Recipe: ಮ್ಯಾಂಗೋ ಸಾಗೋ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 2 ಹಣ್ಣಾದ ಮಾವಿನ ಹಣ್ಣು, ಅರ್ಧ ಲೀ ಹಾಲು, 2 ಸ್ಪೂನ್ ಕಸ್ಟರ್ಡ್ ಪೌಡರ್, ಕಾಲು ಕಪ್ ನೆನೆಸಿದ ಸಾಬಕ್ಕಿ, 2 ಸ್ಪೂನ್ ಚೀಯಾ ಸೀಡ್ಸ್, ಸಣ್ಣಗೆ ಕತ್ತರಿಸಿದ 4ರಿಂದ 5 ವಿಧದ ಹಣ್ಣು, ಡ್ರೈಫ್ರೂಟ್ಸ್, ಜೇನುತುಪ್ಪ, ಕಾಲು ಕಪ್ ಕ್ರೀಮ್.

ಮಾಡುವ ವಿಧಾನ: ಮಾವಿಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಮಿಕ್ಸಿ ಜಾರ್‌ಗೆ ಹಾಕಿ, 1 ಕಪ್ ಹಾಲು ಹಾಕಿ, ನುಣ್ಣಗೆ ರುಬ್ಬಿ. ಬದಿಗಿರಿಸಿ. ಬಳಿಕ 1 ಪ್ಯಾನ್ ಬಿಸಿ ಮಾಡಿ ಅದಕ್ಕೆ ಥಿಕ್ ಹಾಲು ಹಾಕಿ, ಕುದಿ ಬರಿಸಿ. ಬಳಿಕ 2 ಸ್ಪೂನ್ ಕಸ್ಟರ್ಡ್ ಪುಡಿಗೆ ಸ್ವಲ್ಪ ಉಗುರು ಬೆಚ್ಚಗಿನ ಹಾಲು ಹಾಕಿ ಮಿಕ್ಸ್ ಮಾಡಿ.

ನಂತರ ಆ ಮಿಶ್ರಣವನ್ನು ಕುದಿಯುವ ಹಾಲಿಗೆ ಹಾಕಿ ಕೈಬಿಡದೇ ಮಿಕ್ಸ್ ಮಾಡಿ. ಈ ಮಿಶ್ರಣ ಹೆಚ್ಚು ತೆಳುವಾಗಲೂಬಾರದು, ಗಟ್ಟಿಯಾಗಲೂಬಾರದು. ಬಳಿಕ ಗ್ಯಾಸ್ ಆಫ್ ಮಾಡಿ, ತಣಿಯಲು ಬಿಡಿ.

ನಂತರ ನೆನೆಸಿದ ಸಾಬಕ್ಕಿಯನ್ನು 1 ಪ್ಲೇಟ್‌ಗೆ ಹರಡಿ. ಹಬೆಯಲ್ಲಿ ಬೇಯಿಸಿ. ಇಡ್ಲಿ ಬೇಯಿಸಿದ ರೀತಿಯಲ್ಲಿ ಬೇಯಿಸಬೇಕು. 10 ನಿಮಿಷ ಬೇಯಿಸಿದರೂ ಸಾಕು. ಬಳಿಕ ಬೆಂದ ಸಾಬಕ್ಕಿಯನ್ನು ನಾರ್ಮಲ್ ನೀರಿನಿಗೆ ಹಾಕಬೇಕು. ಇದರಿಂದ ಸಾಬಕ್ಕಿ ಅಂಟುವುದಿಲ್ಲ. ಬಳಿಕ ಸಾಬಕ್ಕಿಯನ್ನು ಸೋಸಿ ತೆಗೆಯಿರಿ.

ಈಗ ರೆಡಿ ಮಾಡಿದ್ದ ಕಸ್ಟರ್ಡ್ ಮಿಕ್ಸ್‌ಗೆ, ರುಬ್ಬಿದ ಮಾವಿನ ಹಣ್ಣು, ಬೇಯಿಸಿದ ಸಾಬಕ್ಕಿ, ನೆನೆಸಿದ ಚೀಯಾ ಸೀಡ್ಸ್, ಕತ್ತರಿಸಿದ ಹಣ್ಣುಗಳು, ಡ್ರೈಫ್ರೂಟ್ಸ್, ಹೆಚ್ಚು ಸಿಹಿ ಬೇಕಾದಲ್ಲಿ ಜೇನುತುಪ್ಪ ಸೇರಿಸಿ. ಕ್ರೀಮ್ ಕೂಡ ನಿಮ್ಮ ಆಯ್ಕೆಗೆ ಬಿಟ್ಟಿದ್ದು. ಇದೆಲ್ಲ ಮಿಕ್ಸ್ ಮಾಡಿ ಫ್ರಿಜ್‌ನಲ್ಲಿರಿಸಿ, ತಣ್ಣಗಾದ ಮೇಲೆ ಸರ್ವ್ ಮಾಡಿ.

About The Author