Maha Kumbha Mela News: ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಫೇಕ್ ವೀಡಿಯೋ, ಫೋಟೋಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ. ಆದರೆ ಕೆಲವು ನಿಜವಾದ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದ್ದು, ಮಹಾ ಕುಂಭ ಮೇಳದಲ್ಲಿ ಜನ ಯಾವ ರೀತಿ ದುಡ್ಡು ಮಾಡುತ್ತಿದ್ದಾರೆ ಅನ್ನೋ ಸತ್ಯಾಸತ್ಯತೆ ಇದು ತೋರಿಸುತ್ತದೆ.
ಓರ್ವ ವ್ಯಕ್ತಿ ನೀರಿನಲ್ಲಿ ಮುಳುಗಿ ಏಳುವ ಕೆಲಸ ಮಾಡುತ್ತಿದ್ದು, ಇದಕ್ಕೆ ರಶೀದಿ ಕೂಡ ಇಟ್ಟಿದ್ದಾನೆ. ಈತ ಹೇಳುವುದೇನೆಂದರೆ, ಯಾರಿಗಾದರೂ ಚಳಿಯಾಗುತ್ತಿದ್ದು, ನೀರಿನಲ್ಲಿ ಇಳಿಯಲು ಭಯವಾಗುತ್ತಿದೆ. ಅಥವಾ ನೀರು ಕಂಡರೆ ಭಯ ಅದಕ್ಕೆ ನದಿನಲ್ಲಿ ಸ್ನಾನ ಮಾಡಲಾಗುವುದಿಲ್ಲ. ಅಥವಾ ಬೇರೆ ಏನೇ ಸಮಸ್ಯೆ ಇದ್ದರೂ, ನೀವು ಒಂದು ರಿಸಿಟ್ ಬರೆಸಿ 10 ರೂಪಾಯಿ ದುಡ್ಡು ಕೊಟ್ಟು ಬಿಡಿ. ನಿಮ್ಮ ಪರವಾಗಿ ನಾನು ಅಮೃತ ಸ್ನಾನ ಮಾಡಿ, ದೇವರಲ್ಲಿ ಪ್ರಾರ್ಥಿಸುತ್ತೇನೆ ಎನ್ನುತ್ತಾನೆ. ಈತ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಇದೇ ಕೆಲಸ ಮಾಡಿ, ಲಕ್ಷ ಲಕ್ಷ ರೂಪಾಯಿ ಕಮಾಯಿಸುತ್ತಿದ್ದಾನೆ.
ಇನ್ನು ಪುಟ್ಟ ಪುಟ್ಟ ಮಕ್ಕಳಿಗೆ ರಾಮ ಲಕ್ಷ್ಮಣ ಸೀತೆಯ ವೇಷ ಹಾಕಿ, ಕುಂಭ ಮೇಳದಲ್ಲಿ ನಿಲ್ಲಿಸಲಾಗಿದೆ. ಈ ಮಕ್ಕಳು ಅಲ್ಲಿ ಬರುವ ಭಕ್ತರಿಗೆ ಆಶೀರ್ವಾದ ಮಾಡುತ್ತಾರೆ. ಮತ್ತು ಹಾಗೆ ಆಶೀರ್ವಾದ ಮಾಡಿದ್ದಕ್ಕೆ, ನೀವು ಖುಷಿಯಿಂದ ಆ ಮಕ್ಕಳಿಗೆ ಜಸ್ಟ್ 1 ರೂಪಾಯಿ ಕೊಟ್ಟರೂ ಸಾಕು. ಅವರು ಕೂಡ ಕುಂಭ ಮೇಳ ಮುಗಿಯುವುದರಲ್ಲಿ ಲಕ್ಷಾಧೀಶರಾಗಬಹುದು.
ಮೂರನೇಯದಾಗಿ ಮಹಾಕುಂಭ ಮೇಳಕ್ಕೆ ಬರುವವರಿಗೆ ಶಿವನಿಗೆ ಸಂಭಂಧಿಸಿದ ತಿಿಲಕ ಹಚ್ಚಲಾಗುತ್ತದೆ. ಹೀಗೆ ತಿಲಕ ಹಚ್ಚಿ ಫೋಟೋಗೆ ಪೋಸ್ ಕೊಡಬೇಕು ಎನ್ನುವವರು 10 ರೂಪಾಯಿ ಕೊಟ್ಟು ತಿಲಕ ಹಚ್ಚಿಕೊಳ್ಳಬಹುದು. ಈ ಕೆಲಸ ಮಾಡುವವರು ಕೂಡ ಈಗಾಗಲೇ ಲಕ್ಷ ಲಕ್ಷ ಗಳಿಸಿದ್ದಾರೆ. ಚಹಾ, ಸ್ನ್ಯಾಕ್ಸ್ ಮಾರುವವರ ಸಂಖ್ಯೆಯೂ ಹೆಚ್ಚಾಗಿದೆ.
ಇನ್ನು ಕೆಲವರು ಭಿಕ್ಷೆ ಬೇಡಿ, ಕೋಟ್ಯಾಧಿಪತಿಯಾಗೋಕ್ಕೆ ಪ್ಲಾನ್ ಮಾಡಿದ್ದಾರೆ. ನಿಜವಾಗಿಯೂ ಅಲ್ಲಿರುವ ಭಿಕ್ಷುಕರು ಅಷ್ಟು ಗಳಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪ್ಲಾನಿಂಗ್ ನಡಿತಿರೋದಂತೂ ಸತ್ಯ.
ಇದೇ ಕೆಲಸವನ್ನು ಅವರು ಕುಂಭ ಮೇಳ ಮುಗಿಯುವವರೆಗೂ ಕಂಟಿನ್ಯೂ ಮಾಡಿದ್ದಲ್ಲಿ ಖಂಡಿತವಾಗಿಯೂ ಅವರು ಕೋಟ್ಯಾಧಿಪತಿಯಾಗುವುದರಲ್ಲಿ ಡೌಟೇ ಇಲ್ಲ.