Special Podcast: ಕಾಂಗ್ರೆಸ್ ನಾಯಕಿಯ ದಿನಚರಿ ಹೇಗಿರತ್ತೆ..? ಬೇಸರವಾದಾಗ ಕುಸುಮಾ ಏನ್ ಮಾಡ್ತಾರೆ..?

Special Podcast: ಕಾಂಗ್ರೆಸ್ ನಾಯಕಿ ಕುಸುಮ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಅವರ ಡೇಲಿ ರೂಟಿನ್ ಹೇಗಿರತ್ತೆ..? ಅವರು ಸಮಯ ಸಿಕ್ಕಾಗ ಏನು ಮಾಡುತ್ತಾರೆ ಎಂಬೆಲ್ಲ ವಿಷಯಗಳ ಬಗ್ಗೆ ವಿವರಿಸಿದ್ದಾರೆ.

ಕ್ಷೇತ್ರದ ಕೆಲಸ: ಬೆಳಿಗ್ಗೆ ಮನೆಯ ಬಳಿ ಬರುವ ಜನರ ಕುಂದುಕೊರತೆಗಳು ಹಾಗೂ ಸಮಸ್ಯೆಗಳನ್ನು ಆಲಿಸುವುದು, ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುವ ಮೂಲಕ ಜನರ ರಸ್ತೆ, ನೀರು, ಡ್ರೈನೇಜ್ ಹಾಗೂ ದೀಪಗಳ ಸಮಸ್ಯೆಗಳನ್ನು ಬಗೆಹರಿಸುವುದು, ಕ್ಷೇತ್ರದಲ್ಲಿ ಕೆಲಸ ಮಾಡಲು ಎದುರಾಳಿಗಳಿಂದ ಬರುವ ಸವಾಲುಗಳನ್ನು ಎದುರಿಸಿ ದಿನನಿತ್ಯ ಹೋರಾಟ ಮಾಡಿಕೊಂಡು ಕೆಲಸ ಮಾಡುವುದು ಇದೆಲ್ಲವೂ ಕುಸುಮಾ ಅವರ ದಿನನಿತ್ಯದ ರೂಟಿನ್ ಆಗಿರುತ್ತದೆ.

ಸೋಲೋ ಟ್ರಿಪ್: ಸೋಲೋ ಟ್ರಿಪ್ ಅಂದ್ರೆ ಕುಸುಮಾ ಅವರಿಗೆ ಬಲು ಇಷ್ಟವಂತೆ. ಸಮಯ ಸಿಕ್ಕಾಗ, ನೆಮ್ಮದಿ ಬೇಕೆಂದೆನ್ನಿಸಿದಾಗ ಕುಸುಮಾ ಅವರು ಸೋಲೋ ಟ್ರಿಪ್ ಹೋಗುತ್ತಾರಂತೆ. ಕುಸುಮಾ ಅವರಿಗೆ ಹೆಚ್ಚು ಸ್ನೇಹಿತರಿಲ್ಲ. ಆದರೆ ಕಸಿನ್ ಗ್ರೂಪ್ ಇದೆ. ಅವರ ಜತೆಗೆ ಗ್ರೂಪ್ ಟೂರ್‌ಗೂ ಹೋಗ್ತಾರಂತೆ. ವಿವಿಧ ದೇಶಗಳ ಪ್ರವಾಸ ಮಾಡಿ ಅಲ್ಲಿನ ಹೊಸ ಆಹಾರಗಳನ್ನು ಟ್ರೈ ಮಾಡಲು ಇಷ್ಟಪಡುತ್ತಾರೆ. ನಿಸರ್ಗ, ಬೀಚ್‌ಗಳು ಹಾಗೂ ಅಲೆಗಳ ಸೌಂದರ್ಯವನ್ನು ಗಂಟೆಗಟ್ಟಲೆ ವೀಕ್ಷಿಸುವುದು ಎಂದರೆ ಇಷ್ಟ ಅಂತಾರೆ ಕುಸುಮ.

ಸಂಪೂರ್ಣ ಮಾಹಿತಿಗಾಗಿ ವೀಡಿಯೋ ವೀಕ್ಷಿಸಿ.

About The Author