ಮಂಡ್ಯ: ನಗರದ ಹದಗೆಟ್ಟ ರಸ್ತೆಗಳು ಕಸದ ರಾಶಿಗಳು ಅಸಮರ್ಪಕ ಯು ಜಿಡಿ ಲೈನ್ ಗಳು ಮತ್ತು ನಗರ ಸಭೆ ಅಸಮರ್ಪಕ ಕಾರ್ಯದ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಮಧು ಚಂದನ್ ಸುದ್ದಿಗೋಷ್ಠಿ ನಡೆಸಿದ್ದಾರೆ.
ಮಂಡ್ಯನಗರವು ಸಕ್ಕರೆ ನಗರ ಎಂದು ಪ್ರಖ್ಯಾತಿ ಪಡೆದಿದ್ದು, ರಾಷ್ಟ್ರಮಟ್ಟದಲ್ಲಿ ಮನ್ನಣೆ ಗಳಿಸಿದೆ. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಜನಪ್ರತಿನಿಧಿಗಳ ನಿರ್ಲಕ್ಷ್ಯತೆ, ಅದಕ್ಷ ಅಧಿಕಾರಿಗಳ ಅಸಮರ್ಥತೆ ಯಿಂದಾಗಿ ಮಂಡ್ಯ ನಗರವು ಪಾಳು ಕೊಂಪೆಯಂತಾಗಿದೆ. ಎಲ್ಲೆಂದರಲ್ಲಿ ಕಸದ ರಾಶಿಗಳು, ಚರಂಡಿ ಕಟ್ಟಿಕೊಂಡಿದ್ದು U G D ಮ್ಯಾನ್ ಹೋಲ್ ನಿಂದ ರಸ್ತೆಯ ಮೇಲೆ ಕೊಳಚೆ ನೀರು ಹರಿಯುತ್ತಿರುತ್ತದೆ ಎಂದು ಮಧು ಚಂದನ್ ಆಕ್ರೋಶ ವ್ಯಕ್ತಪಡಿಸಿದ್ರು.
‘ಮೀಸಲಾತಿ ಕ್ರೆಡಿಟ್ ಬಿಜೆಪಿ ಪಕ್ಷಕ್ಕೆ ಮಾತ್ರ ಸಲ್ಲುತ್ತೆ’
ಮಂಡ್ಯ ನಗರದ 90% ರಸ್ತೆಗಳು ಹೊಂಡಗಳಾಗಿ ಪರಿರ್ವತನೆಗೊಂಡಿವೆ. ಮತ್ತು ನಗರದ ಎಲ್ಲಾ ಪಾರ್ಕ್ ಗಳು ಮೂಲಭೂತ ಸೌಕರ್ಯಗಳಿಂದ ಬಳಲುತ್ತಿದ್ದು, ಕಾಡಿನಂತಾಗಿದೆ. ಮಂಡ್ಯ ನಗರದ ಹೊಸದಾಗಿ ನಿರ್ಮಾಣಗೊಡಿರುವ ಬಡಾವಣೆಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಿರುವುದಿಲ್ಲ. ಮಂಡ್ಯ ನಗರದ ಬಡಾವಣೆಗಳಿಗೆ ಅಸಮರ್ಪಕ ನೀರು ಪೂರೈಕೆ ಮಾಡುತ್ತಿದ್ದು ಹೆಚ್ಚಿನ ದರ ವಿಧಿಸಿದ್ದಾರೆಂದು ಹೇಳಿದರು.
ನಗರ ಸಭೆಯ ವೈಫಲ್ಯದ ಪರಿಣಾಮದಿಂದಾಗಿ ಮಂಡ್ಯ ನಗರವು ಅವ್ಯವಸ್ಥೆಗಳ ಬೀಡಾಗಿರುತ್ತದೆ. ಅಸಮರ್ಥ ಶಾಸಕರು, ಬೇಜವಾಬ್ದಾರಿಯುತ ಜಿಲ್ಲಾ ಮಂತ್ರಿಗಳು, ನಗರ ಸಭೆ ಆಡಳಿತ ಮಂಡ್ಯ ಮತ್ತು ನಗರಸಭೆ ಅಧಿಕಾರಿಗಳು ತಮ್ಮ ಸ್ನೇಹಿತಾಶಕ್ತಿಯಲ್ಲಿ ತೊಡಗಿ, ಮಂಡ್ಯ ನಗರವು ಮೂಲಭೂತ ಸೌಕರ್ಯದಿಂದ ವಂಚಿತವಾಗಲು ಕಾರಣಿಕರ್ತರಾಗಿರುತ್ತಾರೆ. ಆದ್ದರಿಂದ ಕರ್ನಾಟಕ ರಾಜ್ಯ ರೈತ ಸಂಘದ ಯುವ ರೈತ ಘಟಕವು ಶಾಸಕರ, ಅಸಮರ್ಥ ಜಿಲ್ಲಾ ಉಸ್ತುವಾರಿ ಸಚಿವರ ಉದಾಸೀನತೆ ಹಾಗೂ ನಗರ ಸಭೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವನ್ನು ಖಂಡಿಸಿ ದಿನಾಂಕ:28-10-22 ರಂದು ಮಂಡ್ಯ ನಗರದಾದ್ಯಂತ ಬೈಕ್ ರಾಲಿಯನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

