ನರೇಂದ್ರಸ್ವಾಮಿ ಗೆಲುವಿಗೆ ದೇವರ ಬಸಪ್ಪನ ಅಭಯ..!

ಮಂಡ್ಯ: ಮಂಡ್ಯದಲ್ಲಿ ಮಾಜಿ ಸಚಿವ ನರೇಂದ್ರಸ್ವಾಮಿಗೆ ಚುನಾವಣೆ ಗೆಲುವಿನ ಭರವಸೆ ಸಿಕ್ಕಿದೆ. ಈ ಭರವಸೆ ಕೊಟ್ಟಿದ್ದು, ಪವಾಡ ಬಸಪ್ಪ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯ ಶ್ರೀ ಕಾಲಭೈರವೇಶ್ವರ ದೇಗುಲದ ಶ್ರೀ ಪವಾಡ ಬಸಪ್ಪನ ಬಳಿ, ನರೇಂದ್ರಸ್ವಾಮಿ ಆಶೀರ್ವಾದ ಪಡೆದಿದ್ದಾರೆ. ಇಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಭೇಟಿ ನೀಡಿದ್ದ ನರೇಂದ್ರ ಸ್ವಾಮಿ, ತಾನು ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೋ, ಇಲ್ಲವೋ ಎಂದು ಕೇಳಿದ್ದಾರೆ.

ಯಾರಿದಾರೂ ಒಳ್ಳೆಯದಾಗುತ್ತದೆ ಎಂದಲ್ಲಿ ಮಾತ್ರ, ಈ ಬಸಪ್ಪ ತನ್ನ ಕಾಲುಗಳನ್ನ ಭಕ್ತರ ಕೈಮೇಲಿರಿಸಿ, ಹರಸುತ್ತದೆ. ಅದೇ ರೀತಿ ನರೇಂದ್ರಸ್ವಾಮಿಗೂ ಕೂಡ ಬಸಪ್ಪ ಹರಸಿದ್ದಾನೆ. ಇದಾದ ಬಳಿಕ ಗೆಲುವಿನ ಭರವಸೆಯಲ್ಲಿರುವ ನರೇಂದ್ರ ಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಸಾಯಿಬಾಬಾ ದೇವರಲ್ಲ ಎಂದ ಧಿರೇಂದ್ರ ಕೃಷ್ಣ ವಿರುದ್ಧ ಕೇಸ್ ದಾಖಲು

ಚುನಾವಣಾ ಪ್ರಚಾರಕ್ಕೆ ಬಂದಿದ್ದ ಶಾಸಕರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ಟ್ವಿಟರ್ ಖಾತೆಯ ಚಿಹ್ನೆ ಬದಲಾಯಿಸಿದ ಎಲಾನ್ ಮಸ್ಕ್

About The Author