Saturday, August 9, 2025

Latest Posts

ಮಾಧುಸ್ವಾಮಿ ಬಿಜೆಪಿ ಬಾವುಟವೇ ಕಟ್ಟಿಲ್ಲ: ಬಿಜೆಪಿ ಶಾಸಕ ಸುರೇಶ್ ಗೌಡರಿಂದ ಫುಲ್ ಟ್ವಿಸ್ಟ್

- Advertisement -

Tumakuru News: ತುಮಕೂರು: ತುಮಕೂರಿನಲ್ಲಿ ಟಿಕೆಟ್ಗಾಗಿ ಗುದ್ದಾಟ ಮುಂದುವರೆದಿದ್ದು, ಒಂದೆಡೆ ಸೋಮಣ್ಣಗೆ ಟಿಕೆಟ್ ಕೊಡಿಸಲು ಜಿ.ಎಸ್ ಬಸವರಾಜು ಹರಸಾಹಸ ಪಡುತ್ತಿದ್ದರೆ, ಮತ್ತೊಂದೆಡೆ ಮುದ್ದಹನುಮೇಗೌಡ ಪರ ಶಾಸಕ ಸುರೇಶ್ ಗೌಡ ಬ್ಯಾಟ್ ಬಿಸಿದ್ದಾರೆ.

ಮಾಧುಸ್ವಾಮಿ ವಿರುದ್ಧವೂ ಶಾಸಕ ಸುರೇಶ್ ಗೌಡ ಕಿಡಿಕಾರಿದ್ದು, ಬಸವರಾಜು ಯಾರೊ ಒಬ್ಬರನ್ನ‌ ಹಿಡ್ಕೊಂಡು ಓಡಾಡ್ಬಾರ್ದು. ಮಾಧುಸ್ವಾಮಿ ಬಿಜೆಪಿ ಬಾವುಟವೇ ಕಟ್ಟಿಲ್ಲ ಎಂದಿದ್ದಾರೆ. ಸೋಮಣ್ಣನವರು ಕಳೆದ 2019 ರ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಉಸ್ತುವಾರಿಯಿದ್ದರು. ಹೀಗಾಗಿ ಅವರಿಗೆ ಸಂಪರ್ಕವಿದೆ, ಇಲ್ಲಿ ಓಡಾಡುತ್ತಿದ್ದಾರೆ ಅಷ್ಟೇ. ಸೋಮಣ್ಣ ಹೇಳಿದ್ದಾರೆ ನನಗೆ ಪಾರ್ಲಿಮೆಂಟ್ ಟಿಕೆಟ್ ಬೇಡ. ಮೂರು ಪಾರ್ಲಿಮೆಂಟ್ ಕ್ಷೇತ್ರ ಕೊಡಿ ಗೆಲ್ಲಿಸಿಕೊಂಡು ಬರ್ತೀನಿ ಅಂತ ಹೇಳಿದ್ದಾರೆ. ಹೀಗಾಗಿ ಓಡಾಡುತ್ತಿದ್ದಾರೆ. ಪಕ್ಷ ಯಾರಿಗೂ ಟಿಕೆಟ್ ನೀಡಿದ್ರು ಗೆಲ್ಲಿಸಿಕೊಂಡು ಬನ್ನಿ.‌ ಮುದ್ದಹನುಮೇಗೌಡ ಇನ್ನು ಬಿಜೆಪಿಯಲ್ಲೇ ಇದ್ದಾರೆ. ಲೋಕಸಭೆ ಟಿಕೆಟ್ ರಾಜ್ಯದಲ್ಲಿ ನಿರ್ಧಾರವಾಗಲ್ಲ. ನಡ್ಡ, ಅಮಿತ್ ಷಾ, ಮೋದಿಜೀ ಯವ್ರು ನಿರ್ಧಾರ ಮಾಡ್ತಾರೆ ಎಂದರು.

ಅಲ್ಲದೇ, ಮುದ್ದಹನುಮೇಗೌಡರಿಗೆ ಹೋಗ್ಬೇಡಿ. ನ್ಯಾಯ ಸಿಗುತ್ತೆ ಅಂತ ವಿನಂತಿ ಮಾಡಿದ್ದೆ. ಆದ್ರೂ ಹೋದ್ರು, ಕಾದು ನೋಡೋಣ‌ ಏನಾಗುತ್ತೆ ಅಂತ. ಅವರಿನ್ನು ಹೋಗಿ ಕಾಂಗ್ರೆಸ್ ಸೇರ್ಪಡೆಯಾಗಿಲ್ಲ. ಕಾಂಗ್ರೆಸ್ ಸೇರ್ಪಡೆಯಾಗ್ತೀನಿ ಅಂತ ಮುದ್ದಹನುಮೇಗೌಡ್ರು ಕೂಡ ಹೇಳಿಲ್ಲ. ಮುದ್ದಹನುಮೇಗೌಡರನ್ನ ಸೇರಿಸಿಕೊಳ್ಳಬೇಕು ಅನ್ನೋದು ರಾಜಣ್ಣನವರ ಅಭಿಪ್ರಾಯ. ಅವರೇ ಹೈಕಮಾಂಡ್ ಗೆ ಕೇರ್ ಮಾಡಲ್ಲ ಅಂತಿದ್ದಾರೆ.‌ ಮತ್ತೆ ಟಿಕೆಟ್ ಕೊಡೊರು ಯಾರು..? ಎಂದು ಪ್ರಶ್ನಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್ ಕೂಡ ಟಿಕೆಟ್ ಕೊಡ್ತೀವಿ ಅಂತ ಹೇಳಿಲ್ಲ. ಹೈಕಮಾಂಡ್ ಮಾಧುಸ್ವಾಮಿ, ಮುದ್ದಹನುಮೇಗೌಡ ಯಾರಿಗೆ ಹೇಳಿದ್ರು ಮಾಡ್ತೀವಿ. ಹೊರಗಿನವರು ಒಳಗಿನವ್ರು ಅಂತ ಮಾತನಡುವ ಹಕ್ಕು ಯಾರಿಗಿಲ್ಲ. ಮಾಧುಸ್ವಾಮಿಗೆ ಗೊಂದಲ ಇಡುವಂತೆ ಯಾರು ಹೇಳಿಲ್ಲ. ಅವರೇನು ರಾಜ್ಯಾಧ್ಯಕ್ಷರಲ್ಲ. ಅವರ ಅಭಿಪ್ರಾಯ ಹೇಳಿರಬಹುದು ಅಷ್ಟೇ ಎಂದು ಹೇಳಿದ್ದಾರೆ.‌

ಪಾರ್ಟಿ ಸುಪ್ರೀಂ, ಮಾಧುಸ್ವಾಮಿ ಎಲ್ಲಿ ಇದ್ರು..? ಹೋದ ಸಲ ಕೆಜೆಪಿಗೆ ಬಂದ್ರು, ಬಿಜೆಪಿಯಲ್ಲಿ ಪಾರ್ಟಿ ಟಿಕೆಟ್ ಕೊಡ್ತು. ಅದು ಕಿರಣ್ ಕುಮಾರ್ ಅವರನ್ನ ಕಳೆದುಕೊಂಡು ಟಿಕೆಟೆ ಕೊಟ್ರು. ಪಕ್ಷ ನಿರ್ಧಾರ ಮಾಡಿದ್ದಕ್ಕೆ ಸಚಿವರಾದ್ರೂ. ಅವರು ಯಾವತ್ತು ನಮ್ಮ ಪಕ್ಷದ ಬಾವುಟ ಕಟ್ಟಿಲ್ಲ. ಒಡಕು ಮಾತುಗಳನ್ನಾಡಬಾರದು. ಅಮಿತ್ ಷಾ ಹೇಳಿದ್ದಾರೆ. 28 ಕ್ಷೇತ್ರದಲ್ಲೂ ಸ್ಟ್ರಾಂಗ್ ಕ್ಯಾಂಡಿಯೇಟ್ ಹಾಕ್ತೀವಿ ಅಂತ. ಗೆಲ್ಲುವಂತಹ ಕ್ಯಾಂಡಿಯೇಟ್ ಗೆ ಅವಕಾಶ ಕೊಡ್ತಾರೆ ಅಂತ ನಂಬಿಕೆಯಿದೆ ಎಂದಿದ್ದಾರೆ.

ಇನ್ನು ಈ ಬಗ್ಗೆ ಮಾತು ಮುಂದುವರಿಸಿದ ಸುರೇಶ್ ಗೌಡ, ಮಾಧುಸ್ವಾಮಿ ಮಾತನಾಡಿರುವುದು ಸರಿಯಲ್ಲ. ಬೇರೆ ಬೇರೆ ಮಾತುಗಳನ್ನ ಯಾರು ಮಾತನಾಡಬಾರದು. ಬಸವರಾಜು ಯಾರೊ ಒಬ್ಬರನ್ನ‌ ಹಿಡಿದು ಕೊಂಡು ಓಡಾಡ್ಬಾರ್ದು. ಸೋಮಣ್ಣ‌ ನಮ್ಮ ಪಾರ್ಟಿಯವ್ರು ಅವರ‌ ಜೊತೆಗೆ ಮದುವೆಗೆ ಹೋಗಿದ್ದು ತಪ್ಪೇನು..? ಪಾರ್ಲಿಮೆಂಟ್ ಟಿಕೆಟ್ ಕೊಡಿ ಅಂತ ನಾನು ಎಲ್ಲಿಯೂ ಹೇಳಿಲ್ಲ. ಟಿಕೆಟ್ ವಿಷಯದಲ್ಲಿ ಯಾವುದೇ ಒಡಕಿಲ್ಲ. ಸೋತವರಿಗೆ ಟಿಕೆಟ್ ಕೊಡ್ತಾರಾ ಇಲ್ವಾ ಅಂತ ಪಾರ್ಟಿಯಲ್ಲಿ ಚರ್ಚೆ ಆಗ್ತಿದೆ. ಮಾಧುಸ್ವಾಮಿ, ಸಿ.ಟಿ ರವಿ, ಸೋಮಣ್ಣ ಸೇರಿದ್ದಂತೆ ತುಂಬಾ ಜನ ಸೋತಿದ್ದಾರೆ ಎಂದರು.

ನಾನು ಲೋಕಸಭೆಗೆ ಸ್ಪರ್ಧಿಯಲ್ಲ. ಮುದ್ದಹನುಮೇಗೌಡರು 90 % ಕಾಂಗ್ರೆಸ್ ನತ್ತ ಹೋಗಿದ್ದಾರೆ. 10 % ಬಿಜೆಪಿಯಲ್ಲಿದ್ದಾರೆ.‌ ಆದ್ರೆ ಕಾಂಗ್ರೆಸ್‌ನವ್ರು‌ 90 % ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡ್ಬಾರ್ದು ಅಂತ ಇದ್ದಾರೆ.‌ 10 % ಟಿಕೆಟ್ ಕೊಡ್ಬೇಕು ಅಂತ ಇದ್ದಾರೆ. ಪಾರ್ಟಿ ಸರ್ವೇ ಮಾಡಿಸಿ‌ ಟಿಕೆಟ್ ಕೊಡುತ್ತೆ ಎಂದು ಸುರೇಶ್ ಗೌಡ ಹೇಳಿದ್ದಾರೆ.‌

ರಾಕ್ ಲೈನ್ ವಿರುದ್ಧ “ದೊಡ್ಡ” ಷಡ್ಯಂತ್ರ..?

ಬಡವರು ಬಡವರಾಗಿ ಉಳಿಯುವುದಕ್ಕೆ ಕಾರಣಕರ್ತರೇ ಕಾಂಗ್ರೆಸ್‌ನವರು: ಬಿ.ವೈ.ವಿಜಯೇಂದ್ರ

ಬಿಜೆಪಿ ಸರಣಿ ಸುಳ್ಳುಗಳ ಮೂಲಕ ಸತ್ಯವನ್ನು ಹುದುಗಿಸಿಡಲು ಯತ್ನಿಸುತ್ತದೆ: ಸಿಎಂ ಸಿದ್ದರಾಮಯ್ಯ

- Advertisement -

Latest Posts

Don't Miss