Bollywood news: ನಟಿ ಕಾಜಲ್ ಅಗರ್ವಾಲ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳು ಬಂದ ವ್ಯಕ್ತಿ, ಆಕೆಯೊಂದಿಗೆ ಅಸಭ್ಯ ವರ್ತನೆ ಮಾಡಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಶಾಪಿಂಗ್ ಮಾಲ್ ಉದ್ಘಾಟನೆಗೆಂದು ಕಾಜಲ್ ಅಗರ್ವಾಲ್ ತೆರಳಿದ್ದು, ಉದ್ಘಾಟನೆ ನೆರವೇರಿಸಿ, ಶಾಪಿಂಗ್ ಮಾಲ್‌ನಲ್ಲಿ ರೌಂಡ್ ಹಾಕಿದ್ದಾರೆ. ಈ ವೇಳೆ ಅಭಿಮಾನಿಗಳು ನಟಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ನಟಿ ಕೂಡ ಖುಷಿಯಿಂದ ಸೆಲ್ಫಿ ನೀಡುತ್ತಿದ್ದರು.
ಆದರೆ ಇದೇ ವೇಳೆ ವ್ಯಕ್ತಿಯೋರ್ವ ಕಾಜಲ್ ಜೊತೆ ಸೆಲ್ಫಿ ಕೇಳಲು ಬಂದು, ಆಕೆಯ ಸೊಂಟಕ್ಕೆ ಕೈ ಹಾಕಿ, ಪೋಸ್ ಕೊಡಲು ಹೋಗಿದ್ದಾನೆ. ಇದನ್ನು ನೋಡಿ ಹೌಹಾರಿದ ನಟಿ ಮುಜುಗರಕ್ಕೊಳಗಾಗಿದ್ದಾರೆ. ಕೂಡಲೇ ಅಲ್ಲೇ ಇದ್ದ ಬಾಡಿಗಾರ್ಡ್‌ಗಳು ಅಭಿಮಾನಿಯನ್ನು ಬದಿಗೆ ಸರಿಸಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು, ವ್ಯಕ್ತಿಯ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಈ ತಿಂಗಳು ಕಳೆದ ಮೇಲೆ ಶೆಟ್ಟರ್ ಅವರಿಂದ ಪಶ್ಚಾತಾಪದ ಹೇಳಿಕೆ ಹೊರಬರಲಿದೆ ಕಾದುನೋಡಿ: ಡಿಸಿಎಂ ಡಿಕೆಶಿ
ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿ ಕಾಲದಲ್ಲಿ ಬಾಂಬ್ ಬ್ಲಾಸ್ಟ್ ಆಗಿಲ್ಲವೇ..?: ಸಂತೋಷ್ ಲಾಡ್ ಪ್ರಶ್ನೆ
ಬಿಜೆಪಿ ಅವರು ದ್ವೇಷ ಪ್ರೇಮಿಗಳು, ನಾವು ದೇಶ ಪ್ರೇಮಿಗಳು: ಸಚಿವ ರಾಮಲಿಂಗಾರೆಡ್ಡಿ