www.karnatakatv.net :ರಾಯಚೂರು : ಫೇಸ್ ಬುಕ್ ಲೈವ್ ಬಂದು ಡೆತ್ ನೋಟ್ ಬರೆದಿಟ್ಟು ಯುವ ಪ್ರೇಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಗಾಣದಾಳ ಗ್ರಾಮದ ಸಂಧ್ಯಾ ಎಂಬ ಯುವತಿಯನ್ನ ಪ್ರೇಮಿಸಿದ್ದ ಭೀಮೇಶ್ ಅನ್ಯ ಜಾತಿಯ ಹುಡುಗಿಯನ್ನ ಪ್ರೀತಿಸಿದ್ದ ಎಂದು ಹುಡುಗಿ ಮನೆಯವರು ಮದುವೆಗೆ ಒಪ್ಪದ ಕಾರಣ ಹುಡುಗ ಆತ್ಮಹತ್ಯೆ ಮಾಡಿಕೊಂಡಿದಾನೆ. ಭೀಮೇಶ್ ನಾಯಕ(26) ನೇಣಿಗೆ ಶರಣಾದ ಯುವಕ ಕಳೆದ ಕೆಲ ದಿನಗಳ ಹಿಂದೆ ಪ್ರೀತಿಸಿದ ಯುವತಿಯೊಂದಿಗೆ ಊರು ಬಿಟ್ಟು ಹೊಗಿದಾಗ ಯುವತಿ ಮನೆಯವರು ಇಡಪನೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಮಿಸ್ಸಿಂಗ್ ಕೇಸ್ ದಾಖಲು ಮಾಡಿದರು ಆದರೆ ಯುವಕ ಇಬ್ಬರೂ ಮದುವೆಯಾಗಿ ಯುವತಿ ಮನೆಯವರಿಂದ ರಕ್ಷಣೆ ಕೊಡಿ ಎಂದು ಎಸ್ಪಿ ಕಚೇರಿಗೆ ಬಂದಿದ್ದ ಯುವಕ ಆದರೆ ಇಬ್ಬರನ್ನೂ ಠಾಣೆಗೆ ಕರೆತಂದು ಪ್ರೇಮಿಗಳನ್ನ ಅಗಲಿಸಿದ್ದ ಪಿಎಸ್ಐ ಇಡಪನೂರು ಪಿಎಸ್ಐ ಗಂಗಪ್ಪ ಎಂಬುವವರ ವಿರುದ್ಧ ನೇಣಿಗೆ ಶರಣಾದ ಯುವಕ ಡೆತ್ ನೋಟ್ ಬರೆದು ತನ್ನ ಜಮೀನಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ . ಪಿಎಸ್ಐ, ಗಂಗಪ್ಪ, ಸೇರಿದಂತೆ ಯುವತಿಯ ಸಂಬಂಧಿಕರ ಹೆಸರು ಬರೆದಿಟ್ಟು ಫೇಸ್ ಬುಕ್ ಲೈವ್ ಬಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು