- Advertisement -
Dharwad News: ಧಾರವಾಡ : ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದ್ದು, ರಾಮನ ಮೇಲಿನ ಪ್ರೀತಿಗಾಗಿ ಧಾರವಾಡದ ಕೆಎಸ್‌ಆರ್‌ಟಿಸಿ ಬಸ್ ಚಾಲಕನೋರ್ವ ತನ್ನ ಬಸ್ಸನ್ನು ವಿಶೇಷವಾಗಿ ಅಲಂಕರಿಸಿದ್ದಾನೆ.
ಧಾರವಾಡದಿಂದ ಕರಡಿಗುಡ್ಡಕ್ಕೆ ಪ್ರತಿನಿತ್ಯ ಸಂಚಾರ ಮಾಡುವ ಬಸ್‌ನ್ನು ಕರಡಿಗುಡ್ಡ ಗ್ರಾಮದ ಬಸ್ ಚಾಲಕ ರಾಮನಗೌಡ ಗೌಡರ ಎಂಬುವವರೇ ತಮ್ಮ ಬಸ್ಸನ್ನು ವಿಶೇಷವಾಗಿ ಅಲಂಕರಿಸಿದ್ದಾರೆ.
ಬಸ್ಸನ್ನು ಹೂಮಾಲೆಗಳಿಂದ ಅಲಂಕರಿಸುವುದರ ಮೂಲಕ ರಾಮನ ಮೇಲಿನ ಪ್ರೀತಿಯನ್ನು ಆ ಮೂಲಕ ಅಭಿವ್ಯಕ್ತಪಡಿಸಿದ್ದಾರೆ. ಈ ರೀತಿ ಅಲಂಕಾರಗೊಂಡಿರುವ ಬಸ್ಸು ಇದೀಗ ಧಾರವಾಡ ಬಸ್ ನಿಲ್ದಾಣದಲ್ಲಿ ಎಲ್ಲರ ಗಮನಸೆಳೆಯುತ್ತಿದೆ.
ಸಾಂಘವಾಗಿ ನೆರವೇರಿದ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ: ನಮೋ ಸಾರಥ್ಯದಲ್ಲಿ ನೆರವೇರಿದ ಪೂಜೆ
‘ಇನ್ನು ಮುಂದೆ ಅಯೋಧ್ಯೆಯಲ್ಲಿ ಫೈರಿಂಗ್ ಸದ್ದು ಕೇಳುವುದಿಲ್ಲ, ರಾಮಕೀರ್ತನೆ ಕೇಳುತ್ತದೆ’
- Advertisement -