ಕರ್ನಾಟಕ ಟಿವಿ ಮಂಡ್ಯ : ಕೊರೋನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಮಂಡ್ಯ ಯುವಕನ ವಿನೂತನ ಪ್ರಯತ್ನ ಮಾಡಿದ್ದಾನೆ. ಮಂಡ್ಯ ಜಿಲ್ಲೆಯಲ್ಲಿ ಮಂಡ್ಯ ಜಿಲ್ಲಾಡಳಿತ ಸಹಕಾರದೊಂದಿಗೆ ಕಾವೇರಿ ಹೋಂ ನೀಡ್ಸ್ ರವರಿಂದ ಮನೆ ಬಾಗಿಲಿಗೆ ದಿನಬಳಕೆ ವಸ್ತುಗಳ ಸೇವೆ
ಪ್ರಾರಮಭವಾಗಿದೆ. ಇದಲ್ಲದೆ ರೈತರ ಬೆಳೆಗಳನ್ನು ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಕಲ್ಪಿಸಲು ಸಹಾಯವಾಣಿ ಸಹ ಶುರು ಮಾಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಮಂಡ್ಯ ನಗರದ ಚೇತನ್ ರಾಮಚಂದ್ರ ಎನ್ನುವ ಯುವಕ ಮನೆ ಬಾಗಿಲಿಗೆ ದಿನಬಳಕೆ ವಸ್ತುಗಳು, ಹಣ್ಣು ತರಕಾರಿ,ಹಾಗೂ ಔಷಧಿಗಳನ್ನು ಮನೆ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ.
ಈ ಆ್ಯಪ್ ಅನ್ನು ಗೂಗಲ್ ಪ್ಲೇಸ್ಟೋರ್ ನಲ್ಲಿ: https://play.google.com/store/apps/details?id=com.app.mandya ಕ್ರೋಮ್ನಲ್ಲಿ bit.ly/khnapp ಗೂಗಲ್ನಲ್ಲಿ: https://bit.ly/khnapp ವಾಟ್ಸಾಪ್ ನಲ್ಲಿ:7619240029 / 761940039 ಇವುಗಳ ಮುಖಾಂತರ ನಾಗರಿಕರು ಸೇವೆಯನ್ನು ಪಡೆದುಕೊಳ್ಳಬಹುದು.
ಈ ಸೇವೆಯನ್ನು ಬಳಸಿಕೊಳ್ಳುವುದರಿಂದ ಜನರು ಮನೆಯಿಂದ ಹೊರಗೆ ಬಾರದೇ ಇರುವಲ್ಲಿಯೇ ಸೇವೆಗಳನ್ನು ಪಡೆದುಕೊಳ್ಳಬಹುದು ಇವರು ಮಾರಾಟ ಮಾಡುವ ದಿನಸಿ ಧಾನ್ಯಗಳು ಉತ್ತಮ ಗುಣಮಟ್ಟದ್ದಾಗಿದ್ದು ತಾಜಾ ಹಣ್ಣು ತರಕಾರಿಗಳನ್ನು ರೈತರಿಂದ ನೇರ ಖರೀದಿ ಮಾಡಿ ಜಿಲ್ಲಾ ಹಾಪ್ ಕಾಮ್ಸ್ ನಿಗದಿ ಮಾಡಿರುವ ದರದಲ್ಲಿ ಮನೆ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ ಹಾಗೂ ರೈತರು ಬೆಳೆದ ಬೆಲೆಗಳಿಗೆ ಮಾರಾಟ ಮಾಡಲು ಸೂಕ್ತ ಮಾರುಕಟ್ಟೆಗಾಗಿ ಸಹಾಯವಾಣಿ : 9916612153 ನಂಬರಿಗೆ ಕರೆ ಮಾಡಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ನೀಡಿದರೆ ಉತ್ತಮ ಮಾರುಕಟ್ಟೆ ಹಾಗೂ ಅಗತ್ಯ ಇರುವ ಕಡೆ ಸರಬರಾಜು ಮಾಡಲು ಸೂಕ್ತ ಮಾರ್ಗದರ್ಶನ ನೀಡಲಾಗುವುದು..
ಪ್ರವೀಣ್ ಕುಮಾರ್ ಜಿ.ಟಿ, ಕರ್ನಾಟಕ ಟಿವಿ, ಮಂಡ್ಯ