ಮಹಾದೇವ ಬೆಟ್ಟಿಂಗ್ ಆ್ಯಪ್ ನಿಷೇಧ: ಕೇಂದ್ರ ಸರ್ಕಾರದ ಮಹತ್ವದ ಆದೇಶ

Bengaluru: ಮಹಾದೇವ ಬೆಟ್ಟಿಂಗ್ ಆ್ಯಪ್ (Mahadev Betting App) ನಿಷೇಧಗೊಳಿಸಿ ಕೇಂದ್ರ ಸರ್ಕಾರ ಭಾನುವಾರ ಆದೇಶ ಹೊರಡಿಸಿದೆ. ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಿದ್ದು, ಈ ಮಧ್ಯೆ ಮಹದೇವ್ ಬುಕ್ ಆನ್‌ಲೈಲ್ ಸೇರಿದಂತೆ ಇತರೆ 21 ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳ ವಿರುದ್ಧ ಐಟಿ ಸಚಿವಾಲಯ ಭಾನುವಾರ ನಿರ್ಬಂಧ ಹೇರಿದೆ. ಇಡಿ ಶಿಫಾರಸಿನ ನಂತರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಆದೇಶ ಹೊರಡಿಸಲಾಗಿದೆ.

ಈ ಕುರಿತಾಗಿ ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿಕೆ ನೀಡಿದ್ದು, “ಸೆಕ್ಷನ್ 69 ಎ ಐಟಿ ಕಾಯಿದೆ ಅಡಿಯಲ್ಲಿ ವೆಬ್‌ಸೈಟ್, ಆ್ಯಪ್ ಅನ್ನು ನಿಷೇಧಿಸುವ ಎಲ್ಲಾ ಅಧಿಕಾರವನ್ನು ಛತ್ತೀಸ್‌ಗಢ ಸರ್ಕಾರ ಹೊಂದಿದೆ. ಆದರೆ, ಅವರು ಹಾಗೆ ಮಾಡಿಲ್ಲ. ಕಳೆದ 1.5 ವರ್ಷಗಳಿಂದ ತನಿಖೆ ನಡೆಯುತ್ತಿದ್ದು, ರಾಜ್ಯ ಸರ್ಕಾರದಿಂದ ಅಂತಹ ಯಾವುದೇ ವಿನಂತಿಯನ್ನು ಮಾಡಿಲ್ಲ. ವಾಸ್ತವವಾಗಿ, ED ಯಿಂದ ಮೊದಲ ಮತ್ತು ಏಕೈಕ ಮನವಿ ಸ್ವೀಕರಿಸಲಾಗಿದೆ. ಅದರ ಆಧಾರದ ಮೇಲೆ ಕಾರ್ಯನಿರ್ವಹಿಸಲಾಗಿದೆ ಎಂದರು.

ಗಮನಾರ್ಹ ಸಂಗತಿಯೆಂದರೆ, ಮಹಾದೇವ್ ಬೆಟ್ಟಿಂಗ್ ಆ್ಯಪ್ ಮಾಲೀಕರನ್ನು ಆಗಸ್ಟ್‌ನಲ್ಲಿ ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್ 19 ರ ಅಡಿಯಲ್ಲಿ ಬಂಧಿಸಲಾಗಿದೆ. ಕಳೆದ ವಾರ, ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರವರ್ತಕರು ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್‌ಗೆ ಸುಮಾರು 508 ಕೋಟಿ ರೂ. ನೀಡಿರುವ ಕುರಿತು ಫೋರೆನ್ಸಿಕ್ ವಿಶ್ಲೇಷಣೆ ಮತ್ತು ‘ಕ್ಯಾಶ್ ಕೊರಿಯರ್’ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಇಡಿ ಹೇಳಿಕೊಂಡಿದೆ.

ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ನೊಂದಿಗೆ ಲಿಂಕ್ ಮಾಡಲಾದ ಹಣ ವರ್ಗಾವಣೆ ಜಾಲಗಳ ವಿರುದ್ಧ ತನಿಖಾ ಸಂಸ್ಥೆ ರಾಜ್ಯದಲ್ಲಿ ದಾಳಿ ನಡೆಸಿದ ಒಂದು ದಿನದ ನಂತರ ಈ ವಿಚಾರಗಳು ಇದೀಗ ಬೆಳಕಿಗೆ ಬಂದಿವೆ.

ಜಾರಿ ನಿರ್ದೇಶನಾಲಯದ ಪ್ರಕಾರ, ಗಮನಾರ್ಹ ಮೊತ್ತದ ನಗದನ್ನು ತಲುಪಿಸುವ ನಿರ್ದಿಷ್ಟ ಉದ್ದೇಶದೊಂದಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಿಂದ ಕಳುಹಿಸಲಾಗಿದೆ ಎಂದು ಬಂಧಿತ ಅಸಿಂ ದಾಸ್ ವಿಚಾರಣೆ ವೇಳೆ ಹೇಳಿದ್ದಾನೆ. ದಾಸ್ ವಿಚಾರಣೆಯ ಸಂದರ್ಭದಲ್ಲಿ, ರಾಜ್ಯದಲ್ಲಿ ಮುಂಬರುವ ಚುನಾವಣಾ ವೆಚ್ಚವನ್ನು ಬೆಂಬಲಿಸಲು ‘ಬಘೇಲ್‌’ ಎಂದು ಕರೆಯಲ್ಪಡುವ ಪ್ರಮುಖ ರಾಜಕಾರಣಿಗೆ ತಲುಪಿಸುವ ಉದ್ದೇಶದಿಂದ ಮಹಾದೇವ್ ಬೆಟ್ಟಿಂಗ್ ಅಪ್ಲಿಕೇಶನ್‌ನ ಪ್ರವರ್ತಕರು ತಡೆಹಿಡಿದ ಹಣವನ್ನು ವ್ಯವಸ್ಥೆಗೊಳಿಸಿದ್ದಾರೆ ಎಂದು ಅವರು ತಪ್ಪೊಪ್ಪಿಕೊಂಡಿದ್ದ.

KPSC ಎಕ್ಸಾಂನಲ್ಲಿ ಮಾಂಗಲ್ಯ ಸರ ತೆಗೆಸಿದ ಸಿಬ್ಬಂದಿ

ಕಾಂಗ್ರೆಸ್’ನವರು ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ: Govind Karajola

ಕಮಲ ಪಡೆಗೆ ಮತ್ತೊಂದು ಶಾಕ್ ಕೊಟ್ಟ ಜಗದೀಶ್ ಶೆಟ್ಟರ್; ಬಿಜೆಪಿಯ ಮತ್ತೊಬ್ಬ ಮಾಜಿ ಶಾಸಕ ಕಾಂಗ್ರೆಸ್ಗೆ

About The Author