Lucknow: ನೀವು ನಮಾಜ್ ಮಾಡೋದು ಸಮಸ್ಯೆ ಅಲ್ಲ: ರಸ್ತೆಯಲ್ಲಿ ನಮಾಜ್ ಮಾಡಬೇಡಿ: ಯೋಗಿ ಆದಿತ್ಯನಾಥ್

Lucknow: ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಯ ಮೇಲೆ ನಮಾಜ್ ಮಾಡುವುದನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಖಂಡಿಸಿದ್ದು, ನಮಾಜ್ ಮಾಡುವುದು ಸಮಸ್ಯೆ ಅಲ್ಲ, ಸಾರ್ವಜನಿಕ ರಸ್ತೆಗಳಲ್ಲಿ ಮಾಡಬೇಡಿ ಎಂದು ಹೇಳಿದ್ದಾರೆ.

ಲಕ್ನೋದ ಕಾರ್ಯಕ್ರಮದ ವ“ಂದರಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಮುಸ್ಲಿಂರು ನಮಾಜ್ ಮಾಡುವುದು ಸಮಸ್ಯೆ ಅಲ್ಲ, ಆದರೆ ಸಾರ್ವಜನಿಕ ರಸ್ತೆಗಳಲ್ಲಿ ನಮಾಜ್ ಮಾಡಿ ಇತರರಿಗೆ ಸಮಸ್ಯೆ ಆಗುವಂತೆ ವರ್ತಿಸಬೇಡಿ. ಈ ಬಗ್ಗೆ ನಾವು ನಿಮ್ಮಲ್ಲಿ ಮನವಿ ಮಾಡುತ್ತೇವೆ. ಉತ್ತಮ ಮಾರ್ಗದಲ್ಲಿ ನೀವು ನಡೆದರೆ ನಿಮಗೆ ಉತ್ತಮ. ಆದರೆ ಮಾರ್ಗ ಅನುಸರಿಸದೇ, ಮಿತಿಮೀರಿದ ವರ್ತನೆ ತೋರಿದ್ದಲ್ಲಿ, ಅದಕ್ಕಾಗಿ ನಾವು ಶಿಸ್ತಿನ ಕ್ರಮ ಕೈಗ“ಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೇ ರಸ್ತೆಗಳು ಇರುವುದು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು. ಕಾರ್ಮಿಕರು, ವ್ಯಾಪಾರಿಗಳು, ರೋಗಿಗಳು, ಇತರರಿಗೆ ನಡೆದಾಡಲು, ಓಡಾಡಲು ಅನುಕೂಲವಾಗಲಿ ಎಂದು ರಸ್ತೆ ಮಾಡಿರುವುದು. ಇಂಥ ಸ್ಥಳಗಳಲ್ಲಿ ನೀವು ನಮಾಜ್ ಮಾಡಿದಾಗ, ಜನರಿಗೆ ಅಡಚಣೆ ಆಗುತ್ತದೆ. ಸಾರ್ವಜನಿಕ ಸ್ಥಳಗಳನ್ನು ಧಾರ್ಮಿಕ ಕೇಂದ್ರಗಳನ್ನಾಗಿ ಪರಿವರ್ತಿಸಲು ಯಾರಿಗೂ ಹಕ್ಕಿಲ್ಲ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

About The Author