ಮುತ್ತೂಟ್ ಫೈನಾನ್ಸ್ ಗ್ರಾಹಕರಿಗೆ 1ವರೆ ಕೋಟಿ ಪಂಗನಾಮ ಹಾಕಿದ ಮ್ಯಾನೇಜರ್ ಅಂದರ್

Dharwad News: ಧಾರವಾಡ: ಮುತ್ತೂಟ್ ಫೈನಾನ್ಸ್‌ನಲ್ಲಿ ಚಿನ್ನ ಅಡವಿಟ್ಟು, ಅದರಿಂದ ಸಿಗುವ ಹಣವನ್ನು ತಮ್ಮ ಕಷ್ಟಕಾಲಕ್ಕೆ ಬಳಸುವ ಜನ ಹಲವರಿದ್ದಾರೆ. ಆದರೆ ನೀವು ಇನ್ನು ಮುಂದೆ ಮುತ್ತೂಟ್ ಫೈನಾನ್ಸ್‌ನಲ್ಲಿ ಆಭರಣವನ್ನು ಅಡವಿಡುವಾಗ ಎಚ್ಚರಿಕೆಯಿಂದ ಇರಬೇಕು.

ಏಕೆಂದರೆ, ಧಾರವಾಡದ ಟಿಪ್ಪು ಸರ್ಕಲ್ ಬಳಿ ಇರುವ ಮುತ್ತೂಟ್ ಫೈನಾನ್ಸ್‌ನಲ್ಲಿ ಗೋಡೆಯೇ ಎದ್ದು ಹೊಲ ಮೇಯ್ದಂತಾಗಿದೆ. ಏಕೆಂದರೆ ಇಲ್ಲಿನ ಮ್ಯಾನೇಜರ್ ಸುಮಾರು ಒಂದೂವರೆ ಕೋಟಿಗೂ ಹೆಚ್ಚು ವಂಚನೆ ಮಾಡಿದ್ದಾರೆ. ಮೂತ್ತೂಟ್ ಫೈನಾನ್ಸ್ ಮ್ಯಾನೇಜರ್ ಮಹ್ಮದ್ ಯಾಸಿನ್ ಚಾಂದಖಾನ್ ಮತ್ತು ಅವನ ಆಪ್ತ ಗ್ರಾಹಕರಿಂದ ಪೈನಾನ್ಸ್ ಕಂಪನಿಗೆ ವಂಚನೆ ಮಾಡಲಾಗಿದೆ.

ಮೂತ್ತೂಟ್ ಪೈನಾನ್ಸ ಕಂಪನಿಯ ವಲಯ ಮುಖ್ಯಸ್ಥ ಪ್ರಸನ್ನಕುಮಾರ್ ಎಂಬುವವರು ಈ ಬಗ್ಗೆ ದೂರು ನೀಡಿದ್ದು, ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾದ ಬಳಿಕ, ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇನ್ನು ಮ್ಯಾನೇಜರ್ ಮಾಡಿರುವ ಮೋಸವಾದರೂ ಏನು ಎಂದರೆ, ಫೈನಾನ್ಸ್ ಗೋಲ್ಡ್ ಹರಾಜು ಮಾಡಲಾಗುವುದು ಎಂದು ಸುಳ್ಳು ಹೇಳಿ, 14 ಜನರಿಂದ 65 ಲಕ್ಷ ಹಣವನ್ನು ಡಿಪಾಸಿಟ್ ಮಾಡಿಸಿಕೊಳ್ಳಲಾಗಿದೆ. ಬಳಿಕ ಎಲ್ಲರಿಗೂ ತಿಂಗಳಿಗೆ 20% ಬಡ್ಡಿ ಹಣವನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ಅಲ್ಲದೇ, ಹಣ ಕಟ್ಟಿಸಿಕೊಂಡಿದ್ದಕಕ್ಕೆ, ಮುತ್ತೂಟ್ ಫೈನಾನ್ಸ್ ಕಂಪನಿಯ ಹೆಸರಿನ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ.

ಸದ್ಯ ಎರಡು ಸ್ಕೀಮ್‌ನಲ್ಲಿ ಒಂದೂವರೆ ಕೋಟಿ ಹಣವನ್ನು ಮ್ಯಾಾನೇಜರ್ ವಂಚನೆ ಮಾಡಿದ್ದು, ಮ್ಯಾನೇಜರ್ ಮಹ್ಮದಯಾಸಿನ್ ಚಾಂದಖಾನ್, ಗ್ರಾಹಕರಾದ ಮನ್ಸೂರ ಟಿನೆವಾಲೆ, ನೇಹಾ ನಬ್ಬುವಾಲೆ, ಶಾಹಿನ್ ಗಾಣಗಾಪೂರ, ನಾಲ್ವರನ್ನ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.

About The Author