Dharwad News: ಗ್ರಾಮದಲ್ಲಿನ ಅಕ್ರಮ ಸರಾಯಿ ಮಾರಾಟದಿಂದ ರೋಸಿ ಹೊಗಿದ್ದ ಮಹಿಳಾ ಮಣಿಗಳು ಸ್ವತಃ ತಾವೇ ಫೀಲ್ಡಗೆ ಇಳಿದು, ಇಂದು ಗ್ರಾಮಕ್ಕೆ ಸಪ್ಲೈ ಆಗುತ್ತಿದ್ದ ಸರಾಯಿಯನ್ನು ರೆಡ್ ಹ್ಯಾಂಡಾಗಿ ಹಿಡಿದಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹನಸಿ ಗ್ರಾಮದಲ್ಲಿ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಹನಸಿ ಗ್ರಾಮದಲ್ಲಿ ಅಕ್ರಮ ಸರಾಯಿ ಮಾರಾಟ ಬಲು ಜೋರಾಗಿ ಸಾಗಿದ್ದು, ಇದರ ಕುರಿತು ಹಲವು ಬಾರಿ ಮಹಿಳೆಯರು ಗ್ರಾಮಸ್ಥರು ಸೇರಿ ಇದಕ್ಕೆ ಕಡಿವಾಣ ಹಾಕುವಂತೆ ಗ್ರಾಮ ಪಂಚಾಯತಿ, ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದರಂತೆ.
ಆದರೂ ಕೂಡಾ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಇಂದು ತಾವೇ ಕಾದು ಕುಳಿತು ಬೆಳ್ಳಂ ಬೆಳ್ಳಗೆ ಗ್ರಾಮದ ಮುಖ್ಯ ಬಸ್ ನಿಲ್ದಾಣದ ಬಳಿಯೇ ಅಕ್ರಮ ಸರಾಯಿ ಸಪ್ಲೈ ಮಾಡಲು ಬಂದಿದ್ದ ಬೈಕ ಸಮೇತ ಹಿಡಿದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಸುಮಾರು 25 ಸಾವಿರ ರೂಪಾಯಿ ಮೌಲ್ಯದ ಎಂದು ಹೇಳಲಾಗಿತ್ತಿದೆ. ಸ್ಥಳಕ್ಕೆ ನವಲಗುಂದ ಪೊಲೀಸರನ್ನು ಕರೆಯಿಸಿಕೊಂಡ ಗ್ರಾಮಸ್ಥರು ಹಾಗೂ ಮಹಿಳೆಯರು ಸದ್ಯ ಅಕ್ರಮ ಸರಾಯಿ ಸಪ್ಲೈರ್ ಸೇರಿ ಬಾಕ್ಸ್ ಹಾಗೂ ಬೈಕನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಇನ್ನೂ ಗ್ರಾಮದಲ್ಲಿನ ಅಕ್ರಮ ಸರಾಯಿ ಮಾರಾಟದಿಂದಾಗಿ ಕುಟುಂಬದ ನೆಮ್ಮದಿಯೇ ಹಾಳಾಗಿವೆ. ಗ್ರಾಮದಲ್ಲಿನ ಚಿಕ್ಕ ಚಿಕ್ಕ ಮಕ್ಕಳು ಸಾರಾಯಿ ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುವುದಲ್ಲದೆ ಮನೆಯ ನೆಮ್ಮದಿ ಹಾಳು ಮಾಡುತ್ತಿವೆ. ಹಲವಾರು ಬಾರಿ ಈ ಅಕ್ರಮ ಸರಾಯಿ ತಡೆಯಲು ಮನವಿ ಮಾಡಿದರು ಯಾವುದೇ ಸ್ಪಂದನೆ ಸಿಕ್ಕಿಲ್ಲ.
ಅಧಿಕಾರಿಗಳ ಈ ವರ್ತನೆ ನೋಡಿದ್ದರೆ ಅಕ್ರಮ ಸರಾಯಿ ಮಾರಾಟಕ್ಕೆ ಅಧಿಕಾರಿಗಳೇ ಕುಮ್ಮಕ್ಕು ನೀಡುವ ಸಂಶಯ ಬರುತ್ತಿದೆ. ಹಾಗಾಗಿ ನಾವೇ ನಮ್ಮ ಮಕ್ಕಳ ಹಾಗೂ ಕುಟುಂಬಕೋಸ್ಕರ ಇದನ್ನು ಹಿಡಿಯುವ ಪರಿಸ್ಥಿತಿ ಬಂದಿದೆ. ಸದ್ಯ ಈಗ ಅಕ್ರಮ ಸರಾಯಿಯನ್ನು ನಾವೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೇವೆ.
ಈಗಲಾದರೂ ಪೊಲೀಸರು ಕಠಿಣ ಕ್ರಮ ಕೈಗೊಂಡು ಅಕ್ರಮ ಸರಾಯಿ ಬಂದ ಮಾಡಿಸಬೇಕು ಎಂದು ಒತ್ತಾಯ ಮಾಡಿದ್ದಾರೆ. ಒಂದು ವೇಳೆ ಇದರಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ನವಲಗುಂದ ಶಾಸಕ ಎನ್ ಹೆಚ್ ಕೊನರೆಡ್ಡಿ ಹಾಗೂ ಅಧಿಕಾರಿಗಳ ವಿರುದ್ಧ ಬೀದಿಗೆ ಇಳಿದು ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
‘ಮೋದಿಜಿ ಅವರನ್ನು ಪ್ರಧಾನಿಯನ್ನಾಗಿಸಲು ಕರ್ನಾಟಕದ ಗೆಲುವಿನ ಕಿರೀಟ ಸಮರ್ಪಿಸುವ ಶಪಥ ಮಾಡೋಣ’
ಬಿ.ಕೆ.ಹರಿಪ್ರಸಾದ್ ಮಾನಸಿಕ ಸ್ಥಿತಿ ಸರಿಯಲ್ಲ: ಮಾಜಿ ಡಿಸಿಎಂ ಗೋವಿಂದ ಕಾರಜೋಳ
‘ನನ್ನ ಮೇಲೆ ನಂಬಿಕೆ ಇಟ್ಟು, ನನಗೆ ಈ ಜವಾಬ್ದಾರಿ ವಹಿಸಿದ್ದಕ್ಕೆ, ವಿನಮ್ರ ಕೃತಜ್ಞತೆಗಳು’




