Dharwad News: ಧಾರವಾಡ: ಧಾರವಾಡದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಗೆದ್ದರೆ ಕರ್ನಾಟಕವನ್ನು ಎಟಿಎಂ ಮಾಡುತ್ತೆ ಅಂತಾ ಹೇಳಿದ್ವಿ. ಚುನಾವಣೆ ಸಂದರ್ಭದಲ್ಲಿ ಅದು ಈಗ ನಿಜವಾಗಿದೆ. ಈಗ ಐಟಿ ದಾಳಿಯಲ್ಲಿ ಹಣ ಸಿಕ್ಕಿದೆ. ಈ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ರಾಜ್ಯದಲ್ಲಿ ಬರಗಾಲ ಇದೆ. ಆದರೂ ಸರ್ಕಾರ ಹಣ ವಸೂಲಿ ಮಾಡುವುದಕ್ಕೆ ಇಳಿದಿದೆ ಎಂದು ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಬಕಾರ ಇಲಾಖೆ ಬಗ್ಗೆ ಮದ್ಯ ವ್ಯಾಪಾರಿಗಳು ಪತ್ರ ಬರೆದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಹೇಶ್ ಟೆಂಗಿನಕಾಯಿ, ಹತ್ತು ಲಕ್ಷದ ನೋಟಿಫಿಕೇಷ್‌ಗೆ 25 ಲಕ್ಷ ಕೊಡಬೇಕಂತೆ. ಇಂತಹದು ಅಬಕಾರಿ ಇಲಾಖೆಯಲ್ಲಿ ನಡೆದಿದೆ. ಗುತ್ತಿಗೆದಾರರ ಸಂಘದ ಕೆಂಪಯ್ಯ ಅವರು ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಕೇವಲ ಐದು ತಿಂಗಳಿನಲ್ಲಿ ಸರ್ಕಾರದ ಬಗ್ಗೆ ಜನ ಭ್ರಮನಿರಸನ ಗೊಂಡಿದ್ದಾರೆ.
ಗ್ಯಾರಂಟಿಗಳ ಬಗ್ಗೆಯೂ ಯಾವುದೇ ಲೆಕ್ಕವಿಲ್ಲ. ರಾಜ್ಯವನ್ನು ಕತ್ತಲೆ ರಾಜ್ಯ ಮಾಡಿದ್ದಾರೆ. ಬೊಮ್ಮಾಯಿಯವರ ವಿರುದ್ಧ payಸಿಎಂ ಅಭಿಯಾನ ಮಾಡಿದ್ದರು. ಆದರೆ ಆ ಅಭಿಯಾನ ಮಾಡಿದ ಡಿಕೆಶಿಯೇ ಹಾಗೇ ಹೇಳಿದ್ವಿ ಎಂದಿದ್ದರು. ಹೀಗಾಗಿ ಕಾಂಗ್ರೆಸ್ ಯಾವುದೇ ಸಮಸ್ಯೆ ಪರಿಹಾರ ಮಾಡೊರಲ್ಲ. ಅವರು ಸಮಸ್ಯೆಗಳನ್ನು ಹುಟ್ಟಿಸುವವರು ಎಂದು ಕಾಂಗ್ರೆಸ್ ವಿರುದ್ಧ, ಮಹೇಶ್ ಟೆಂಗಿನಕಾಯಿ ವಾಗ್ದಾಳಿ ನಡೆಸಿದ್ದಾರೆ.
ಜಗದೀಶ ಶೆಟ್ಟರ್ ಆರೋಪಗಳ ವಿಚಾರದ ಬಗ್ಗೆ ಮಾತನಾಡಿದ ಮಹೇಶ್, ಜಗದೀಶ ಶೆಟ್ಟರ್‌ಗೆ ನಮ್ಮ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಈಗ ಸಿಕ್ಕಿರೋ 40 ಕೋಟಿ ಬಗ್ಗೆ ಅವರು ಮೊದಲು ಸ್ಪಷ್ಟನೆ ಕೊಡಲಿ. ತಮ್ಮ ಸರ್ಕಾರದ ಅವಧಿಯಲ್ಲಿ ಸಿಕ್ಕಿರೋ ಹಣದ ಬಗ್ಗೆ ಸಮರ್ಥನೆ ಮಾಡಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದ್ದಾರೆ.
BJP Protest; ಚಿತ್ರದುರ್ಗದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ಬೃಹತ್ ಪ್ರತಿಭಟನೆ..!
ಐಟಿ, ಇಡಿ, ಸಿಬಿಐ ಕೇಂದ್ರದ ವ್ಯಾಪ್ತಿಯಲ್ಲಿವೆ: ಅವರು ಮಾಡಿದ್ದೇ ಆಟ ಎಂದ ಲಾಡ್