Madhya Pradesh: ದವಾ ನಹಿ ಕಾಮ್ ಕಿಯಾತೋಭಿ, ದುವಾ ಕಾಮ್ ಕರ್ತಾ ಹೈ ಅಂತಾ ಹಿಂದಿಯಲ್ಲಿ 1 ಮಾತಿದೆ. ಅಂದ್ರೆ, ಔಷಧಿ ಕೆಲಸ ಮಾಡದಿದ್ದರೂ, ನಮ್ಮ ಪ್ರಾರ್ಥನೆ ಕೆಲಸ ಮಾಡುತ್ತದೆ ಅಂತಾ ಅರ್ಥ.
ಇದಕ್ಕೆ ಉದಾಹರಣೆ ಎಂಬಂತೆ, ಮಧ್ಯಪ್ರದೇಶದ ಸತ್ನಾದಲ್ಲಿ 1 ಘಟನೆ ನಡೆದಿದೆ. ದುರ್ಗಾ ದ್ವಿವೇದಿ ಎಂಬ ಮಹಿಳೆ ಗರ್ಭಿಣಿಯಾಗಿದ್ದು, ಹೆರಿಗೆ ನೋವೆಂದು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಆಕೆಗೆ ಚಿಕಿತ್ಸೆ ನೀಡಲು ಬಂದ ವೈದ್ಯರು, ಮಗು ಸತ್ತಿದೆ ಎಂದು ಹೇಳಿದ್ದಾರೆ. ತನ್ನ ಮಗು ಜನಿಸುವ ಮುನ್ನವೇ ಸತ್ತು ಹೋಯ್ತು ಎಂದು ಆಕೆ ಮತ್ತು ಆಕೆಯ ಮನೆಯವರು ದುಃಖಿಸಿದ್ದಾರೆ.
ಮಗು ಇದ್ದರೂ ಹೋದರೂ, ಅದನ್ನು ಆಚೆ ತೆಗೆಯಲೇಬೇಕು. ಹಾಗಾಗಿ ಗರ್ಭಪಾತ ಮಾಡುವ ಸಲಹೆ ನೀಡಿದ್ದರು ವೈದ್ಯರು. ಆದರೆ ಹೋಪ್ ಕಳೆದುಕ“ಳ್ಳದ ದುರ್ಗಾ ದ್ವಿವೇದಿ ಪತಿ ರಾಹುಲ್ ದ್ವಿವೇದಿ, ಬೇರೆ ಉತ್ತಮ ಆಸ್ಪತ್ರೆಗೆ ಕರೆದ“ಯ್ದು ಪರೀಕ್ಷಿಸಿದ್ದಾರೆ. ಆಗ ಮಗು ಆರೋಗ್ಯವಾಗಿದೆ ಎಂದು ಅಲ್ಲಿನ ವೈದ್ಯರು ಧೃಡಪಡಿಸಿದ್ದಾರೆ. ಬಳಿಕ ಸಿಸರಿನ್ ಮಾಡಿದ್ದು, 3.8 ಕೆಜಿ ತೂಕವಿರುವ ಆರೋಗ್ಯವಂತ ಗಂಡು ಮಗುವಿಗೆ ದುರ್ಗಾ ಜನನ ನೀಡಿದ್ದಾಳೆ.
ಇದೀಗ ರಾಹುಲ್ ಈ ಬಗ್ಗೆ ದೂರು ದಾಖಲಿಸಲು ಮುಂದಾಗಿದ್ದು, ಆರೋಗ್ಯಕರ ಮಗುವಿನ ಜೀವ ತೆಗೆಯುತ್ತಿದ್ದರು. ಹೀಗಾಗಿ ಸಿವಿಲ್ ಆಸ್ಪತ್ರೆ ವಿರುದ್ಧ ಕ್ರಮಕೈಗ“ಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕ“ಂಡಿರುವ ಪೋಲೀಸರು, ಆಸ್ಪತ್ರೆ ವಿರುದ್ಧ ಖಂಡಿತ ಕ್ರಮ ಕೈಗ“ಳ್ಳಲಾಗುತ್ತದೆ ಎಂದಿದ್ದಾರೆ.