Sunday, September 8, 2024

Latest Posts

ದ್ರೌಪದಿ ಪಂಚ ಪಾಂಡವರ ಪತ್ನಿಯಾಗಿದ್ದು ಹೇಗೆ..?

- Advertisement -

ದ್ರೌಪದಿಗೆ ಪಾಂಚಾಲಿ ಅಂತಾನೂ ಕರಿಯಲಾಗತ್ತೆ. ಈ ಹೆಸರು ಆಕೆಗೆ ಹೇಗೆ ಬಂತು ಅಂದ್ರೆ, ಆಕೆ ಪಂಚ ಪಾಂಡವರನ್ನ ವಿವಾಹವಾಗಿದ್ದಳು. ಈ ಕಾರಣಕ್ಕೆ ಆಕೆಯನ್ನು ಪಾಂಚಾಲಿ ಅಂತಾ ಕರೆಯಲಾಗುತ್ತದೆ. ಹಾಗಾದ್ರೆ ದ್ರೌಪದಿ ಐವರನ್ನೇಕೆ ವಿವಾಹವಾದಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಮಹಾಭಾರತದಲ್ಲಿ ಬರುವ ಪ್ರಮುಖ ಪಾತ್ರದಲ್ಲಿ ದ್ರೌಪದಿಯೂ ಒಬ್ಬಳು. ದ್ರುಪದ ರಾಜ ಯಜ್ಞ ಮಾಡಿದಾಗ, ಅದರಿಂದ ಪ್ರಾಪ್ತಳಾದವಳೇ ದ್ರೌಪದಿ. ಅಗ್ನಿಯಿಂದ ಎದ್ದು ಬಂದಿದ್ದ ದ್ರೌಪದಿ, ಪವಿತ್ರಳಾಗಿದ್ದಳು. ಸ್ವಯಂವರದಲ್ಲಿ ದ್ರೌಪದಿಯ ಮನಗೆದ್ದ ಅರ್ಜುನ ಆಕೆಯನ್ನು ವಿವಾಹವಾದ. ಆದ್ರೆ ಅರ್ಜುನ ಮನೆಗೆ ಬಂದು, ಕುಂತಿ ದೇವಿಗೆ ಈ ಬಗ್ಗೆ ಹೇಳಲು ಬಂದಾಗ, ಪೂಜೆಯಲ್ಲಿ ಮಗ್ನಳಾಗಿದ್ದ ದ್ರೌಪದಿ, ನೀ ತಂದ ವಸ್ತುವನ್ನು ನೀವು ಐವರು ಹಂಚಿಕೊಳ್ಳಿ ಎಂದು ಬಿಟ್ಟಳು. ಹೀಗಾಗಿ ದ್ರೌಪದಿ ಅರ್ಜುನನ್ನು ವಿವಾಹವಾಗಿದ್ದರೂ ಕೂಡ, ಪಂಚ ಪಾಂಡವರಿಗೆ ಪತ್ನಿಯಾಗಿರಬೇಕಾಯಿತು.

ಇದಕ್ಕೂ ಒಂದು ಕಾರಣವಿದೆ. ಅದೇನೆಂದರೆ, ಪೂರ್ವ ಜನ್ಮದಲ್ಲಿ ದ್ರೌಪದಿ, ಬ್ರಾಹ್ಮಣನ ಪತ್ನಿಯಾಗಿದ್ದಳು. ಆಕೆಯ ಪತಿ ತೀರಿಹೋಗಿ, ಆಕೆ ವಿಧವೆಯಾದಳು. ಒಂದೆಡೆ ಬಡತನ, ಇನ್ನೊಂದೆಡೆ ಗಂಡನನ್ನು ಕಳೆದುಕೊಂಡ ದುಃಖವಿದ್ದರೂ, ದ್ರೌಪದಿ, ಊಟಕ್ಕೆ ಬಂದ ಬ್ರಾಹ್ಮರಿಗೆ ಮೃಷ್ಟಾನ್ನ ಭೋಜನ ಮಾಡಿ ಬಡಿಸಿ, ಅವರನ್ನು ಚೆನ್ನಾಗಿ ನೋಡಿಕೊಂಡಳು. ಅವರು ಅವಳಿಗೆ ಶಿವನನ್ನು ಕುರಿತು ತಪಸ್ಸು ಮಾಡು, ನಿನಗೆ ಒಳ್ಳೆಯ ವರ ಸಿಗುತ್ತದೆ ಎಂದು ಹೇಳಿದರು. ಅವರ ಸಲಹೆಯಂತೆ ದ್ರೌಪದಿ, ಶಿವನನ್ನು ಕುರಿತು ತಪಸ್ಸು ಮಾಡಿದಳು.

ದ್ರೌಪದಿಯ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ಶಿವ, ಏನು ವರ ಬೇಕೆಂದು ಕೇಳಿದ. ಆಕೆ ನನಗೆ ಮುಂದಿನ ಜನ್ಮದಲ್ಲಿ ಸಿಗುವ ಪತಿ ಹೇಗಿರಬೇಕೆಂದರೆ, ಸತ್ಯವನ್ನೇ ನುಡಿಯಬೇಕು. ಬಲಿಷ್ಠನಾಗಿರಬೇಕು. ಯುದ್ಧ ತಂತ್ರಗಳಲ್ಲಿ ನಿಸ್ಸೀಮನಾಗಿರಬೇಕು. ನೋಡಲು ಸುಂದರನಾಗಿರಬೇಕು. ಬುದ್ಧಿವಂತನಾಗಿರಬೇಕು ಎಂದು ಕೇಳಿದಳು. ಆಗ ಶಿವ ಇವೆಲ್ಲ ಗುಣ ಒಬ್ಬನಲ್ಲೇ ಇರಲು ಸಾಧ್ಯವಿಲ್ಲ. ಆದರೂ ನಿನಗೆ ಇಂಥ ಪತಿಯನ್ನು ಅನುಗ್ರಹಿಸುತ್ತೇನೆಂದು ವರ ನೀಡುತ್ತಾನೆ.

ಈ ಕಾರಣಕ್ಕೆ ಪಂಚ ಪಾಂಡವರನ್ನ ದ್ರೌಪದಿ ಪತಿಯರನ್ನಾಗಿ ಪಡೆದಳು. ಭೀಮ ಬಲಿಷ್ಠನಾಗಿದ್ದ. ಯುಧಿಷ್ಠಿರ ನಿಜವನ್ನೇ ನುಡಿಯುತ್ತಿದ್ದ. ಅರ್ಜುನ ಯುದ್ಧ ತಂತ್ರಗಳಲ್ಲಿ ಚುರುಕಾಗಿದ್ದ. ನಕುಲ- ಸಹದೇವ ನೋಡಲು ಸುಂದರರಾಗಿದ್ದರು. ಬುದ್ಧಿವಂತರೂ ಇದ್ದರು. ಹೀಗೆ ಎಲ್ಲ ಗುಣ ಲಕ್ಷಣಗಳಿರುವ ಪಂಚ ಪಾಂಡವರು ಪಾಂಚಾಲಿಯ ಪಾಲಾದರು.

- Advertisement -

Latest Posts

Don't Miss