Wednesday, December 4, 2024

Latest Posts

ಎಟಿಎಂನಲ್ಲಿ ಈ ರೀತಿಯೂ ಸ್ಕ್ಯಾಮ್ ಮಾಡಿ ದುಡ್ಡು ತೆಗೆಯುತ್ತಾರೆ ನೋಡಿ..

- Advertisement -

News: ಇಂದಿನ ಕಾಲದಲ್ಲಿ ಎಲ್ಲರೂ ಎಟಿಎಂ ಕಾರ್ಡ್ ಬಳಸುವವರೇ. ಮೊದಲೆಲ್ಲ ಹಣ ಡ್ರಾ ಮಾಡಬೇಕು ಅಂದ್ರೆ, ಬ್ಯಾಂಕ್‌ಗೆ ಹೋಗಿ, ಅಲ್ಲಿ ಫಾರ್ಮ್ ಫುಲ್ ಮಾಡಿ, ಬಳಿಕ ದುಡ್ಡು ಡ್ರಾ ಮಾಡಿಕೊಂಡು ಬರಬೇಕಿತ್ತು. ಆದರೆ ಈಗ ಹಾಗಿಲ್ಲ, ಎಟಿಎಂಗೆ ಹೋಗಿ, ಕಾರ್ಡ್ ಹಾಕಿ, ನಂಬರ್ ಹಾಕಿದ್ರೆ ಸಾಕು, ಎಷ್ಟು ದುಡ್ಡು ಬೇಕೋ, ಅಷ್ಟು ಸಿಗುತ್ತದೆ. ಆದರೆ ಅದೇ ರೀತಿ ಸ್ಕ್ಯಾಮ್ ಕೂಡ ಹೆಚ್ಚಾಗಿದೆ. ನಾವಿಂದು ಯಾವ ರೀತಿಯಾಗಿ ಎಟಿಎಂನಲ್ಲಿ ಸ್ಕ್ಯಾಮ್ ಮಾಡಬಹುದು ಎಂದು ವೀಡಿಯೋ ಮೂಲಕ ವಿವರಿಸಲಿದ್ದೇವೆ.

ಸ್ಕ್ಯಾಮ್ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ..

ಈ ವೀಡಿಯೋದಲ್ಲಿ ತೋರಿಸಿರುವ ಹಾಗೆ, ನೀವು ಎಟಿಎಂಗೆ ಹೋದಾಗ, ದುಡ್ಡು ಬರುವ ಸ್ಥಳದಲ್ಲಿ ಏನಾದರೂ ಇದೆಯಾ ಎಂದು ಚೆಕ್ ಮಾಡಿಕೊಳ್ಳಿ. ಇಲ್ಲವಾದಲ್ಲಿ, ದುಡ್ಡು ಡ್ರಾ ಆದರೂ ನಿಮ್ಮ ಕೈ ಸೇರದೇ, ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿಯಾಗಬಹುದು.

ನೀವು ಎಟಿಎಂಗೆ ಹೋಗಿ, ಪಿನ್ ಹಾಕಿ, ಎಷ್ಟು ದುಡ್ಡು ಬೇಕು ಎಂದು ಕ್ಲಿಕ್ ಮಾಡಿ, ದುಡ್ಡಿಗಾಗಿ ಕಾಯುತ್ತಲಿರುವಿರಿ. ಆದರೆ ನಿಮ್ಮ ಕೈಗೆ ದುಡ್ಡೇ ಬರುವುದಿಲ್ಲ. ಬ್ಯಾಂಕ್‌ ಅಕೌಂಟ್‌ನಲ್ಲಿ ಏನೋ ಸಮಸ್ಯೆ ಎಂದು ತಿಳಿದು ನೀವು ವಾಪಸ್ ಬರುತ್ತೀರಿ. ಆದರೆ ನಿಮ್ಮ ಬ್ಯಾಂಕ್ ಅಕೌಂಟ್‌ನಿಂದ ಹಣ ಡ್ರಾ ಆಗಿರುತ್ತದೆ. ಆದರೆ ಆ ಹಣ ನಿಮ್ಮ ಕೈ ಸೇರುವುದಿಲ್ಲ. ಆಗ ನೀವು ಆ ಎಟಿಎಂನಲ್ಲಿ ಈ ರೀತಿಯ ಸ್ಕ್ಯಾಮ್ ಆಗಿದೆಯಾ ಎಂದು ಒಮ್ಮೆ ಚೆಕ್ ಮಾಡಿಕೊಳ್ಳುವುದು ಉತ್ತಮ.

- Advertisement -

Latest Posts

Don't Miss