Chithradurga News: ಚಿತ್ರದುರ್ಗ: ಕುಡಿದ ಚಟಕ್ಕೆ ಬಲಿಯಾಗಿದ್ದ ಮಗ ತಂದೆಯನ್ನು ಕ್ಷುಲ್ಲಕ ಕಾರಣಕ್ಕೆ ಹೊಡೆದು ಸಾಯಿಸಿರುವ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ಭತ್ತಯ್ಯನಹಟ್ಟಿ ಗ್ರಾಮದ ವರವು ಕಾವಲಿನ ಜಮೀನಿನಲ್ಲಿ ಈ ಘಟನೆ ನಡೆದಿದೆ. ಕುಡಿತದ ಚಟ ಕಲಿತ ಮಗ ಭಾನುವಾರ ತಡರಾತ್ರಿ ತಂದೆ ಜೊತೆ ಜಗಳ ಮಾಡಿದ್ದಾನೆ. ಬೆಳಿಗ್ಗೆ ಈ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ವರವು ಕಾವಲಿನ ಬಳಿ ಈ ಘಟನೆ ನಡೆದಿದ್ದು, ಸೋಮವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಸೂರಯ್ಯ(55) ಕೊಲೆಯಾದ ವ್ಯಕ್ತಿ. ಮೋಹನ್ ತಂದೆಯನ್ನು ಕೊಲೆ ಮಾಡಿದ ಆರೋಪಿ. ಘಟನೆ ನಡೆದ ನಂತರ ಚಳ್ಳಕೆರೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ನಾಯಕನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಹೆಚ್ಚುವರಿ ಎಸ್‌ಪಿ ಕುಮಾರ್, ಡಿವೈಎಸ್ಪಿ ರಾಜಣ್ಣ, ವೃತ ನಿರೀಕ್ಷಕ ಕೆ ಸಮಿಉಲ್ಲಾ, ಪಿಎಸ್ಐ ದೇವರಾಜ್, ಪಿಎಸ್ಐ 2 ಶಿವಕುಮಾರ್, ಎಎಸ್ಐ ತಿಪ್ಪೇಸ್ವಾಮಿ, ದಾದಾಪೀರ್ ಪೇದೆಗಳಾದ ಅಣ್ಣಪ್ಪ ಸೇರಿದಂತೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ನಾಯಕನಹಟ್ಟಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ.
ಹಣ ಮಾಡುವ ಸ್ವಹಿತಾಸಕ್ತಿಯಿಂದ ಹುಬ್ಬಳ್ಳಿ ಪಾಲಿಕೆಯ ಸುತ್ತಮುತ್ತಲ ಹಳ್ಳಿಗಳ ಸೇರ್ಪಡೆಗೆ ಕಾರ್ಪೊರೇಟರ್ಗಳ ಸಂಚು?
ರೌಡಿಶೀಟರ್ ಕೇಸ್ ಹಾಕುವ ಬೆದರಿಕೆ, ಹುಬ್ಬಳ್ಳಿ ಇನ್ಸ್ಪೆಕ್ಟರ್ ವಿರುದ್ದ ಮತ್ತೊಂದು ಗಂಭೀರ ಆರೋಪ
10 ವರ್ಷದಿಂದ ಮನೆಗಾಗಿ ಅಲೆದಾಡಿದ್ದ ವಿಶೇಷ ಚೇತನ ಮಹಿಳೆ ಬದುಕಿಗೆ ಬಂಗಾರವಾದ ಜನತಾ ದರ್ಶನ