Mahakumbh: ಮಹಾಕುಂಭ ಮೇಳದಲ್ಲಿ ಭಾಗಿಯಾಗಲು ದೇಶ ವಿದೇಶಗಳಿಂದ ಕೋಟಿ ಕೋಟಿ ಜನ ಪ್ರಯಾಗರಾಜ್‌ಗೆ ಬರುತ್ತಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, ಮುಕ್ತಿಗಾಗಿ ಶಿವನಲ್ಲಿ ಪ್ರಾರ್ಥಿಸಿದ್ದಾರೆ. ಜನ ಸಾಮಾನ್ಯರು, ಬರೀ ಹಿಂದೂಗಳಷ್ಟೇ ಅಲ್ಲ. ಬದಲಾಗಿ ಕೆಲ ಮುಸ್ಲಿಂಮರು ಕೂಡ ಈ ಕುಂಭ ಮೇಳಕ್ಕೆ ಬರ್ತಿದ್ದಾರೆ. ಸೆಲೆಬ್ರಿಟಿಗಳು, ಶ್ರೀಮಂತ ಉದ್ಯಮಿಗಳೆಲ್ಲ ಕುಂಭ ಮೇಳಕ್ಕೆ ಬಂದು ಪುಣ್ಯ ಸ್ನಾನ ಮಾಡುತ್ತಿದ್ದಾರೆ.
ನಿನ್ನೆಯಿಂದ ಕುಂಭ ಮೇಳದಲ್ಲಿ ಭಾಗವಹಿಸಿದ್ದ ಅಂಬಾನಿ ಕುಟುಂಬದವರೆಲ್ಲ ಇಂದು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಅಂಬಾನಿಯವರ ತಾಯಿ, ಮುಖೇಶ್ ಅಂಬಾನಿ, ನೀತಾ ಅಂಬಾನಿ, ಅವರ ಮಕ್ಕಳು ಸೊಸೆ, ಮೊಮ್ಮಕ್ಕಳು ಎಲ್ಲರೂ ಪವಿತ್ರ ಸ್ನಾನ ಮಾಡಿದ್ದಾರೆ.
144 ವರ್ಷಕ್ಕೊಮ್ಮೆ ಬರುವ ಈ ಕುಂಭ ಮೇಳದಲ್ಲಿ ಭಾಗಿಯಾಗಲೇಬೇಕೆಂದು 40ಕೋಟಿಗೂ ಹೆಚ್ಚು ಜನ ಈಗಾಗಲೇ ಕುಂಭ ಮೇಳಕ್ಕೆ ಬಂದು ಹೋಗಿದ್ದಾರೆ. ಇನ್ನು ಬರುತ್ತಲೇ ಇದ್ದಾರೆ. ಶಿವರಾತ್ರಿಯ ತನಕವೂ ಜನರಿಗೆ ಅಮೃತಸ್ನಾನದಲ್ಲಿ ಭಾಗವಹಿಸುವ ಅವಕಾಶವಿದೆ. ಬರೀ ಭಾರತದವರಷ್ಟೇ ಅಲ್ಲದೇ, ವಿದೇಶಿಗರು ಕೂಡ ಈ ಕುಂಭ ಮೇಳದಲ್ಲಿ ಭಾಗವಹಿಸಿ, ಪುಣ್ಯ ಸ್ನಾನ ಮಾಡುತ್ತಿದ್ದಾರೆ.