Tumakuru News: ತುಮಕೂರು: ಕಲ್ಪತರು ನಾಡಿನಲ್ಲಿ ಕತ್ತಲಲ್ಲಿ ಗನ್ ತೋರಿಸಿದವರನ್ನು ಚೆನ್ನಾಗಿ ಬಡಿದು, ಪೊಲೀಸರಿಗೆ ಒಪ್ಪಿಸಲಾಗಿದೆ.
ತುಮಕೂರಿನ ತಿಪಟೂರಿನಲ್ಲಿ ಡಕಾಯಿತ ತಂಡದವರು, ಕತ್ತಲಲ್ಲಿ ಬಂದು ಗನ್ ತೋರಿಸಿ, ಜನರಿಗೆ ಬೆದರಿಕೆ ಹಾಕಿದ್ದಾರೆ. ಇಲ್ಲಿನ ಕೋಟೆ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಜನ ಇವರ ಕೃತ್ಯಕ್ಕೆ ಒಮ್ಮೆ ದಂಗಾಗಿದ್ದಾರೆ. ಆದರೂ ಧೈರ್ಯಗೆಡದ ಇಲ್ಲಿನ ಕೆಲ ಜನ, ಮುನ್ನುಗ್ಗಿ ಇಬ್ಬರನ್ನು ಚೆನ್ನಾಗಿ ಥಳಿಸಿದ್ದಾರೆ. ಉತ್ತರಪ್ರದೇಶದ ರಾಮ್‌ಪಾಲ್ ಮತ್ತು ಜಗದೀಶ್ ಸಿಂಗ್ ಸಿಕ್ಕಿಬಿದ್ದಿದ್ದಾರೆ.
ಒಟ್ಟು 9 ಮಂದಿ ಬಂದು ಜನರಿಗೆ ಗನ್ ಪಿಸ್ತೂಲ್ ತೋರಿಸಿ, ದುಡ್ಡು ದೋಚಲು ಬಂದಿದ್ದು, ಆ 9 ಮಂದಿಯಲ್ಲಿ ಇಬ್ಬರನ್ನು ಸ್ಥಳೀಯರು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಉಳಿದ 7 ಮಂದಿ ಎಸ್ಕೇಪ್ ಆಗಿದ್ದಾರೆ. ಸಿಕ್ಕಿ ಬಿದ್ದವರಿಂದ ಪಿಸ್ತೂಲು ಮತ್ತು 9 ಜೀವ ಗುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಸ್ತ್ರಾಸ್ತ್ರ ಕಾಯ್ದೆ ಅಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಉಳಿದವರನ್ನು ಬಂಧಿಸಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
‘ರಾಜ್ಯದಲ್ಲಿ ಏನೇ ಕೆಲಸ ಮಾಡಿದರೂ, ಮೋದಿ ಅವರ ಕೆಲಸವನ್ನು ಓವರ್ ಟೇಕ್ ಮಾಡಲು ಸಾಧ್ಯವಿಲ್ಲ’
ಸಿಎಂ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ನಾಯಕತ್ವದ ಬಗ್ಗೆ ಶೆಟ್ಟರ್ ಹೇಳಿದ್ದೇನು..?




