Wednesday, July 2, 2025

Latest Posts

ಫೇಸ್ ಬುಕ್ ಪ್ರೀತಿ ನಂತರ ಮದುವೆ ಇದೀಗ ಆತ್ಮಹತ್ಯೆ

- Advertisement -

ಮಂಡ್ಯ : ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ದಂಪತಿಯ ಜಗಳ ಸಾವಿನಲ್ಲಿ ಅಂತ್ಯವಾಗಿದೆ.. ಅಂಜು (19) ಆದಿತ್ಯ (21) ಇಬ್ಬರು ಮನಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ರು. ಇಬ್ಬರಿಗೂ ಇದೀಗ 14 ತಿಂಗಳ ಮುದ್ದಾದ ಮಗುವಿದೆ.. ಮದುವೆಯ ಹೊಸದರಲ್ಲಿ ಚೆನ್ನಾಗಿದ್ದ ದಾಂಪತ್ಯ ನಂತರ ಪತ್ನಿ ಬಳಿ ಹಣ ತರುವಂತೆ ಆದಿತ್ಯ ಪೀಡಿಸುತ್ತಿದ್ದನಂತೆ.. ನಿನ್ನೆ ಮಧ್ಯಾಹ್ನ ಅಂಜು ಆದಿತ್ಯನೊಂದಿಗೆ ಜಗಳವಾಡಿಕೊಂಡಿದ್ರು. ಜಗಳವಾಡಿದ ನಂತರ ಆದಿತ್ಯ ಮಗುವಿಗೆ ಹಾಲು ಹಾಗೂ ದಿನಸಿ ವಸ್ತುಗಳನ್ನು ತರಲು ಹೊರ ಹೋಗಿದ್ದಾಗ ಅಂಜು ಮನೆಯಲ್ಲಿಯೇ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ…

ನಾಗಮಂಗಲ ಡಿವೈಎಸ್ ಪಿ ಕೆ.ಬಿ.ವಿಶ್ವನಾಥ, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಮತ್ತು ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಸ್ಥಳಕ್ಕೆ ಭೇಟಿ ನೀಡಿ ಆದಿತ್ಯನನ್ನು ಬಂಧಿಸಿ ಅಂಜು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಇಂದು ಮೃತರ ವಾರಸುದಾರರಿಗೆ ಒಪ್ಪಿಸಿದ್ದಾರೆ…

ಕೃಷ್ಣರಾಜನಗರ ತಾಲ್ಲೂಕಿನ ಮಿರ್ಲೆ ಗ್ರಾಮದ ಅಂಜುವನ್ನು ಕೆ.ಆರ್.ಪೇಟೆ ತಾಲ್ಲೂಕಿನ ಕುಪ್ಪಳ್ಳಿ ಗ್ರಾಮದ ಆದಿತ್ಯ ಫೇಸ್ ಬುಕ್ ನಲ್ಲಿ ಪರಿಚಯವಾಗಿ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು… ಪ್ರೇಮ ವಿವಾಹವು ದುರಂತದಲ್ಲಿ ಅಂತ್ಯಗೊಂಡಿದ್ದು ವಿಪರ್ಯಾಸವಾಗಿದೆ.. ನಾಗಮಂಗಲ  ಡಿವೈಎಸ್ ಪಿ ಕೆ.ಬಿ.ವಿಶ್ವನಾಥ ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ…

https://www.youtube.com/watch?v=YQLM7MJ5qHA

ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ

https://www.youtube.com/watch?v=-V268eq9Hig
- Advertisement -

Latest Posts

Don't Miss