ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಅಮೃತಾ ಅರೋರಾಗೆ ಕೊರೊನಾ ಪಾಸಿಟಿವ್ ಇದ್ದರೂ, ಇಬ್ಬರೂ ಪಾರ್ಟಿ ಅಟೆಂಡ್ ಮಾಡಿದ್ದಾರೆ. ಅಲ್ಲದೇ ಈ ಪಾರ್ಟಿಯಲ್ಲಿ ಭಾಗವಹಿಸಿದವರು ಮತ್ತು ಈ ಮಟಿಯರ ಸಂಪರ್ಕಕ್ಕೆ ಬಂದವರು ತಕ್ಷಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮುಂಬೈ ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ.
ಅಮೃತ ಅರೋರಾ ಮತ್ತು ಮಲೈಕಾ ಅರೋರಾ ಸಹೋದರಿಯರು, ಕರೀನಾ ಕಪೂರ್ ಮತ್ತು ಕರಿಶ್ಮಾ ಕಪೂರ್ ಸಹೋದರಿಯರು ಸೇರಿ ರಿಯಾ ಕಪೂರ್ ಮನೆಗೆ ಕ್ರಿಸ್‌ಮಸ್ ಪಾರ್ಟಿ ಮಾಡಲು ಹೋಗಿದ್ದಾರೆ. ಅದಾದ ಬಳಿಕ ಕರಣ್ ಜೋಹರ್ ಮನೆಗೂ ಕೂಡ ಪಾರ್ಟಿ ಮಾಡಲು ತೆರಳಿದ್ದಾರೆ. ಈ ಪಾರ್ಟಿಯಲ್ಲಿ ಆಲಿಯಾ ಮತ್ತು ಆಕೆಯ ಪ್ರಿಯಕರ ರಣ್ಬೀರ್ ಕಪೂರ್ ಕೂಡ ಆ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಹೀಗಾಗಿ ಇವರಿಗೂ ಕೂಡ ಕೊರೊನಾ ಟೆಸ್ಟ್ ಆಗಬೇಕೆಂದು ಆದೇಶ ಹೊರಡಿಸಲಾಗಿದೆ.
ಇಷ್ಟೇ ಅಲ್ಲದೇ ಕರೀನಾ ಪತಿ ಸೈಫ್ ಅಲಿ ಖಾನ್ ಕೂಡ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ಮುಂಬೈ ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿದ್ದಂತೆ, ನೆಟ್ಟಿಗರು ಕರೀನಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಚನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳಿದ್ದು, ಅವರ ಕಾಳಜಿ ಮಾಡುವುದು ಬಿಟ್ಟು, ಅವರ ಬಗ್ಗೆ ಯೋಚಿಸುವುದು ಬಿಟ್ಟು, ಈಕೆಗೆ ಪಾರ್ಟಿಯೇ ಹೆಚ್ಚಾಯಿತು ಎಂದು ಕಿಡಿ ಕಾರಿದ್ದಾರೆ.
ಕರೀನಾ ಮತ್ತು ಅಮೃತಾ ಕಾರಣದಿಂದ ಕೊರೊನಾ ಕೇಸ್ ಹೆಚ್ಚಾದಲ್ಲಿ ಇಬ್ಬರು ನಟಿಯರ ಮೇಲೆ ಕ್ರಮ ಕೈ ಗೊಳ್ಳುವ ಸಾಧ್ಯತೆ ಇದೆ. 2020ರಲ್ಲಿ ಕೊರೊನಾ ಕೇಸ್ ಅಪರೂಪವಾಗಿದ್ದ ಸಂದರ್ಭದಲ್ಲಿ ಗಾಯಕಿ ಕನ್ನಿಕಾ ಕಪೂರ್ ಲಂಡನ್‌ಗೆ ಹೋಗಿ ಬಂದಿದ್ದರು. ನಂತರ ಅವರಿಗೆ ನೆಗಡಿ ಕೆಮ್ಮು ಶುರುವಾಗಿತ್ತು. ಆದರೂ ಅವರು ತಮ್ಮ ಮನೆಯಲ್ಲಿ ಪಾರ್ಟಿ ಮಾಡಿದ್ದರು. ನಂತರ ಅವರಿಗೆ ಕೊರೊನಾ ಇರುವುದು ಗೊತ್ತಾಗಿ, ಚಿಕಿತ್ಸೆ ನೀಡಲಾಗಿತ್ತು. ಅಲ್ಲದೇ ಆಕೆಯ ಮೇಲೆ ಹಲವು ಜನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.