ಗ್ರಹಗಳಲ್ಲಿ ಅತಿ ಶುಭ ಫಲವನ್ನು ನೀಡುವ ಗ್ರಹ ಅಂದ್ರೆ ಅದು ಗುರು.. ಈಗ ಕೆಲ ರಾಶಿಯವರಿಗೆ ಗುರುಬಲ ಬರ್ತಿದೆ. ಈ ಗುರುಬಲದಿಂದ ಅವ್ರು ಇನ್ಮುಂದೆ ರಾಜರಂತೆ ಬದುಕ್ತಾರೆ.ನವಗ್ರಹಗಳಲ್ಲಿ ಶನಿಯನ್ನು ಬಿಟ್ಟರೆ ಅತ್ಯಂತ ವಿಧಾನಗತಿಯಲ್ಲಿ ಚಲಿಸುವಂತಹ ಗ್ರಹ ಅಂದ್ರೆ ಅದು ಗುರು..
ಅಕ್ಟೋಬರ್ 9ರಿಂದ ಗುರು ವೃಷಭ ರಾಶಿಯಲ್ಲಿ ತನ್ನ ವಕ್ರಿಯ ಚಲನೆ ಪ್ರಾರಂಭಿಸಲಿದ್ದಾನೆ. ಇದರಿಂದ 12 ರಾಶಿಗಳಲ್ಲಿ ವಿಶೇಷವಾಗಿ ಐದು ರಾಶಿಯವರ ಜೀವನದಲ್ಲಿ ಶುಭ ಫಲಿತಾಂಶ ಸಿಗಲಿದೆ .ಮಿಥುನ ರಾಶಿಯವರಿಗೆ ಗುರುಬಲ ಸಿಗಲಿದೆ. ಗುರುವಿನ ವಕ್ರಿಯ ಚಲನೆ ಪ್ರಾರಂಭವಾಗುವುದರಿಂದಾಗಿ ಮಿಥುನ ರಾಶಿಯವರು ತಮ್ಮ ಜೀವನದಲ್ಲಿ ಅಂದುಕೊಂಡಿರುವಂತಹ ಗುರಿಯನ್ನು ತಲುಪಲು ಯಶಸ್ವಿಯಾಗ್ತಾರೆ.
ಈ ಸಂದರ್ಭದಲ್ಲಿ ನಿಮ್ಮಲ್ಲಿ ಸಕಾರಾತ್ಮಕ ಶಕ್ತಿಯ ಓಡಾಟ ಹೆಚ್ಚಾಗಲಿದೆ. ಹೊಸ ಪ್ರಾಜೆಕ್ಟ್ ಕೂಡ ನಿಮ್ಮ ಹೆಸರಿನಲ್ಲಿ ಸಿಗಲಿದೆ. ಅಚಾನಕ್ ಆಗಿ ಧನಪ್ರಾಪ್ತಿಯಾಗುವಂತಹ ಸಾಧ್ಯತೆ ಹೆಚ್ಚಾಗಿದೆ. ಕೆಲಸ ಕಾರ್ಯಗಳಲ್ಲಿ ಕೂಡ ಉತ್ತಮ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ.
ಕಟಕ ರಾಶಿಯವರಿಗೆ ಗುರುವಿನ ಆಶೀರ್ವಾದದಿಂದಾಗಿ ಅದೃಷ್ಟ ಬಂದಿದೆ. ಅವರು ಮಾಡುವ ಪ್ರತಿ ಕೆಲಸದಲ್ಲಿ ಜಯ ಸಿಗಲಿದೆ. ಮಾಡೋ ಕೆಲಸದಲ್ಲಿ ಸಿಗುವಂತಹ ಆದಾಯವನ್ನು ನೀವು ಉಳಿತಾಯ ಮಾಡುವುದದಲ್ಲಿ ಯಶಸ್ವಿಯಾಗಲಿದ್ದೀರಿ. ವ್ಯಾಪಾರ ವ್ಯವಹಾರಗಳನ್ನು ಮಾಡುತ್ತಿರುವವರು ಕೈತುಂಬ ಧನ ಲಾಭ ಮಾಡಿಕೊಳ್ಳಲಿದ್ದಾರೆ. ಜೀವನದಲ್ಲಿ ಪ್ರಗತಿಯ ಹಂತವನ್ನು ಏರೋದಕ್ಕೆ ಸಾಕಷ್ಟು ಅವಕಾಶಗಳು ನಿಮ್ಮನ್ನ ಹುಡುಕಿಕೊಂಡು ಬರಲಿದೆ
ಕನ್ಯಾ ರಾಶಿಯವರಿಗೆ ಗುರುವಿನ ಪ್ರಭಾವದಿಂದಾಗಿ ತಾವು ಮಾಡುವ ಕೆಲಸ ಹಾಗೂ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ನಿಮಗೆ ಬರಬೇಕಾಗಿರೋ ಬಾಕಿ ಹಣ ಕೂಡ ಸಿಗಲಿದೆ. ಯಾವುದೇ ಕಾರಣಕ್ಕೂ ಕೂಡ ಅರ್ಜೆಂಟಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಚಿಕ್ಕ ಪುಟ್ಟ ಮನಸ್ತಾಪ ಬರುವಂತಹ ವಿಚಾರಗಳನ್ನು ಆದಷ್ಟು ನಿರ್ಲಕ್ಷ್ಯ ಮಾಡೋದು ಒಳ್ಳೆಯದು. ಆರೋಗ್ಯದ ವಿಚಾರದಲ್ಲಿ ನೀವು ಹೆಚ್ಚಿನ ಗಮನ ವಹಿಸಬೇಕಿದೆ
ವೃಶ್ಚಿಕ ರಾಶಿಯ ಜನರು ನಿರೀಕ್ಷೆ ಮಾಡುವಂತಹ ಭೌತಿಕ ಸುಖಗಳನ್ನ ಹೊಂದಲಿದ್ದಾರೆ. ಅನಿರೀಕ್ಷಿತವಾಗಿ ನಿಮ್ಮ ಕರಿಯರ್ ನಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಂಡುಬರಲಿವೆ. ಪ್ರಮೋಷನ್ ಸೇರಿದಂತೆ ಸಂಬಳದಲ್ಲಿ ಹೆಚ್ಚಳವನ್ನು ನೀವು ಈ ಸಮಯದಲ್ಲಿ ಪಡೆದುಕೊಳ್ಳಲಿದ್ದೀರಿ. ನಿಮ್ಮ ವ್ಯಾಪಾರ ವ್ಯವಹಾರ ಇನ್ನಷ್ಟು ದೊಡ್ಡ ಮಟ್ಟದಲ್ಲಿ ವಿಸ್ತರಣೆ ಆಗಲಿದೆ. ಈ ಮೂಲಕ ವ್ಯಾಪಾರದಿಂದ ನೀವು ಗಳಿಸುತ್ತಿರುವ ಲಾಭದ ಪ್ರಮಾಣ ಕೂಡ ಇನ್ನಷ್ಟು ಹೆಚ್ಚಾಗಲಿದೆ. ನಿಮ್ಮ ಮಕ್ಕಳು ಕೂಡ ಈ ಸಂದರ್ಭದಲ್ಲಿ ಉತ್ತಮ ಅಭಿವೃದ್ಧಿಯನ್ನು ಸಾಧಿಸಲಿದ್ದಾರೆ. ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ಣವಾಗಲಿವೆ.
ಧನುರಾಶಿಯವರ ಜನಪ್ರಿಯತೆ ಹಾಗೂ ಗೌರವ ಹೆಚ್ಚಾಗಲಿದೆ. ಅತಿ ಶೀಘ್ರದಲ್ಲೇ ನಿಮ್ಮ ಜೀವನದಲ್ಲಿ ಒಂದು ಗುಡ್ ನ್ಯೂಸ್ ಸಿಗಲಿದೆ. ನಿಮ್ಮ ವ್ಯವಹಾರದಲ್ಲಿ ಕೂಡ ನಿಮಗೆ ಲಾಭ ಹೆಚ್ಚಲಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಬಗ್ಗೆ ಎಲ್ಲರೂ ಉತ್ತಮ ಅಭಿಪ್ರಾಯಗಳನ್ನು ಹೊಂದಲಿದ್ದಾರೆ.