟನೆ ನಡೆಸುವಂತಿಲ್ಲ: ಸಿಎಂ ಯೋಗಿ ಆದಿತ್ಯನಾಥ್
ಸುರೇಶ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ನಿಂತರೂ ಎದುರಿಸಲು ಸಿದ್ಧರಿದ್ದೇವೆ: ಡಿಸಿಎಂ ಡಿ.ಕೆ.ಶಿವಕುಮಾರ್
ಪುಟ್ಟ ಅಂಗಡಿಗೆ ಹೋಗಿ ಚಾಕೋಲೇಟ್, ಐಸ್‌ಕ್ರೀಮ್ ಖರೀದಿಸಿದ ರಾಕಿಂಗ್ ಸ್ಟಾರ್ ಯಶ್..