Saturday, July 27, 2024

Latest Posts

ಸಂಜಯ್ ದತ್ ಜೊತೆ ಸೆಣಸಾಡಲಿದ್ದಾರ ಧ್ರುವ ಸರ್ಜಾ..?

- Advertisement -

www.karnatakatv.net:ಸಂಜಯ್ ದತ್ ಬಾಲಿವುಡ್‌ನ ಸ್ಟಾರ್ ನಟ. ಈಗ ಕೆಜಿಎಫ್ ಸಿನಿಮಾದಲ್ಲಿ ಅಧೀರನಾಗಿ ಮಿಂಚಲಿದ್ದಾರೆ. ಈಗಾಗಲೇ ಅಧೀರನ ಕ್ರೇಜ್ ಮುಗಿಲು ಮುಟ್ಟಿದ್ದು, ಕೆಜಿಎಫ್ ನಲ್ಲಿನ ಸಂಜಯ್ ಅವರ ಲುಕ್ ಬಹಳ ಗಮನಸೆಳೆದಿದೆ. ಸಂಜಯ್ ಅವರ ಅಧೀರ ಪಾತ್ರದ ಡುಬ್ಬಿಂಗ್‌ಕೂಡ ಪೂರ್ಣಗೊಂಡಿದ್ದು ಇನ್ನೇನು ಕೆಲ ತಿಂಗಳಲ್ಲಿ ಚಿತ್ರ ತೆರೆಕಾಣಲಿದೆ.

ಸದ್ಯ ಇದೆಲ್ಲದರ ನಡುವೆ ಮತ್ತೊಂದು ಕನ್ನಡ ಸಿನಿಮಾದಲ್ಲಿ ಸಂಜಯ್ ದತ್ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ದೊಡ್ಡದಾಗಿ ಕೇಳಿ ಬರುತ್ತಿವೆ.
ಧ್ರುವ ಸರ್ಜಾ ಅಭಿನಯದ ಹೊಸ ಚಿತ್ರದಲ್ಲಿ ಸಂಜಯ್ ದತ್ ಅವರನ್ನು ಖಳನಾಯಕನನ್ನಾಗಿ ಆಯ್ಕೆ ಮಾಡಲು ಪ್ಲಾನ್ ನಡೆದಿದೆ. ಆದರೆ ಮಾರ್ಟಿನ್ ಸಿನಿಮಾದಲ್ಲಿ ಅಲ್ಲ. ಧ್ರುವ ಸದ್ಯ ‘ಮಾರ್ಟಿನ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ಬಳಿಕ ಹ್ಯಾಟ್ರಿಕ್ ಡೈರೆಕ್ಟರ್ ಪ್ರೇಮ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ಆ ಸಿನಿಮಾಕ್ಕೆ ಸಂಜಯ್ ದತ್ ಅವರನ್ನು ವಿಲನ್ ಆಗಿ ಕರೆ ತರುಲು ಚಿತ್ರತಂಡ ಚಿಂತನೆ ನಡೆಸಿದೆ.

ತಾವು ನಿರ್ಮಾಣ ಮಾಡುವ ಚಿತ್ರಗಳನ್ನು ಭರ್ಜರಿ ನಿರ್ಮಾಣ ಮಾಡುವುದು ಪ್ರೇಮ್ ಸ್ಟೈಲ್, ಬಾಲಿವುಡ್ ನಟಿಯರು, ಖಳ ನಟರು ಪ್ರೇಮ್ ಚಿತ್ರಗಳಲ್ಲಿ ಸಾಮಾನ್ಯ. ಹಾಗಾಗಿ ಧ್ರುವ ಸರ್ಜಾ ಸಿನಿಮಾಕ್ಕೂ ಸಂಜಯ್ ದತ್ ಅವರನ್ನು ಕರೆತರುವ ಪ್ಲಾನ್ ಅವರೇ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಪ್ರೇಮ್ ಜೊತೆ ಧ್ರುವ ಮಾಡಲಿರುವ ಸಿನಿಮಾಗೆ ನಾಯಕಿ ಕೂಡ ಬಾಲಿವುಡ್‌ನಿಂದಲೇ ಬರಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾದರಿಯಲ್ಲಿ ರಿಲೀಸ್ ಮಾಡಲು ತಿಂಕಿoಗ್ ನಡೆಸಲಾಗುತ್ತಿದೆ, ಹಾಗಾಗಿಯೇ ಬೇರೆ-ಬೇರೆ ಭಾಷೆಗಳ ನಟ-ನಟಿಯರನ್ನು ಸಿನಿಮಾಕ್ಕೆ ಸೆಲೆಕ್ಟ್ ಮಾಡಲು ಪ್ರೇಮ್ ಚಿಂತಿಸಿದ್ದಾರೆ.

ಎಪಿ ಅರ್ಜುನ್ ನಿರ್ದೇಶನ ಮಾಡುತ್ತಿರುವ ‘ಮಾರ್ಟಿನ್’ ಸಿನಿಮಾದಲ್ಲಿ ಧ್ರುವ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಖಡಕ್ ಪಾತ್ರದಲ್ಲಿ ಧ್ರುವ ಸರ್ಜಾ ಕಾಣಿಸಲಿದ್ದು,’ಮಾರ್ಟಿನ್’ ಸಿನಿಮಾಕ್ಕಾಗಿ ಜಿಮ್‌ನಲ್ಲಿ ರ‍್ಕೌಟ್ ಮಾಡುತ್ತಿದ್ದಾರೆ ಧ್ರುವ ಸರ್ಜಾ.

ಒಂದು ಸಿನಿಮಾ ಕಂಪ್ಲೀಟ್ ಆಗಿ ರಿಲೀಸ್ ಆದ ನಂತರವೇ ಮತ್ತೊಂದು ಸಿನಿಮಾ ಬಗ್ಗೆ ತಲೆಕೆಡಿಸಿಕೊಳ್ಳುವ ಧ್ರುವ, ಈ ಬಾರಿ ‘ಮಾರ್ಟಿನ್’ ಸಿನಿಮಾದ ಶೂಟಿಂಗ್ ಬಳಿಕವೇ
ಪ್ರೇಮ್ ನಿರ್ದೇಶನದ ಸಿನಿಮಾಗೆ ಎಂಟ್ರಿ ಕೊಡಲಿದ್ದಾರೆ. ಇನ್ನೂ ಈ ಸಿನಿಮಾವನ್ನು ಕೆವಿಎಲ್ ಪ್ರೋಡಕ್ಷನ್ ಹೌಸ್ ವತಿಯಿಂದ ನಿರ್ಮಾಣ ಮಾಡಲಾಗುತ್ತಿದೆ. ಗ್ರಾಂಡ್‌ಆಗಿ ನಿರ್ಮಾಣ ಮಾಡಲು ಪ್ಲಾನ್‌ಗಳು ನಡೆಯುತ್ತಿದ್ದು, ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡಲಾಗುತ್ತದೆ. ಇನ್ನೂ ನಿರ್ದೇಶಕ ಪ್ರೇಮ್ ‘ಏಕ್ ಲವ್ ಯಾ’ ಸಿನಿಮಾದ ಚಿತ್ರೀಕರಣ ಮುಗಿಸಿ, ರಿಲೀಸ್ ಮಾಡಲು ಎಲ್ಲಾ ರೀತಿಯಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಬಿಡುಗಡೆಯಾದ ಬಳಿಕವೇ ಧ್ರುವ ಸರ್ಜಾ ಜೊತೆಗಿನ ಸಿನಿಮಾದ ಮುಹೂರ್ತ ನಡೆಸಲಿದ್ದಾರೆ. ಕೆಲ ವಿಚಾರಗಳು ಅಂತಿಮವಾದರೆ, ಜನವರಿ ತಿಂಗಳಿನಲ್ಲೆ ಪ್ರೇಮ್-ಧ್ರುವ ಕಾಂಬಿನೇಶನ್ ಸಿನಿಮಾ ಸೆಟ್ಟೇರಲಿದೆ.

- Advertisement -

Latest Posts

Don't Miss