ಹಾಸನದ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ: ಬೆಳೆನಾಶ, ಪ್ರಾಣಹಾನಿಯ ಭಯದಲ್ಲಿ ಗ್ರಾಮಸ್ಥರು

Hassan News: ಹಾಸನ : ಹಾಸನ ಜಿಲ್ಲೆಯ, ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು, ನರಹಂತಕ ಕಾಡಾನೆ ಗ್ರಾಮದೊಳಗೆ ಎಂಟ್ರಿ ಕೊಟ್ಟಿದೆ.

ಈ ಮೊದಲು ಬೇಲೂರು ತಾಲೂಕಿನ, ಮತ್ತಾವರ ಗ್ರಾಮದಲ್ಲಿ ವಸಂತ್ ಎಂಬುವವರನ್ನು, ಕರಡಿ ಎಂಬ ಒಂಟಿಸಲಗ ಬಲಿ ಪಡೆದಿತ್ತು. ಇದೀಗ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಇರುಕುರಹಳ್ಳಿ ಗ್ರಾಮದೊಳಗೆ ಒಂಟಿಸಲಗ ಲಗ್ಗೆ ಇಟ್ಟಿದೆ. ಇನ್ನು ಒಂಟಿಸಲಗವನ್ನು ನೋಡಿ, ಗ್ರಾಮಸ್ಥರು ಭಯಬಿದ್ದಿದ್ದಾರೆ.

ಈಗಾಗಲೇ ಗ್ರಾಮದಲ್ಲಿ ಹಲವರ ತೋಟಕ್ಕೆ ನುಗ್ಗಿ ಕಾಫಿ, ತೆಂಗಿನಮರಗಳನ್ನು ನಾಶ ಮಾಡಿದೆ. ಹಾಗಾಗಿ ಒಂಟಿಸಲಗದ ಎಂಟ್ರಿಯಿಂದ, ಜನ ಎಲ್ಲಿ ತಮ್ಮ ಬೆಳೆ ನಾಶವಾಗುತ್ತದೆಯೋ, ಪ್ರಾಣಹಾನಿಯಾಗುತ್ತದೆಯೋ ಎಂಬ ಆತಂಕದಲ್ಲಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬರುವಂತೆ ಆಗ್ರಹಿಸಿದ್ದು, ಕಾಡನೆಗಳನ್ನು ಸ್ಥಳಾಂತರ ಮಾಡುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

ವಿಜಯೇಂದ್ರ ಬದಲು ಯತೀಂದ್ರ ಹೆಸರು: ಭಾಷಣದುದ್ದಕ್ಕೂ ಸಚಿವ ಸಂತೋಷ್ ಲಾಡ್ ಯಡವಟ್ಟು

ರಾಜ್ಯಕ್ಕೆ ಅನ್ಯಾಯವಾಗಿದರೂ ಒಬ್ಬ ಸಂಸದರೂ ಧ್ವನಿ ಎತ್ತಿಲ್ಲ- ಡಿಸಿಎಂ ಡಿ.ಕೆ.ಶಿವಕುಮಾರ್..!

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ; ಉಸ್ತುವಾರಿಗಳನ್ನು ನೇಮಕ ಮಾಡಿದ ಜೆಡಿಎಸ್

About The Author