Sunday, July 6, 2025

Latest Posts

ಕೊರೊನಾ 3 ನೇ ಅಲೆಗೆ ತಡೆಯಲು ಯಂತ್ರ

- Advertisement -

ರಾಯಚೂರು : ಕರೋನಾ ೩ನೇ ಅಲೆ ಅಬ್ಬರಿಸಲಿದೆ ಎಂಬ ಸುದ್ದಿ ಬೆನ್ನಲ್ಲೇ ಮಕ್ಕಳಿಗಾಗಿ ರಾಯಚೂರಿನ ಪ್ರತಿಷ್ಠಿತ ರಿಮ್ಸ್ ಆಸ್ಪತ್ರೆಗೆ ವಿಶೇಷ ಯಂತ್ರವೊಂದು ಬಂದಿದೆ.. ಈಗಾಗಲೇ ಅಗಷ್ಟ್ ಕೊನೇ ವಾರದಲ್ಲಿ ಕರೋನಾ‌ಮೂರನೇ ಅಲೆ ಹೆಚ್ಚಳವಾಗಲಿದೆ ಎಂಬ ತಜ್ಞರ ಸಲಹೆ‌ ಮೇರೆಗೆ ರಾಯಚೂರಿನಲ್ಲಿ ಮುಂಜಾಗ್ರತಾ ಚಿಕಿತ್ಸಾ ಕ್ರಮಗಳ ಸಿದ್ಧತೆ ನಡೆದಿದೆ.. ಎಲ್ಲಕ್ಕಿಂತ ಮುಖ್ಯವಾಗಿ ಮೂರನೇ ಅಲೆ ಮಕ್ಕಳನ್ನ ಹೆಚ್ಚು ಬಾಧಿಸಲಿದೆ ಎಂಬ ಮಾಹಿತಿ ಬೆನ್ನಲ್ಲೇ ಎಚ್ಚೆತ್ತಿರುವ ರಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ಮುಂಜಾಗ್ರತಾ ಕ್ರಮವಾಗಿ ಮಕ್ಮಳಿಗಾಗಿಯೇ 2D ಇಕೋ ಮಷಿನ್ ನ್ನ ತರಿಸಿಕೊಂಡಿದೆ..

ಇದು ಕರೋನಾ ಪೀಡಿತ ಮಕ್ಕಳ ಚಿಕಿತ್ಸೆಗೆ ಸಹಾಯ ಮಾಡಬಲ್ಲ ಮಷಿನ್ ಆಗಿದ್ದು, ಮಕ್ಕಳಿಗೆ ಹೃದಯಾಘಾತವಾಗುವ ಸಂಭವವನ್ನ ಪತ್ತೆ ಮಾಡುತ್ತದೆ ಎನ್ನಲಾಗುತ್ತಿದೆ. ಮೂರನೇ ಅಲೆ ನಿಮಿತ್ತ ರಿಮ್ಸ್ ಆಸ್ಪತ್ರೆಗೆ ವಿಶೇಷ ಅತಿಥಿಯ ಆಗಮನ ಈ ಭಾಗದ ಬಡ ಜನರಲ್ಲಿ ಖುಷಿ ಮೂಡಿಸಿದೆ. ಯಾಕೆಂದರೆ ಇದು ಕರೋನಾ ಪೀಡಿತ ಮಕ್ಕಳ ಸಾವಿನ ಸಂಖ್ಯೆ ಕಡಿಮೆ ಮಾಡುವ ಮಷಿನ್ ಎನ್‌ಲಾಗುತ್ತಿದೆ.. ಇಂತದ್ದೊಂದು ಯಂತ್ರವನ್ನುವರಾಯಚೂರು ನಗರಸಭೆಯಿಂದ ರಿಮ್ಸ್ ಗೆ ಉಡುಗೊರೆಯಾಗಿ ನೀಡಲಾಗಿದೆ.. ಇದು ಕಲ್ಯಾಣ ಕರ್ನಾಟಕ ಭಾಗದ ಮಕ್ಕಳ ಪಾಲಿಗೆ ಸಂಜೀವಿನಿಯಂತೆ ಕೆಲಸ ಮಾಡಬಲ್ಲ ಯಂತ್ರ ಎನ್ನಲಾಗುತ್ತಿದ್ದು, ಇದರ ಸದುಪಯೋಗ ಎಷ್ಟರ ಮಟ್ಟಿಗೆ ಆಗುತ್ತೆ ಎನ್ನುವುದನ್ನ ಕಾದು ನೋಡಬೇಕಿದೆ…

ಅನಿಲ್ ಕುಮಾರ್, ಕರ್ನಾಟಕ ಟಿವಿ, ಬೆಂಗಳೂರು

- Advertisement -

Latest Posts

Don't Miss