Sunday, September 8, 2024

Latest Posts

North Korea : ಉತ್ತರ ಕೊರಿಯಾಗೆ ಪುಟಿನ್ ಎಂಟ್ರಿ!

- Advertisement -

ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್​​ರನ್ನು ರಷ್ಯಾದ ಅಧ್ಯಕ್ಷ ಪುಟಿನ್ ಭೇಟಿಯಾಗಿದ್ದಾರೆ. 24 ವರ್ಷಗಳ ಬಳಿಕ ಪುಟಿನ್ ಉತ್ತರ ಕೊರಿಯಾ ಪ್ರವಾಸ ಕೈಗೊಂಡಿದ್ದಾರೆ. ರಾಜಧಾನಿ ಪ್ಯೊಂಗ್ಯಾಗ್ ಕಿಮ್ ಇಲ್ ಸುಂಗ್ ಸ್ಕ್ವೇರ್‍ನಲ್ಲಿ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಬುಧವಾರ ಪುಟಿನ್​​ಗೆ ಭವ್ಯ ಸ್ವಾಗತ ಕೋರಲಾಯಿತು.
ಇನ್ನು ಇದೇ ಸಂದರ್ಭದಲ್ಲಿ ಉಭಯ ನಾಯಕರು ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು. 71 ವರ್ಷದ ಕಿಮ್‍ಗೆ ರಷ್ಯಾ ನಿರ್ಮಿತ ಐಷಾರಾಮಿ ಲೊಮೋಸಿನ್ ಔರಸ್ ಸೆನಾಟ್ ಕಾರ್ ಅನ್ನು ಉಡುಗರೆಯಾಗಿ ನೀಡಿದರು. ಅವರ ಭೇಟಿಯನಂತರ ಇಬ್ಬರೂ ಅದ್ದೂರಿ ವಾಹನದಲ್ಲಿ ಟೆಸ್ಟ್ ಡ್ರೈವ್‍ಗೆ ತೆರಳಿದರು. ಅದರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಕಿಮ್ ಮತ್ತು ಪುಟಿನ್ ಕುಮ್ಸುಸನ್ ಅರಮನೆಯಲ್ಲಿ ಶೃಂಗಸಭೆಯ ಮಾತುಕತೆ ನೆಡೆಸಿದರು. ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ಬಲಪಡಿಸುವ ಪ್ರತಿಜ್ಞೆ ಮಾಡಿದರು.
ಉಕೇನ್ ಮೇಲಿನ ಯುದ್ದದ ಸಂದಂರ್ಧದಲ್ಲಿ ರಷ್ಯಾದ ನಿಲುವಿಗೆ ಸ್ಥಿರ ಮತ್ತು ಅಚಲ ಬೆಂಬಲವನ್ನು ನಾವು ಹೆಚ್ಚು ಪ್ರಶಂಸಿಸುತ್ತೇವೆ ಎಂದು ಕಿಮ್ ಅವರಿಗೆ ಪುಟೀನ್ ಕೃತಜ್ಞತೆ ಸಲ್ಲಿಸಿದ್ದಾರೆ. ಯುನೈಟೆಡ್ ಸ್ವೇಟ್ ಮತ್ತು ಅದರ ಮಿತ್ರರಾಷ್ಟ್ರಗಳ ಪ್ರಾಬಲ್ಯದ, ಸಾಮ್ರಜ್ಯಶಾಹಿ ನೀತಿಯ ವಿರುದ್ದ ಮಾಸ್ಕೋ ಹೋರಾಡುತ್ತಿದೆ ಎಂದು ಪುಟೀನ್ ಸ್ಪಷ್ಟಪಡಿಸಿದ್ದಾರೆ. ಪುಟೀನ್ ಈ ಭೇಟಿಯು ಉಭಯ ದೇಶಗಳ ದಶಕಗಳ ಸಂಬಂಧಗಳನ್ನು ಮರುರೂಪಿಸುವ ಸಾಧ್ಯತೆ ಇದೆ.
ಪ್ಯೊಂಗ್ಯಾಗ್​ನ ವಿಮಾನ ನಿಲ್ದಾಣಕ್ಕೆ ಪುಟಿನ್ ಬುಧವಾರ ಮುಂಜಾನೆ ಆಗಮಿಸಿದರು. ಕಿಮ್ ಅವರನ್ನು ಅಪ್ಪಿಕೊಂಡು ಸ್ವಾಗತ ಮಾಡಿದ್ದಾರೆ. ನಂತರ ಪ್ಯೊಂಗ್ಯಾಗ್ ನಲ್ಲಿರುವ ರಾಜ್ಯ ಅತಿಥಿ ಗೃಹಕ್ಕೆ ಇಬ್ಬರೂ ನಾಯಕರು ತೆರಳಿದರು.

- Advertisement -

Latest Posts

Don't Miss