Devotional:
ಸಿದ್ಧಾರ್ಥನಾಗಿ ಜನಿಸಿದ್ದ ಗೌತಮ ಬುದ್ಧ ದಿನಗಳು ಕಳೆದಂತೆ ಸಂಸಾರ, ಸರ್ವಸ್ವವನ್ನು ತೊರೆದು ಜ್ಞಾನವನ್ನು ಹುಡುಕಿಕೊಂಡು ಹೊರಡುತ್ತಾನೆ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ ಈತ ಸರ್ವಜ್ಞಾನಿ. ಬೌದ್ಧ ಧರ್ಮದ ಸಂಸ್ಥಾಪಕನಾದ ಗೌತಮ ಬುದ್ಧ, ಜನರು ತಮ್ಮ ದುಃಖವನ್ನು ಕೊನೆಗೊಳಿಸಿಕೊಳ್ಳಲು ಮಾರ್ಗವನ್ನು ಸೂಚಿಸಿದ್ದಾರೆ.
ದಶಾವತಾರಗಳಲ್ಲಿ ಬುದ್ಧನ ಅವತಾರ ಬಹಳ ವಿಶೇಷವಾಗಿದೆ. ರಾಕ್ಷಸ ಜನಾಂಗದ ಹಿಂಸಾತ್ಮಕ ಪ್ರವೃತ್ತಿಯನ್ನು ನಿರ್ಮೂಲನೆ ಮಾಡಿ, ರಾಕ್ಷಸರು ದೌರ್ಬಲ್ಯವಾದ ಸಮಯದಲ್ಲಿ ಪರಮಾತ್ಮನು ಅವರನ್ನು ಕೊಂದನು. ತಾರಕಾಸುರನ ಮಕ್ಕಳಾದ ವಿದ್ಯುನ್ಮಾಲಿ, ತಾರಕಾಕ್ಷ ,ಕಮಲಾಕ್ಷ ವರಬಲನು ,ಗರ್ವದಿಂದ ದೇವತೆಗಳಿಗೆ ಮತ್ತು ಸಾದು ಜನಾಂಗದವರಿಗೆ ಅನೇಕ ಕಷ್ಟಗಳನ್ನು ಕೊಡುತ್ತಿದ್ದನು .
ಅದನ್ನೆಲ್ಲ ನೋಡಿದ ಬ್ರಹ್ಮದೇವ, ಶ್ರೀ ಮಹಾವಿಷ್ಣುವು ಹಸು ಮತ್ತು ಕರುವಾಗಿ ರಾಕ್ಷಸ ರಾಜ್ಯವನ್ನು ಪ್ರವೇಶಿಸಿದರು ನಂತರ ದಾಹವನ್ನು ತೀರಿಸಿಕೊಳ್ಳಲು ಗೆಹೆಯೊಳಗೆ ನೀರನ್ನು ಕುಡಿಯಲು ಹೋದರು. ಅದನ್ನು ತಾರಕಾಸುರನ ಕುಮಾರರು ನೋಡಿದರು ದಿವ್ಯವಾದ ತೇಜಸ್ಸಿನಿಂದ ಪ್ರಜ್ವಲಿಸುತ್ತಿರುವ ಗೋವುಗಳನ್ನು ಬಂಧಿಸಲು ಅವರು ಆ ಗುಹೆಯೊಳಗೆ ಹೋದರು. ಹಾಗ ಬ್ರಹ್ಮ ಆ ದೊಡ್ಡ ತೊಟ್ಟಿಯಲ್ಲಿದ್ದ ನೀರನ್ನೆಲ್ಲ ಕುಡಿದು ಮಾಯವಾದನು. ಕರುವಾಗಿದ್ದ ವಿಷ್ಣುವು ಅವರ ಮುಂದೆ ಬುದ್ಧನಾಗಿ ಪ್ರತ್ಯಕ್ಷನಾದನು.
ನಡೆದಿರುವ ಈ ಮಾಯೆಯ ಬಗ್ಗೆ ಅವರು ಕೇಳಿದಾಗ, ಬುದ್ದನು ಅವರಿಗೆ ಹೀಗೆ ಉತ್ತರಿಸಿದರು, ಅಹಿಂಸಾ ಮಾರ್ಗದ ಶ್ರೇಷ್ಠತೆಯನ್ನು ಅವರಿಗೆ ತಿಳಿಸಿದರು. ಬುದ್ಧನ ಬೋಧನೆಗಳಿಂದ ಪ್ರಭಾವಿತರಾದ ಅವರು ತಮ್ಮ ಆಕ್ರಮಣಶೀಲತೆಯನ್ನು ಮಿತಗೊಳಿಸಿದರು. ಅವರನ್ನು ಸಂಹರಿಸಲು ಅದೇ ಸಮಯ ಎಂದು ಯೋಚಿಸಿದ ಶ್ರೀ ಮಹಾವಿಷ್ಣು ತನ್ನನ್ನು ಆಯುಧವಾಗಿ ಬಳಸಿಕೊಂಡು ಅವರನ್ನು ಕೊಲ್ಲುವಂತೆ ಶಿವನಿಗೆ ಮಹಾವಿಷ್ಣು ಕೇಳಿದನು. ಹೀಗೆ ಶ್ರೀ ಮಹಾವಿಷ್ಣು ಶಿವನ ಕೈಯಲ್ಲಿ ಅಸ್ತ್ರವಾಗಿ ಲೋಕಕಲ್ಯಾಣಕ್ಕಾಗಿ ಆ ರಾಕ್ಷಸ ಯೋಧರನ್ನು ಸಂಹರಿಸಿದನು.


