Thursday, December 5, 2024

Latest Posts

ಅರ್ಜುನನ ಸಾವನ್ನು ಕಂಡು ಗಂಗಾಮಾತೆ ಗಹಿಗಹಿಸಿ ನಕ್ಕಿದ್ದೇಕೆ..?

- Advertisement -

ಮಹಾಭಾರತದಲ್ಲಿ ಕಂಡುಬರುವ ಧನುರ್ವಿದ್ಯಾ ಪ್ರವೀಣ ಅಂದ್ರೆ ಅರ್ಜುನ. ಪಂಚ ಪಾಂಡವರಲ್ಲಿ ಒಬ್ಬನಾದ ಅರ್ಜುನ ಕಾಣಲು ಸುಂದರ ಮತ್ತು ಧನುರ್ವಿದ್ಯೆಯಲ್ಲೂ ಪರಿಣಿತನಾಗಿದ್ದ. ಈತ ಕುರುವಂಶದವನಾಗಿದ್ದು, ಪಾಂಡುರಾಜನ ಪುತ್ರನಾಗಿದ್ದ. ಆದ್ರೆ ಅರ್ಜುನ ನಿಧನನಾದಾಗ, ಕುರುವಂಶದ ಶ್ರೇಯಸ್ಸನ್ನು ಬಯಸಿದ ಭೀಷ್ಮನ ತಾಯಿಯಾದ ಗಂಗಾದೇವಿ ಗಹಗಹಿಸಿ ನಕ್ಕಳಂತೆ. ಯಾಕೆ ಅರ್ಜುನನ ಮೃತ್ಯು ಕಂಡು ಗಂಗೆ ಗಹಗಹಿಸಿ ನಕ್ಕಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಮಹಾಭಾರತ ಯುದ್ಧದ ಬಳಿಕ ಅರ್ಜುನ ಅಶ್ವಮೇಧ ಯಾಗ ಮಾಡಲು ನಿರ್ಧರಿಸಿದ., ಅಶ್ವದ ಜೊತೆ ಬೇರೆ ಬೇರೆ ಸಾಮ್ರಾಜ್ಯಕ್ಕೆ ಹೋದ. ಅರ್ಜುನನ ಶೂರತ್ವವನ್ನು ಬಲ್ಲ ರಾಜರು, ಯುದ್ಧದ ಆಹ್ವಾನ ಸ್ವೀಕರಿಸದೇ, ಹಸ್ತಿನಾಪುರದ ಅಧೀನತೆಯನ್ನ ಸ್ವೀಕರಿಸಿದರು. ಆದರೆ ಅರ್ಜುನ ಮಣಿಪುರಕ್ಕೆ ಹೋದಾಗ, ಅಲ್ಲಿ ತನ್ನ ಪುತ್ರ ಅಂದ್ರೆ ಅರ್ಜುನ ಮತ್ತು ಚಿತ್ರಾಂಗದೆಯ ಪುತ್ರ ಬಬ್ರುವಾಹನನ್ನು ಭೇಟಿಯಾದ. ತಂದೆ ಬಂದನೆಂದು ಬಬ್ರುವಾಹನ ಖುಷಿಯಿಂದ ಬಂದ. ಆದ್ರೆ ಅರ್ಜುನ ನಾನು ಅಶ್ವಮೇಧ ಯಾಗಕ್ಕಾಗಿ ನಿನ್ನೊಂದಿಗೆ ಯುದ್ಧ ಮಾಡಲು ಬಂದಿದ್ದೇನೆ ವಿನಃ ನಿನ್ನ ತಂದೆಯಾಗಿ ಬಂದಿಲ್ಲನೆಂದು ಹೇಳುತ್ತಾನೆ.

ಈ ಮಾತಿಗೆ ಬೇಸರನಾದ ಬಬ್ರುವಾಹನ ಅರ್ಜುನನೊಂದಿಗೆ ಯುದ್ಧ ಮಾಡಲು ಸಿದ್ಧನಾಗುತ್ತಾನೆ. ಅರ್ಜುನನಿಗೂ, ಬಬ್ರುವಾಹನನಿಗೂ ಯುದ್ಧವಾಗುತ್ತದೆ. ಏನೇ ಮಾಡಿದರೂ ಅರ್ಜುನನನ್ನು ಸೋಲಿಸಲಾಗುವುದಿಲ್ಲ. ಆಗ ಬಬ್ರುವಾಹನ ಕಾಮಾಕ್ಯ ದೇವಿಯನ್ನ ನೆನೆದು, ವಿಜಯ ನೀಡುವಂತೆ ಪ್ರಾರ್ಥಿಸುತ್ತಾನೆ. ಕಾಮಾಕ್ಯ ದೇವಿಯ ಕೃಪೆಯಿಂದ ಬಬ್ರುವಾಹನನಿಗೆ ಬಾಣವೊಂದು ಪ್ರಾಪ್ತಿಯಾಗುತ್ತದೆ. ಆ ಬಾಣದಿಂದ ಅರ್ಜುನನ ರುಂಡವನ್ನು ನೆಲಕ್ಕುರುಳಿಸುತ್ತಾನೆ.

ಆಗ ಗಂಗಾ ಮಾತೆ ಅರ್ಜುನನ ಸ್ಥಿತಿ ಕಂಡು ಗಹಗಹಿಸಿ ನಗುತ್ತಾಳೆ. ಅಷ್ಟೊತ್ತಿಗೆ ಕೃಷ್ಣ ಮತ್ತು ಕುಂತಿ ದೇವಿ ಆ ಸ್ಥಳಕ್ಕೆ ಬರುತ್ತಾರೆ. ಮಗನ ಅವಸ್ಥೆ ಕಂಡು ಕುಂತಿ ದೇವಿ ಕಣ್ಣೀರಿಡುತ್ತಾಳೆ. ಆಗ ಗಂಗಾಮಾತೆ, ನೀನ್ಯಾಕೆ ಅಳುತ್ತಿದ್ದೀಯಾ..? ಅರ್ಜುನನಿಗೆ ತಕ್ಕ ಶಾಸ್ತಿಯಾಗಿದೆ. ಮಹಾಭಾರತ ಯುದ್ಧ ಸಮಯದಲ್ಲಿ ಶಿಖಂಡಿನಿಯ ಸಹಾಯ ಪಡೆದು, ಅರ್ಜುನ ನನ್ನ ಪುತ್ರ ಭೀಷ್ಮನನ್ನು ಕೊಲ್ಲಲಿಲ್ಲವೇ..? ಅದರ ಪರಿಣಾಮವಾಗಿ ಈಗ ಮಗನಿಂದಲೇ ಅರ್ಜುನ ಕೊಲ್ಲಲ್ಪಟ್ಟಿದ್ದಾನೆ ಎನ್ನುತ್ತಾಳೆ.

ಆಗ ಕೃಷ್ಣ ಗಂಗಾಮಾತೆಗೆ ಸಮಜಾಯಿಸಿ ಹೇಳಲು ಪ್ರಯತ್ನಿಸುತ್ತಾನೆ. ಗಂಗೆ ಭೀಷ್ಮ ಪಿತಾಮಹರು ನೀಡಿದ ಉಪಾಯದ ಪ್ರಕಾರವೇ ಅರ್ಜುನ ನಡೆದುಕೊಂಡಿದ್ದ. ಅದರಲ್ಲಿ ಅರ್ಜುನದೇನು ತಪ್ಪಿಲ್ಲ ಎನ್ನುತ್ತಾನೆ. ನಂತರ ಬಬ್ರುವಾಹನನ ಮಲತಾಯಿ ಊಲೂಪಿಯ ಬಳಿ ಇದ್ದ ನಾಗಮಣಿಯಿಂದ ಅರ್ಜುನನ್ನು ಪುನಃ ಬದುಕಿಸಲಾಗುತ್ತದೆ.

- Advertisement -

Latest Posts

Don't Miss